ಕುರುಬ ಸಮುದಾಯ ಸೀಮಿತವಲ್ಲ

ಕೊರಟಗೆರೆ, ಡಿ. ೭- ತಾಲ್ಲೂಕಿನ ಕುರುಬ ಸಮುದಾಯ ಯಾವುದೇ ಒಂದು ಪಕ್ಷಕ್ಕೆ ಸೀಮಿತವಲ್ಲ. ತಾಲ್ಲೂಕು ಕುರುಬ ಸಂಘದ ಅಧ್ಯಕ್ಷ ಒಂದು ಪಕ್ಷಕ್ಕೆ ಬೆಂಬಲಿಸುವುದಾಗಿ ಪತ್ರಿಕಾ ಹೇಳಿಕೆ ನೀಡಿರುವುದು ಖಂಡನೀಯ ಎಂದು ಜಿಲ್ಲಾ ಕಾಳಿದಾಸ ವಿದ್ಯಾವರ್ಧಕ ಸಂಘದ ಜಂಟಿ ಕಾರ್ಯದರ್ಶಿ ಸೇರಿದಂತೆ ತಾಲ್ಲೂಕು ಕುರುಬ ಸಮಾಜದ ಮುಖಂಡರು ಪತ್ರಿಕಾ ಹೇಳಿಕೆಯನ್ನು ಖಂಡಿಸಿದ್ದಾರೆ.

ಪಟ್ಟಣದ ಕಾಳಿದಾಸ ಪ್ರೌಢಶಾಲೆಯಲ್ಲಿ ತಾಲ್ಲೂಕು ಕಾಳಿದಾಸ ಕುರುಬರ ಸಂಘ ಹಾಗೂ ತಾಲ್ಲೂಕು ಕುರುಬ ಜಾಗೃತಿ ವೇದಿಕೆ ತಾಲ್ಲೂಕು ಕುರುಬ ಸಂಘದ ಅಧ್ಯಕ್ಷ ಮೈಲಾರಪ್ಪ ಇತ್ತೀಚೆಗೆ ಪತ್ರಿಕಾ ಹೇಳಿಕೆ ನೀಡಿದ್ದರ ವಿರುದ್ದ ಏರ್ಪಡಿಸಿದ್ದ ಸಭೆಯ ನಂತರ ವರದಿಗಾರರೊಂದಿಗೆ ಮಾತನಾಡಿದ ಅವರು, ಕೊರಟಗೆರೆ ವಿಧಾನಸಭಾ ಕ್ಷೇತ್ರದ 6 ಹೋಬಳಿಗಳಿಂದ ಸುಮಾರು 25 ಸಾವಿರ ಮತದಾರರನ್ನು ಹೊಂದಿರುವ ಕುರುಬ ಸಮಾಜ ಕ್ಷೇತ್ರದಲ್ಲಿ ತನ್ನದೆ ಆದ ಪ್ರಭುತ್ವ ಹೊಂದಿದೆ. ಇದುವರೆಗೂ ಅಧಿಕಾರಕ್ಕೆ ಬಂದಂತಹ ರಾಜಕೀಯ ಪಕ್ಷಗಳು ತಾಲ್ಲೂಕಿನಲ್ಲಿ ಹಿಂದುಳಿದಿರುವ ಕುರುಬ ಸಮಾಜವನ್ನು ಮುಖ್ಯವಾಹಿನಿಗೆ ತುರುವಲ್ಲಿ ವಿಫಲವಾಗಿದ್ದು, ಯಾವುದೇ ಸ್ಥಾನಮಾನ ನೀಡದೆ ಕೇವಲ ಓಟ್ ಬ್ಯಾಂಕ್ ರಾಜಕಾರಣದಲ್ಲಿ ತೊಡಗಿರುವುದು ಜನಾಂಗಕ್ಕೆ ಬಗೆದ ದ್ರೋಹವಾಗಿದೆ ಎಂದರು.

ಕುರಬ ಸಮುದಾಯ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ತುಳಿತಕ್ಕೆ ಒಳಗಾಗಿದೆ. ಈ ನಿಟ್ಟಿನಲ್ಲಿ 2018 ರಲ್ಲಿ ನಡೆಯುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಯಾವ ರಾಜಕೀಯ ಪಕ್ಷ ಜನಾಂಗಕ್ಕೆ ಹೆಚ್ಚು ಪ್ರಾತಿನಿಧ್ಯ ನೀಡುವುದೋ ಅದನ್ನು ಪರಿಗಣಿಸಿ ಕ್ಷೇತ್ರದ ಎಲ್ಲಾ ಹೋಬಳಿ ಮುಖಂಡರುಗಳ ಸಭೆ ಕರೆದು ಸಮಾಜದ ಆಗುಹೋಗುಗಳ ಬಗ್ಗೆ ಚರ್ಚಿಸಿ ನಂತರ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಇತ್ತೀಚೆಗೆ ತಾಲ್ಲೂಕು ಅಧ್ಯಕ್ಷ ಮೈಲಾರಪ್ಪ ಕೆಲ ಮುಖಂಡರನ್ನು ಸೇರಿಸಿ ತಮ್ಮ ಸ್ವಾರ್ಥಕ್ಕಾಗಿ ಒಂದು ರಾಜಕೀಯ ಪಕ್ಷಕ್ಕೆ ಬೆಂಬಲ ನೀಡುವಂತೆ ಪತ್ರಿಕಾ ಹೇಳಿಕೆ ತಾಲ್ಲೂಕು ಕುರುಬ ಜಾಗೃತಿ ವೇದಿಕೆ ಸಭೆಯಲ್ಲಿ ಖಂಡಿಸುತ್ತಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಕಾಳಿದಾಸ ಕುರುಬ ಸಂಘದ ಅಧ್ಯಕ್ಷ ಗಂಗರಾಜು, ಉಪಾಧ್ಯಕ್ಷ ಲಕ್ಷ್ಮಿಕಾಂತ್, ಕನಕ ನೌಕರರ ಸಂಘದ ಅಧ್ಯಕ್ಷ ಕೆ.ರಂಗಸ್ವಾಮಿ, ಕುರುಬರ ಸಂಘದ ನಿರ್ದೇಶಕರಾದ ರಂಗರಾಜು, ಚಿಕ್ಕನಾಗಪ್ಪ, ನಿವೃತ್ತ ಮುಖ ಶಿಕ್ಷಕರಾದ ಕೆ.ಎಂ.ನಾಗಪ್ಪ, ಹನುಮಂತರಾಯಪ್ಪ, ನಿವೃತ್ತ ಡಿವೈಎಸ್ಪಿ ಎನ್.ಸಿ.ನಾಗರಾಜು, ಹಿರಿಯ ಮುಖಂಡರಾ ಕೆಂಗರಂಗಯ್ಯ, ಸುಬ್ಬರಾಯಪ್ಪ, ಕಡಲೇಕಾಯಿ ರಾಜು, ಗುರುಸಿದ್ದಪ್ಪ, ರಂಗರಾಜು, ಆನಂದ್, ವೆಂಕಟೇಶ್, ತಿಮ್ಮಯ್ಯ, ಶಂಕರ್, ಈರಣ್ಣ, ಮಲ್ಲಯ್ಯ, ರಾಜಣ್ಣ, ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.

Leave a Comment