ಕೃಷಿ ಪರಿಕರ ಮಾರಾಟಗಾರರ ಸಮ್ಮೇಳನ 14 ರಂದು

 

ಕಲಬುರಗಿ ಫೆ 12: ಕರ್ನಾಟಕ ರಾಜ್ಯ ಕೃಷಿ ಪರಿಕರಗಳ ಮಾರಾಟಗಾರರ ಮೊದಲ ರಾಜ್ಯ ಸಮ್ಮೇಳನ ಫೆಬ್ರವರಿ 14 ರಂದು ಮಧ್ಯಾಹ್ನ 12.30 ಕ್ಕೆ ನಗರದ ನೆಹರು ಗಂಜ್‍ನ ಆಹಾರ ಧಾನ್ಯ ಬೀಜ ವ್ಯಾಪಾರಿಗಳ ಸಂಘದ ಸಭಾಭವನದಲ್ಲಿ ನಡೆಯಲಿದೆ ಎಂದು ಗುಲಬರ್ಗ ಜಿಲ್ಲಾ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ ತಳ್ಳಳ್ಳಿ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮ್ಮೇಳನವನ್ನು ನವದೆಹಲಿಯ ಅಖಿಲಭಾರತ ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷರಾದ ಮನಮೋಹನ ಕಲಂತ್ರಿ ಉದ್ಘಾಟಿಸುವರು.ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸಲಹಾ ಸಮಿತಿ ಸದಸ್ಯರಾದ ಸತ್ಯನಾರಾಯಣ ಕಸಟ, ಪ್ರಭು ನಡಕಟ್ಟಿ, ತೆಲಂಗಾಣ ರಾಜ್ಯಾಧ್ಯಕ್ಷ ಮುನಿಂದರ ಗೌರಿಶೆಟ್ಟಿ ಆಗಮಿಸುವರು. ಜಂಟಿ ಕೃಷಿ ನಿರ್ದೇಶಕ ರತಿವಂತ ಸುಗೂರ ಸೇರಿದಂತೆ ಕೃಷಿ ಅಧಿಕಾರಿಗಳು ಅತಿಥಿಗಳಾಗಿ ಭಾಗವಹಿಸುವರು. ಕಾರ್ಯಕ್ರಮದಲ್ಲಿ 5 ಜನ ಪ್ರಗತಿಪರ ರೈತರನ್ನು ಸನ್ಮಾನಿಸಲಾಗುವದು .ರಾಜ್ಯದ ಸುಮಾರು 1000 ಜನಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸುವರು ಎಂದು ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ಬಸವರಾಜ ಮಂಗಲಗಿ, ಬಸಣ್ಣಗೌಡ ಮಾಲಿ ಪಾಟೀಲ,ಬಸನಗೌಡ ಮರಕಲ್ ,ದೇವಾನಂದ ಪಾಟೀಲ ಸೇರಿದಂತೆ ಹಲವರಿದ್ದರು..

Leave a Comment