ಕುತೂಹಲಕಾರಿ ನೈಟ್ ಔಟ್

ಜೋಶ್ ಚಿತ್ರದಿಂದ ಸ್ಯಾಂಡಲ್‌ವುಡ್ ಪರಿಚಿತರಾಗಿ ನಾಯಕ, ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡು ಹೆಸರು ಮಾಡಿದ್ದ  ರಾಕೇಶ್‌ಅಡಿಗ ಜೋಶ್ ಸೇರಿ ಇಲ್ಲಿಯವರೆಗೆ ನಟಿಸಿದ  ೧೩ ಚಿತ್ರಗಳ ಅನುಭವದಿಂದ ’ನೈಟ್ ಔಟ್ ಸಿನಿಮಾವನ್ನು ನಿರ್ದೇಶನ ಮಾಡಲು ಹೊರಟಿದ್ದಾರೆ.

night-out_126

ಶಾಲಾ,ಕಾಲೇಜು ದಿನಗಳಲ್ಲಿ ರಂಗಭೂಮಿ ಚಟುವಟಿಕೆಯಲ್ಲಿ ತೊಡಗಿಕೊಂಡು ಚಿತ್ರರಂಗವನ್ನು ತಿಳಿದುಕೊಂಡಿದ್ದರಿಂದ ಮೊದಲೇ ನಟನೆಗಿಂತ ಮೊದಲೇ ನಿರ್ದೇಶನ ಮಾಡುವ ಬಯಕೆಯಿತ್ತು ಅದು ’ನೈಟ್ ಔಟ್ ಚಿತ್ರದಿಂದ ಈಡೇರಿದೆ ಎನ್ನುತ್ತಾರೆ ಅಡಿಗ.

ಕೇವಲ ಆರು ಗಂಟೆಯಲ್ಲಿ ನಡೆಯುವ ಸನ್ನಿವೇಶಗಳ ಕತೆಯನ್ನು ನೈಟ್ ಔಟ್‌ಗೆ ಅಳವಡಿಸಲಾಗಿದೆ.ಇಬ್ಬರು ಬಾಲ್ಯದ ಗೆಳೆಯರು ಆಟೋದಲ್ಲಿ  ರಾತ್ರಿ ವೇಳೆ ಪ್ರಯಾಣ ಮಾಡುವಾಗ ಅವರವರ ಮನಸ್ಥಿತಿಗಳು ಸಂಭಾಷಣೆಯಲ್ಲಿ ತೆರೆದುಕೊಂಡಾಗ ಫ್ಲಾಶ್‌ಬ್ಯಾಕ್‌ಗೆ ಹೋಗುತ್ತದೆ. ಅದರಲ್ಲಿ ಹುಡುಗಿಯೊಬ್ಬಳ ಪ್ರವೇಶವಾಗುತ್ತದೆ. ಯಾವ ಕಾರಣಕ್ಕೆ ಭೇಟಿಯಾದರು, ಏತಕ್ಕಾಗಿ ಪ್ರಯಾಣ ಮಾಡಿದರು, ಎಲ್ಲಿಗೆ ಹೋಗುತ್ತಾರೆ ಎಂಬುದನ್ನು ಕುತೂಹಲಕಾರಿಯಾಗಿ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ ಎಂದು ಅಡಿಗ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಹೇಳಿಕೊಂಡರು.

ಚಿತ್ರದಲ್ಲಿ ಪ್ರೇಕ್ಷಕ ಮುಂದಿನ  ದೃಶ್ಯ ಊಹೆ ಮಾಡದಂತೆ  ಸನ್ನಿವೇಶಗಳು ಬರುವುದು ಪ್ಲಸ್ ಪಾಯಿಂಟ್ ಆಗಿದೆ. ಬೆಂಗಳೂರು, ಹೆಸರುಘಟ್ಟ ಮತ್ತು ಕನಕಪುರ ರಸ್ತೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಾಲ್ಕು ಹಾಡುಗಳಿಗೆ ಸಮೀರ್‌ಕುಲಕರ್ಣೀ ರಾಗ ಒದಗಿಸಿದ್ದಾರೆ.ಚಿತ್ರೀಕರಣೊತ್ತರ ಕೆಲಸಗಳು ನಡೆಯುತ್ತಿದ್ದು, ಫೆಬ್ರವರಿಯಲ್ಲಿ  ಚಿತ್ರ ಬಿಡುಗಡೆ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದರು ಅಡಿಗ.

ಆಟೋ ಚಾಲಕನಾಗಿ ಭರತ್ ನಾಯಕನಾಗಿ ಮೊದಲ ಅನುಭವ.  ಸಣ್ಣ ಪುಟ್ಟ ಪಾತ್ರದಲ್ಲಿ  ಕಾಣಿಸಿಕೊಂಡಿದ್ದ ಅಕ್ಷಯ್ ಗೆಳೆಯನಾಗಿ ಮುಖ್ಯ ಪಾತ್ರ. ಹಳ್ಳಿಯಿಂದ ಬೆಂಗಳೂರಿಗೆ ಓದಲು ಬರುವ ಹುಡುಗಿಯಾಗಿ ಶೃತಿಗೊರಾಡಿಯಾ ನಾಯಕಿ. ಛಾಯಗ್ರಹಣ ಅರುಣ್.ಕೆ.ಅಲೆಕ್ಸಾಂಡರ್, ಸಂಕಲನ ರಿತ್ವಿಕ್, ನೃತ್ಯ ಭಾರ್ಗವ ನಿರ್ವಹಿಸಿದ್ದಾರೆ. ಅಮೇರಿಕಾ ನಿವಾಸಿ ಕನ್ನಡಿಗರಾದ ನವೀನ್‌ಕೃಷ್ಣ-ಲಕ್ಷೀನವೀನ್  ಅವರು ಚಿತ್ರವನ್ನು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.

 

 

Leave a Comment