ಕುಸ್ತಿಯಲ್ಲಿ ಚಿನ್ನ ಗೆದ್ದ ಬಜರಂಗ್

ಬುಡಾಪೆಸ್ಟ್, ಅ.೨೧-ಹಂಗೇರಿ ರಾಜಧಾನಿ ಬುಡಾಪೆಸ್ಟ್‌ಯಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತದ ಕುವರ ಬಜರಂಗ್ ಪೂನಿಯಾ ಚಿನ್ನದ ಪದಕ ಗಿಟ್ಟಿಸಿಕೊಂಡಿದ್ದಾರೆ.

ಬುಡಾಪೆಸ್ಟ್‌ನಲ್ಲಿ ನಿನ್ನೆ ರಾತ್ರಿ ನಡೆದ ಪುರುಷರ ೬೫ ಕೆಜಿ ವಿಭಾಗದಲ್ಲಿ ಭಜರಂಗ್ ಕ್ಯೂಬಾದ ಅಲೆಜಾಂಡ್ರೋ ಎನ್ರಿಕ್ ವಾಲ್ಟನ್ ಲೂಬಿಯರ್ ವಿರುದ್ಧ ಸೆಣಸಿ ವಿಜೇತರಾದರು. ಬಿರುಸಿನ ಪೈಪೋಟಿ ನಡುವೆಯೂ ಭಾರತದ ಕುವರ ಭಜರಂಗ್ ೩-೪ ಅಂತರದಿಂದ ದ್ವೀಪರಾಷ್ಟ್ರದ ಬಲಿಷ್ಟ ಕುಸ್ತಿಪಟುವಿಗೆ ಸೋಲಿನ ರುಚಿ ತೋರಿಸಿದರು. ಸೆಮಿಫೈನಲ್ಸ್‌ನಲ್ಲಿ ಭಜರಂಗ್ ಮಂಗೋಲಿಯಾದ ಪ್ರಬಲ ಕುಸ್ತಿ ಪ್ರವೀಣ ಟಿಲ್ಲಾ ಟುಮುರ್ ಒಚಿರ್ ವಿರುದ್ಧ ಜಯಸಾಧಿಸಿ ಅಂತಿಮ ಘಟ್ಟ ಪ್ರವೇಶಿಸಿದ್ದರು.

ಭಜರಂಗ್ ೨೦೧೩ ವಿಶ್ವ ಕುಸ್ತಿ ಪಂದ್ಯದಲ್ಲಿ ಕಂಚಿನ ಪದಕ ಗೆದ್ದಿದ್ದರು, ಈಗ ಚಿನ್ನದ ಸಾಧನೆ ಮಾಡಿ ಕುಸ್ತಿ ವಿಬಾಗದಲ್ಲಿ ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸಿದ್ದಾರೆ. ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ೨೦೧೦ರಲ್ಲಿ ನಡೆದಿದ್ದ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನನ ೬೬ ಕೆಜಿ ವಿಭಾಗದಲ್ಲಿ ಭಾರತದ ಸುಶೀಲ್ ಕುಮಾರ್ ಸ್ವರ್ಣ ಪದಕ ಗೆದ್ದಿದ್ದರು. ಈಗ ಭಜರಂಗ್ ಈ ಸಾಧನೆ ಮಾಡಿದ ದೇಶದ ಎರಡನೇ ಕುಸ್ತಿಪಟುವಾಗಿದ್ದಾರೆ. ಇತ್ತೀಚೆಗೆ ನಡೆದ ಕಾಮನ್‌ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಕ್ರೀಡಾಕೂಟಗಳಲ್ಲೂ ಇವರು ಚಿನ್ನದ ಪದಕಗಳನ್ನು ಜಯಿಸಿದ್ದರು.

Leave a Comment