ಕೂಲಿಕಾರರ ಮೇಲೆ ಹಲ್ಲೆ; ಕ್ರಮಕ್ಕೆ ಆಗ್ರಹ

ಜಗಳೂರು.ಆ.21; ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆಯಲ್ಲಿ ಹೂಳೆತ್ತುವ ಕೂಲಿಕಾರರ ಮೇಲೆ ಪ್ರಬಲ ವ್ಯಕ್ತಿಗಳು ಹಲ್ಲೆ ನಡೆಸಿದ ಹಿನ್ನಲೆಯಲ್ಲಿ ನಾಲ್ವರಿಗೆ ತೀವ್ರ ಪೆಟ್ಟು ಬಿದ್ದು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲೂಕಿನ ಗುರುಸಿದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲೆಮಾಚಿಕೆರೆ ಗ್ರಾಮದ ಕೆರೆಯಲ್ಲಿ ಕಳೆದ 15 ದಿನಗಳಿಂದ ಗ್ರಾಪಂ ವತಿಯಿಂದ ನರೇಗಾ ಯೋಜನೆಯಡಿ 3 ಲಕ್ಷ ಅನುದಾನದಡಿ ಕೆರೆ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿದ್ದು ಸುಮಾರು 80ಕ್ಕೂ ಹೆಚ್ಚು ಮಂದಿ ಕೂಲಿಕಾರರು ಕೆಲಸ ಮಾಡುವಾಗ ಗ್ರಾಮದ ಕೆಲವರು ಟ್ರಾö್ಯಕ್ಟರ್‍ಗಳಲ್ಲಿ ಮಣ್ಣು ಸಾಗಿಸುವ ವಿಚಾರ ಸೇರಿದಂತೆ ನಾಲ್ಕಾರು ಟ್ರಾö್ಯಕ್ಟರ್‍ಗಳು ಮಣ್ಣು ತೆಗೆದುಕೊಂಡು ಹೋಗಲು ಗ್ರಾಪಂ ಸದಸ್ಯರ ಬೆಂಬಲಿಗರು ಕೂಲಿಕಾರರ ಬದಲಾಗಿ ಜೆಸಿಬಿಯಲ್ಲಿ ಕೆಲಸ ಮಾಡಿಸುವುದಾಗಿ ಹೇಳಿದಾಗ ಜೆಸಿಬಿಯಿಂದ ಕಾಮಗಾರಿ ನಡೆಸುವುದು ಬೇಡ ಕೂಲಿಕಾರರ ಕೈಗೆ ಕೆಲಸ ನೀಡುವಂತೆ ಜಗಳ ನಡೆದು ಹಲ್ಲೆ ನಡೆದಾಗ ನಾಲ್ಕು ಜನ ಕೂಲಿಕಾರರಿಗೆ ಪೆಟ್ಟು ಬಿದ್ದಿದ್ದು ಕೂಲಿಕಾರರಾದ ಸುಮ, ಕರಿಬಸವನಗೌಡ, ಚನ್ನಬಸಪ್ಪ, ವಿನೋದಮ್ಮ ಇವರುಗಳು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಎರಡು ಟ್ರಾö್ಯಕ್ಟರ್‍ಗಳಲ್ಲಿ ರೊಚ್ಚಿಗೆದ್ದ ಸುಮಾರು 20 ರಿಂದ 30 ಮಂದಿ ಕೂಲಿಕಾರರು ಪೊಲೀಸ್ ಠಾಣೆಗೆ ಬಂದು ಹಲ್ಲೆ ನಡೆಸಿದವರನ್ನು ಕೂಡಲೇ ಬಂಧಿಸುವಂತೆ 8 ಮಂದಿಯ ಮೇಲೆ ದೂರು ದಾಖಲಿಸಿ ನಂತರ ತಾಪಂ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ನ್ಯಾಯ ದೊರಕಿಸಿ ಕೊಡುವಂತೆ ಒತ್ತಾಯಿಸಿದರು.

Leave a Comment