ಕುತೂಹಲ ಕೆರಳಿಸಿರುವ ಸರಿಗಮಪ ವಿಜೇತರು

ಬೆಂಗಳೂರು, ಫೆ. ೧೭- ಸರಿಗಮಪ 12ನೇ ಸೀಜನ್ ಅಂತಿಮ ಹಂತಕ್ಕೆ ಬಂದಿದ್ದು, ಆರು ಮಂದಿಯಲ್ಲಿ ವಿಜೇತರು ಯಾರು ಎನ್ನುವ ಕುತೂಹಲಕ್ಕೆ ನಾಳೆ ಹಾಗೂ ನಾಳಿದ್ದು, ಉತ್ತರ ಸಿಗಲಿದೆ.

ಫಿನಾಲೆಗೆ ಆಯ್ಕೆಯಾಗಿರುವ ಅನ್ವಿತಾ, ವೇಣುಗೋಪಾಲ್, ಆಸ್ತಾ, ದರ್ಶನ್, ವೈಷ್ಣವಿ ಮತ್ತು ಶ್ರೀಕರ್ ಅವರಲ್ಲಿ ವಿಜೇತರು ಯಾರು ಎನ್ನುವುದು ನಾಳೆ ಹಾಗೂ ನಾಳಿದ್ದು ತಿಳಿಯಲಿದೆ.

ಹಾಸನದಲ್ಲಿ ಬೃಹತ್ ಜನಸ್ತೋಮದ ನಡುವೆ ನಡೆದ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ, ಸ್ಪರ್ಧಿಗಳನ್ನು ಹಾಡಿಹೊಗಳಿದ್ದಾರೆ.

ಫಿನಾಲೆಯ ಮೊದಲನೇ ಸುತ್ತಿನಲ್ಲಿ 6 ಮಕ್ಕಳು ಹಾಡಿದ್ದು, ಎರಡನೇ ಸುತ್ತಿಗೆ ಆಯ್ಕೆಯಾದ 3 ಮಕ್ಕಳಲ್ಲಿ 12ರ ಸೀಸನ್‌ನ ವಿಜೇತರು ಯಾರು ಎನ್ನುವುದು ಕುತೂಹಲ ಕೆರಳಿಸಿದೆ.

ತಮ್ಮ ಗಾನಸುಧೆಯಿಂದಲೇ ಮೆರುಗು ತಂದ ಇವರುಗಳಲ್ಲಿ ಜೀ ಕನ್ನಡ ಸರಿಗಮಪ ಸೀಸನ್ 12ರ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ.
ಅರ್ಜುನ್ ಜನ್ಯಾ, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಅವರು ತೀರ್ಪುಗಾರರಾಗಿದ್ದಾರೆ.  ಗ್ರ್ಯಾಂಡ್ ಫಿನಾಲೆಯಲ್ಲಿ ಡ್ರಾಮಾ ಜೂನಿಯರ್‌ನ ಮಕ್ಕಳು ಎಲ್ಲರನ್ನು ರಂಜಿಸಲಿದ್ದಾರೆ.

Leave a Comment