ಕುತೂಹಲದ ಪ್ರೇಮಕಥೆ

ಹಿರಿಯ ನಿರ್ದೇಶಕ ಸುಧಾಕರ್ ಬನ್ನಂಜೆ ಈ ಬಾರಿ ಕುತೂಹಲಕಾರಿಯಾದ ಪ್ರೇಮಕತೆಯೊಂದಿಗೆ ಚಿತ್ರ ಆರಂಭಿಸಿ ತೆರೆಯ ಮೇಲೆ ಕಟ್ಟಿಕೊಡಲು ಮುಂದಾಗಿದ್ದಾರೆ. ಅದಕ್ಕಾಗಿ ’ರಣರಣಕ’ ಎಂದು ಹೆಸರಿಟ್ಟಿದ್ದಾರೆ.

ಅರೆ ಹೀಗಂದರೇನು ಎನ್ನುವ ಸಹಜವಾದ ಕುತೂಹಲ ಎಲ್ಲರಲ್ಲಿ ಮೂಡಿ ಬಂದರೆ ಅತಿಶಯೋಕ್ತಿ ಆಗಲಾರದು. ’ರಣರಣಕ’ ಎಂದರೆ  ಏನು ಎನ್ನುವ ಬಗ್ಗೆ ನಿರ್ದೇಶಕರೇ ಮಾಹಿತಿ ನೀಡಿ, ಮತ್ತಷ್ಟು ಕುತೂಹಲ ಹೆಚ್ಚುವಂತೆ ಮಾಡಿದ್ದಾರೆ. ’ರಣರಣಕ’ ಎಂದರೆ ಪ್ರಿಯತಮೆ ಪ್ರಿಯತಮನಿಗೆ ಕೈಕೊಟ್ಟಾಗ ಅನುಭವಿಸುವ ವೇದನೆ ಎನ್ನುವುದು ನಿರ್ದೇಶಕರ ಸಮಜಾಯಿಷಿ.

ಅಂದಹಾಗೆ ಕಳೆದವಾರ ’ರಣರಣಕ’ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭವಿತ್ತು. ಶಾಸಕಿ ಸೌಮ್ಯ ರೆಡ್ಡಿ, ಹಿರಿಯ ಕಲಾವಿದರಾದ ಟೆನ್ನಿಸ್ ಕೃಷ್ಣ,ಹೊನ್ನವಳ್ಳಿ ಕೃಷ್ಣ, ಬಿರಾದಾರ್ ಸಿಡಿ ಬಿಡುಗಡೆ ಮಾಡಿ ಚಿತ್ರಕ್ಕೆ ಮತ್ತು ತಂಡಕ್ಕೆ ಶುಭಕೋರಿದರು.

ಈ ವೇಳೆ ಮಾತಿಗಿಳಿದ ನಿರ್ದೇಶಕ ಸುಧಾಕರ್ ಬನ್ನಂಜೆ,ಬೆಂಗಳೂರು,ಮಂಗಳೂರು, ಉಡುಪಿ, ಉಲ್ಲಾಳ ಸೇರಿದಂತೆ ಮತ್ತಿತರ ಕಡೆ ಚಿತ್ರೀಕರಣ ಮಾಡಲಾಗಿದ್ದು ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಎಲ್ಲವೂ ಕುತೂಹಲಕಾರಿಯಾಗಿ ಮೂಡಿ ಬಂದಿದೆ.ರಾಜೇಶ್ ರಾಮನಾಥ್ ಸಂಗೀತ ನೀಡಿದ್ದಾರೆ ಎಲ್ಲಾ ಹಾಡುಗಳು ಒಂದಕ್ಕಿಂತ ಒಂದು ಚೆನ್ನಾಗಿ ಮೂಡಿ ಬಂದಿದೆ. ನಾಯಕನ ಜೀವನದಲ್ಲಿ ನಾಯಕಿಯ ಪ್ರವೇಶವಾದ ನಂತರ ಆತ ಜೀವನದಲ್ಲಿ ಹೇಗೆಲ್ಲಾ ಆಗಲಿದೆ ಎನ್ನುವುದನ್ನು ಚಿತ್ರ ಒಳಗೊಂಡಿದೆ ಎಂದು ವಿವರ ನೀಡಿದರು.

ಚಿತ್ರದಲ್ಲಿ ನಾಯಕನಾಗಿ ಶಶಿರಾಜ್ ಮತ್ತು ನಾಯಕಿಯಾಗಿ ಸಂಭ್ರಮಗೌಡ ಕಾಣಿಸಿಕೊಂಡಿದ್ದಾರೆ. ನಾಯಕಿ ಸಂಭ್ರಮ ಗೌಡ, ಮಾತನಾಡಿ, ಹಳ್ಳಿಯಿಂದ ನಗರಕ್ಕೆ ಬರುವ ಹುಡುಗಿ ಪಾತ್ರ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದರು.

ನಿರ್ದೇಶಕರ ಸ್ನೇಹಿತ ಆರ್.ದಿವಾಕರ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ, ಚಿತ್ರದಲ್ಲಿ ಶೋಭರಾಜ್, ಹೊನ್ನವಳ್ಳಿ ಕೃಷ್ಣ,ಟೆನ್ನಿಸ್ ಕೃಷ್ಣ,ಮೈಕೋ ಮಂಜ ಸೇರಿದಂತೆ ಹಲವು ಕಲಾವಿದರ ದಂಡು ಚಿತ್ರದಲ್ಲಿದೆ.

Leave a Comment