ಕೂಲಿ ನಂಬರ್ ಒನ್ ಚಿತ್ರದ ರಿಮೇಕ್- ಧವನ್

ಮುಂಬೈ, ಏ 16 – ಬಾಲಿವುಡ್ ಇಂಟರ್ನೆಟ್ ನಂಬರ್ ಒನ್ ನಿರ್ದೇಶಕ ಡೆವಿಡ್ ಧವನ್ ತಮ್ಮ ಸೂಪರ್ ಹಿಟ್ “ಕೂಲಿ ನಂಬರ್ ಒನ್” ಚಿತ್ರದ ರಿಮೇಕ್ ಮಾಡಲು ಮುಂದಾಗಿದ್ದಾರೆ.

ಡೆವಿಡ್ ಧವನ್ ಅವರು ಗೋವಿಂದಾ ಹಾಗೂ ಕರಿಷ್ಮಾ ಕಪೂರ್ ಅಭಿನಯದ ಸೂಪರ್ ಹಿಟ್ “ಕೂಲಿ ನಂಬರ್ ಒನ್” ಚಿತ್ರವನ್ನು ರಿಮೇಕ್ ಮಾಡಲು ಹೊರಟ್ಟಿದ್ದು, ಈ ಚಿತ್ರದಲ್ಲಿ ವರುಣ್ ಧವನ್ ಹಾಗೂ ಸಾರಾ ಅಲಿ ಖಾನ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ಈ ಚಿತ್ರದಲ್ಲಿ “ಕೂಲಿ ನಂಬರ್ ಒನ್” ಚಿತ್ರದ ಒರಿಜಿನಲ್ ಹಾಡುಗಳನ್ನು ಸೇರಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ “ಹುಸ್ನ್ ಹೈ ಸುಹಾನಾ” ಹಾಗೂ “ಮೈ ತೋ ರಾಸ್ತೆ ಸೆ ಜಾ ರಹಾ ಥಾ”  ಹಾಡುಗಳು ಮತ್ತೊಮ್ಮೆ ಪ್ರೇಕ್ಷಕರ ಕಿವಿಗೆ ಬೀಳಲಿವೆ.

ಸದ್ಯ, ವರುಣ್ ತಮ್ಮ ಮುಂಬರುವ “ಕಲಂಕ್” ಚಿತ್ರದ ಪ್ರಮೋಷನ್ ನಲ್ಲಿ ಬಿಜಿಯಾಗಿದ್ದು, ಏಪ್ರಿಲ್ 17ರಂದು ತೆರೆ ಕಾಣಲಿದೆ. ಇನ್ನೊಂದೆಡೆ ಸಾರಾ ಅಲಿ ಖಾನ್, “ಲವ್ ಆಜಕಲ್” ಚಿತ್ರದ ಎರಡನೇ ಭಾಗದಲ್ಲಿ ಕಾರ್ತಿಕ್ ಆರ್ಯನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.

 

Leave a Comment