ಕುಸ್ತಿ ಸ್ಪರ್ಧೆಯಲ್ಲಿ ಶಿವಾಜಿ ಕಾಲೇಜ್ ಸಾಧನೆ..!

ಧಾರವಾಡ ನ.೫- ಮರಾಠಾ ವಿಧ್ಯಾ ಪ್ರಸಾರಕ ಮಂಡಳದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ ಧಾರವಾಡ. ಇತ್ತೀಚೆಗೆ ನಡೆದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ ದಾಂಡೆಲಿ(ಉ.ಕ.) ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಏಕ ವಲಯ ಅಂತರ ಕಾಲೇಜು ಪುರುಷರ ಕುಸ್ತಿ ಸ್ಪರ್ಧೇಯಲ್ಲಿ ೭೪ ಕೆ.ಜಿ. ಫ್ರೀ ಸ್ಟೈಲ್ ವಿಭಾಗದಲ್ಲಿ ಬಿ.ಎ. ಅಂತಿಮ ವರ್ಷದಲ್ಲಿ ಓದುತ್ತಿರುವ ಬಸವಂತಪ್ಪ ಬಾವಕ್ಕನವರ ಪ್ರಥಮ ಸ್ಥಾನ. ೭೦ ಕೆ.ಜಿ. ಪ್ರೀಸ್ಟೈಲ್‌ದಲ್ಲಿ  ಬಿ.ಎ. ಪ್ರಥಮ ವರ್ಷದ ಅನಿಲ ಧಳವಾಯಿ ಪ್ರಥಮ ಸ್ಥಾನ, ೬೭ ಕೆ.ಜಿ. ಗ್ರೀಕೊರೋಮನ ಕುಸ್ತಿಯಲ್ಲಿ ವಿನಾಯಕ ಸಂಕುಚಿ ಪ್ರಥಮ ಸ್ಥಾನ, ೬೩ ಕೆ.ಜಿ. ಗ್ರೀಕೊರೋಮನ್ ಕುಸ್ತಿಯಲ್ಲಿ ಈಶ್ವರ ಬಿ. ತೃತಿಯ ಸ್ಥಾನ ಪಡೆದು ಈ ಸಂಸ್ಥೆಗೆ ಕೀರ್ತಿ ತಂದ್ದಿದ್ದಾರೆ. ಈ ಸಂಸ್ಥೆಯ ಸುಧಾರಣಾ ಸಮಿತಿಯ ಅಧ್ಯಕ್ಷರಾದ   ನವೀನ ಕದಂ ಹಾಗೂ ಗೌರವ ಕಾರ್ಯದರ್ಶಿಗಳಾದ  ವಿಜಯ ಆರ್. ಭೋಸಲೆ, ಕಾರ್ಯಧ್ಯಕ್ಷರಾದ  ನಾರಾಯಣ ಹುಬ್ಬಳ್ಳಿ ಹಾಗೂ ಅಧ್ಯಕ್ಷರಾದ  ಮಂಜುನಾಥ ಕದಂ ಹಾಗೂ ಕಾಲೇಜಿನ ಪ್ರಾಚಾರ್ಯರಾದ  ಎಮ.ಎಸ್. ಗಾಣಿಗೇರ  ಹಾಗೂ ದೈಹಿಕ ಶಿಕ್ಷಣ ನಿರ್ದೆಶಕರಾದ ವಿ.ಎಸ್.ದವಣೆ ಹಾಗೂ  ಎಲ್ಲ ಆಡಳಿತ ಮಂಡಳಿ ಸದಸ್ಯರು ಮತ್ತು ಎಲ್ಲ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದರು.

Leave a Comment