ಕುರ, ಕೀವು ಗುಳ್ಳೆ

ಚರ್ಮದ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುವ ಕೀವು, ಗುಳ್ಳೆ, ಕುರ ಸಾಕಷ್ಟು ವೇದನೆ ನೀಡುತ್ತದೆ. ಈ ಕುರ ಅಥವಾ ಕೀವು ಗುಳ್ಳೆಗೆ ಹಲವು ಮನೆ ಮದ್ದುಗಳಿವೆ. ಇವುಗಳಿಂದ ಕುರ ಹಾಗೂ ಕೀವು ಗುಳ್ಳೆಗಳನ್ನು ಗುಣಪಡಿಸಬಹುದು.

ಎರಡು ಚಿಕ್ಕ ಚಮಚ ಅರಿಸಿನ ಪುಡಿಯನ್ನು ಒಂದು ಲೋಟ ಉಗುರು ಬೆಚ್ಚನೆಯ ನೀರಿಗೆ ಹಾಕಿ ಕಲಕಿ ನಿತ್ಯವೂ ಕುಡಿಯುವ ಮೂಲಕ ಕೀವುಗುಳ್ಳೆ ಹಾಗೂ ಕುರಗಳನ್ನು ವಾಸಿಮಾಡಬಹುದು. ಇದರ ಜೊತೆಗೆ ಕೊಂಚ ನೀರಿನಲ್ಲಿ ಅರಿಶಿನ ಪುಡಿಯನ್ನು ಬೆರೆಸಿ ದಪ್ಪನೆಯ ಲೇಪನ ತಯಾರಿಸಿ ಗುಳ್ಳೆ ಅಥವಾ ಕುರದ ಮೇಲೆ ಮತ್ತೆ ಸುತ್ತಲಿನ ಭಾಗದ ಚರ್ಮಕ್ಕೆ ಸವರಿ ಅದರ ಮೇಲೆ ತೆಳುವಾದ ಬಟ್ಟೆಯ ಪಟ್ಟಿ ಕಟ್ಟಬೇಕು. ನಿತ್ಯವೂ ಈ ಪಟ್ಟಿಯನ್ನು ಬದಲಿಸಿ ಸ್ವಚ್ಛತೆಯನ್ನು ಕಾಪಾಡಿಕೊಂಡರೆ ಕುರ ವಾಸಿಯಾಗುತ್ತದೆ.

ಕೀವುಗುಳ್ಳೆ ಮತ್ತು ಕುರ ಒಂದೇ ಬಗೆಯಂತೆ ಕಂಡರೂ ಇವುಗಳಲ್ಲಿ ವ್ಯತ್ಯಾಸಗಳಿವೆ. ಕೂದಲ ಬುಡವೊಂದರಲ್ಲಿ ಸೋಂಕು ಉಂಟಾದರೆ ಈ ಭಾಗದಲ್ಲಿ ಕೀವು ತುಂಬಿಕೊಂಡು ಹೊರ ಬರದೆ ಒಳಗೇ ಹೆಚ್ಚಾಗುತ್ತಾ ಚರ್ಮ ಉಬ್ಬುವಂತೆ ಮಾಡುತ್ತದೆ. ಆದರೆ, ಕುರ ಚರ್ಮದ ಆಳದಲ್ಲಿ ಮೂಡುವ ಹಲವಾರು ಕೀವುಗುಳ್ಳೆಗಳ ಒಂದು ಗುಚ್ಛವಾಗಿದ್ದು, ಒಳಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಹರಡಿದ ನಂತರ ಸುಮಾರು ನೆಲ್ಲಿಕಾಯಿ ಗಾತ್ರ ಪಡೆಯುತ್ತದೆ.

ಇವೆರೆಡು ರೋಗಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾ ಒಂದೇ ಕೀವುಗುಳ್ಳೆ ಮತ್ತು ಕುರ ನೋವು ಕೊಡುತ್ತದೆ. ಸಾಮಾನ್ಯವಾಗಿ ಕೀವುಗುಳ್ಳೆ ಮತ್ತು ಕುರಗಳು ಕುತ್ತಿಗೆ, ಮುಖ, ನಿತಂಬ, ಕಂಕುಳು, ಜನನಾಂಗದ ಮೇಲೆ ಆಗುತ್ತದೆ. ಇದಕ್ಕೆ ಹಲವು ಮನೆ ಮದ್ದುಗಳಿವೆ. ಮೇಲೆ ಹೇಳಿದ ಅರಿಶಿನ ಮನೆ ಮದ್ದಿನ ಜೊತೆಗೆ ಈರುಳ್ಳಿಯನ್ನು ಬಳಸಿ ಕುರ ವಾಸಿ ಮಾಡಬಹುದು.

ಕೆಲ ಈರುಳ್ಳಿಗಳನ್ನು ದೊಡ್ಡದಾಗಿ ಹೆಚ್ಚಿ ಕೊಂಚ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. ನೀರು ಅರ್ಧಮಟ್ಟಕ್ಕೆ ಇಳಿದ ಬಳಿಕ ಈ ನೀರನ್ನು ಸೋಸಿ ತಣ್ಣಗಾದ ನಂತರ ಈ ನೀರನ್ನು ಕೀವುಗಳ್ಳೆ, ಕುರದ ಮೇಲೆ ಚಿಮುಕಿಸಬೇಕು. ದಿನಕ್ಕೆ ಹಲವು ಬಾರಿ ಚಿಮುಕಿಸಬೇಕು. ಇದರಿಂದ ಕುರ ಕ್ರಮೇಣ ವಾಸಿಯಾಗುತ್ತದೆ. ನಿತ್ಯ ಕುಡಿಯುವ ಯಾವುದೇ ಬಿಸಿ ಅಥವಾ ತಣ್ಣನೆಯ ಪೇಯದಲ್ಲಿ ಅರ್ಧ ಚಮಕ ಕೃಷ್ಣ ಜೀರಿಗೆ ಎಣ್ಣೆಯನ್ನು ದಿನಕ್ಕೆ ಎರಡು ಬಾರಿ ಕುಡಿದರೆ ಕುರ ಗುಣಮುಖವಾಗುತ್ತದೆ.

ಎರಡು ಅಥವಾ ಮೂರು ಎಸಳು ಬೆಳ್ಳುಳ್ಳಿಯನ್ನು ನುಣ್ಣಗೆ ಅರಿಯಿರಿ ಈ ಲೇವವನ್ನು ಕುರ ಅಥವಾ ಕೀವುಗುಳ್ಳೆ ಮೇಲೆ ದಪ್ಪನಾಗಿ ಲೇಪಿಸಿ ೧೦ ನಿಮಿಷ ಉರಿಯನ್ನು ತಡೆದುಕೊಳ್ಳಿ, ಬಳಿಕ ಸ್ವಚ್ಛವಾದ ಬಟ್ಟೆಯಿಂದ ಈ ಲೇವವನ್ನು ಓರೆಸಿ ತೆಗೆಯಿರಿ ಹಾಗೇ ಒಣಗಲು ಬಿಡಿ ಕುರಗೆ ಹಲವು ಮನೆಮದ್ದುಗಳಿವೆ.

ಇವುಗಳಿಂದ ೪-೫ ದಿನ ಕಳೆದರೂ ಕುರ ಕಡಿಮೆಯಾಗದಿದ್ದರೆ ವೈದ್ಯರನ್ನು ಕಾಣಿ, ಕುರ ಅಥವಾ ಕೀವುಗುಳ್ಳೆ ಇದ್ದಾಗ ಹಸಿರು ತರಕಾರಿ, ಹಣ್ಣು ತಿನ್ನಿ, ಸಕ್ಕರೆ ಇರುವ ಆಹಾರವನ್ನು ಸೇವಿಸಬೇಡಿ. ಗುಳ್ಳೆ, ಕುರಗಳನ್ನು ಚಿವುಟಬಾರದು. ಆದಷ್ಟು ಗುಳ್ಳೆ ಇರುವ ಭಾಗವನ್ನು ಸ್ವಚ್ಛಕಾರಕ ದ್ರಾವಣದಿಂದ ಸ್ವಚ್ಛಗೊಳಿಸುತ್ತಿರಿ. ಇದರಿಂದ ಬ್ಯಾಕ್ಟಿರಿಯಾಗಳ ದೃಷ್ಠಿಯನ್ನು ತಡೆಯಬಹುದು.

Leave a Comment