ಕುರಿಕಳ್ಳನ ಕೊಲೆ

ದಾವಣಗೆರೆ.ಸೆ.22; ಜಿಲ್ಲೆಯ ಹರಿಹರ ತಾಲೂಕಿನ ಜಿ.ಟಿ.ಕಟ್ಟೆ ಗ್ರಾಮದ ಹೊರವಲಯದಲ್ಲಿ ಚಮನ್ ಸಾಬ್ ಎಂಬ  ಮಲೇಬೆನ್ನೂರು ಮೂಲದ  ಕುರಿ ಕಳ್ಳನೊಬ್ಬನ ಭೀಕರ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ! ಕೊಲ್ಲಾಪುರ ಮೂಲದ ಕುರಿಗಾಹಿಗಳು ಪ್ರತಿ ವರ್ಷ ಹರಿಹರ ಹೊನ್ನಾಳಿ ತಾಲೂಕಿನ  ಕೆಲವು ಪ್ರದೇಶಗಳಲ್ಲಿ ಕುರಿ ಕಾಯಲು ಬರುತ್ತಿದ್ದರು ಪ್ರತಿ ವರ್ಷವೂ ಕೂಡ ರಾತ್ರಿ ವೇಳೆ ಕುರಿ ಕಳ್ಳತನ ಯಥೇಚ್ಛವಾಗಿ ನಡೆಯುತ್ತಿತ್ತು ಇದರಿಂದ ರೋಸಿ ಹೋಗಿದ್ದ ಕುರಿಕಾಯುವರು  ಹೇಗಾದರೂ ಮಾಡಿ ಈ ಕುರಿ ಕಳ್ಳರನ್ನು ಹಿಡಿಯಲೇ ಬೇಕು ಎಂಬ ನಿರ್ಧಾರಕ್ಕೆ ಬಂದಿದ್ದರು  ಚಮನ್ ಸಾಬ್ ಮತ್ತು ಆತನ 4 ಜನ ಇನ್ನಿತರೆ ಸಹಚರರು ರಾತ್ರಿ ವೇಳೆ ಕುರಿ ಕಳ್ಳತನ ಮಾಡಲು ಯತ್ನಿಸುತ್ತಿದ್ದಾಗ ಅವರಲ್ಲಿ 4ಜನ ಪರಾರಿ ಆಗಿದ್ದು ಚಮನ್ ಸಾಬ್ ಎಂಬಾತ ಸಿಕ್ಕಿಬಿದ್ದ ಸಂದರ್ಭದಲ್ಲಿ ರೊಚ್ಛಿಗೆದ್ದ ಕುರಿಗಾಹಿ ತನ್ನ ಬಳಿ ಇದ್ದ ಕೊಡಲಿಯಿಂದ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ ಅಷ್ಟೇ ಅಲ್ಲದೆ ಬೆಳಿಗ್ಗೆ ಪೊಲೀಸ್ ಠಾಣೆಗೆ ಬಂದು ನಡೆದ ಘಟನೆಯನ್ನು ವಿವರಿಸಿ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ಚಮನ್ ಸಾಬ್ ಎಂಬಾತನ ಮೇಲೆ ಈಗಾಗಲೇ ಹಲವಾರು ಬಾರಿ ಕುರಿ ಕಳ್ಳತನದ ಆರೋಪಗಳು ಕೇಳಿ ಬಂದಿದ್ದವು. ರಾಜಿ ಪಂಚಾಯ್ತಿ ಕೋರ್ಟ್ ದಂಡ ಹೀಗೆ ಹಲವು ಬಾರಿ ವಿವಿಧ ರೀತಿಯಲ್ಲಿ ಕುರಿ ಕಳ್ಳತನ ಮಾಡಿದ್ದಕ್ಕೆ ದಂಡ ಕಟ್ಟಿದ್ದ ಎನ್ನಲಾಗಿದೆ. ಕೊಲ್ಲಾಪುರದ ಕುರಿಗಾಹಿಗಳು ಕುರಿ ಮಾಲಿಕರು ಚಮನ್ ಸಾಬ್ ನ ಕಾಟ ತಾಳಲಾರದೆ ಬಹಳಷ್ಟು ನಷ್ಟ ಅನುಭವಿಸಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಪೋಲಿಸರು ಸ್ಥಳಕ್ಕೆ ಧಾವಿಸಿದ್ದು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Leave a Comment