ಕೃತಕ ಕುಂಕುಮ ಅಪಾಯಕಾರಿ

ಭಾರತೀಯ ಸಂಸ್ಕೃತಿಯಲ್ಲಿ ಹಣೆಯ ಮೇಲಿನ ಸಿಂಧೂರ ಅಥವಾ ಕುಂಕುಮ ಇಟ್ಟುಕೊಳ್ಳುವುದು ಭವ್ಯ ಪರಂಪರೆ ಜೊತೆಗೆ ಇದು ಮಹಿಳೆಯರ ಸೌಭಾಗ್ಯದ ಪ್ರತೀಕವಾಗಿದೆ.

ಹಿಂದು ಪುರಾಣದ ಪ್ರಕಾರ ಪತಿಯ ಉತ್ತಮ ಆರೋಗ್ಯ ಮತ್ತು ಆಯಸ್ಸಿಗಾಗಿ ಪತ್ನಿ ತನ್ನ ಹಣೆ ಮತ್ತು ಬೈತಲೆಯಲ್ಲಿ ಕುಂಕುಮ ಧರಿಸುತ್ತಾಳೆ. ಅದು ಏನೇ ಇರಲಿ ಸಂಸ್ಕೃತಿಗೂ ಮಿಗಿಲಾಗಿ, ಧಾರ್ಮಿಕ ಕಾರಣದ ಹೊರತಾಗಿ ಆರೋಗ್ಯವರ್ಧಕ ಕಾರಣಗಳಿವೆ. ಹಣೆಯ ಮಧ್ಯೆ ಎರಡು ಕಣ್ಣುಗಳ ನಡುವಣ ಭಾಗದಲ್ಲಿರುವ ಅಜ್ಞ ಚಕ್ರದ ಭಾಗದಲ್ಲಿ ಕೆಂಪು ಕುಂಕುಮದ ಇರುವಿಕೆ ಕೆಲವರು ವಿಘ್ನಗಳಿಂದ ರಕ್ಷಣೆ ಸಿಗುತ್ತದೆ ಎಂದು ಹೇಳಲಾಗುತ್ತದೆ.

sindooram-1

ಹಣೆಯ ಮೇಲೆ ಇಡುವ ಕುಂಕುಮ ಕೃತಕವಾಗಿದ್ದರೆ ಅದು ಅನಾರೋಗ್ಯಕ್ಕೆ ದಾರಿಯಾಗಬಹುದು. ಹಾಗಾಗಿ ನೈಸರ್ಗಿಕವಾಗಿ ಅಂದರೆ, ಅರಿಶಿನಕೊಂಬು ಹಾಗೂ ಸುಣ್ಣ ಹಾಗೂ ಇತರ ಗಿಡಮೂಲಿಕೆ ಬಳಸಿ ತಯಾರಿಸಲಾಗುತ್ತದೆ. ಅರಿಶಿಣದ ಆರೋಗ್ಯಕರ ಗುಣಗಳು ಮಾನಸಿಕ ಒತ್ತಡದಿಂದ ಹೊರಬರಲು ನೆರವಾಗುತ್ತದೆ. ಅಲ್ಲದೆ ಕುಂಕುಮ ಮೆದುಳನ್ನು ಸದಾ ಸಕ್ರಿಯ ಮತ್ತು ಜಾಗೃತ ಸ್ಥಿತಿಯಲ್ಲಿರಿಸಲು ನೆರವಾಗುತ್ತದೆ.

ಕೃತಕ ಕುಂಕುಮದ ಹಾವಳಿ

ಕೃತಕ ಕುಂಕುಮದಲ್ಲಿ ಸೀಸ, ಪಾದರಸಗಳನ್ನು ಬೆರೆಸಿ, ಅಪ್ಪಟ ಹೊಳೆಯುವ ಬಂಗಾರದ ಪುಡಿಯಂತೆ ಮಾಡಲಾಗುತ್ತದೆ, ಇದು ಅಪಾಯಕಾರಿ. ಈ ಕೃತಕ ಕುಂಕುಮ ಧಾರಣೆಯಿಂದ ಚರ್ಮದಲ್ಲಿ ಗುಳ್ಳೆ ಏಳುವುದು, ತುರಿಕೆ, ಕೂದಲು ಉದುರುವ ಸಾಧ್ಯತೆ ಇದೆ. ರಾಸಾಯನಿಕವಾದ ಸಲ್ಫೇಟ್ ಚರ್ಮದ ಕ್ಯಾನ್ಸರ್ ಎದುರಾಗಲು ಕಾರಣವಾಗಬಹುದು.

hindu-tradition-pasupu-kumkuma-m-11

ಒಂದು ವೇಳೆ ಊಟ ಮಾಡುವಾಗ ಒಂದು ಚಿಟಿಕೆಯಷ್ಟು ಈ ಕುಂಕುಮದ ಪುಡಿ ಊಟದ ತಟ್ಟೆಗೆ ಬಿದ್ದು ಆಹಾರದಲ್ಲಿ ಹೊಟ್ಟೆಗೆ ಸೇರಿದರೆ ಅದು ಅನಾರೋಗ್ಯಕ್ಕೆ ಕಾರಣವಾಗಬಹುದು.

ಕೆಲವು ಉತ್ಪಾದಕರು ಕುಂಕುಸಕ್ಕೆ ಗಾಢ ಬಣ್ಣ ಬರಲು ಹಾಗೂ ಹೊಳೆಯುವಂತೆ ಕಾರಣವಾಗಲು ಸೀಸದ ಪೆಟ್ರಾಕ್ಸೈಡ್ ಬಳಸುತ್ತಾರೆ. ಹಾಗಾಗಿ ಕೃತಕ ಕುಂಕುಮಗಳಿಗೆ ಮನ ಸೋಲದೆ ಗೊತ್ತಿರುವ ಅಂಗಡಿಗಳಿಂದಲೇ ಕುಂಕುಮ ಖರೀದಿ ಒಳ್ಳೆಯದು.

Leave a Comment