ಕುಣಿಯುತ್ತಿರುವ ಯುವಕನ ದೇಹದಿಂದ ಹೊರಬಂದ ಪ್ರೇತಾತ್ಮ

ಹುಬ್ಬಳ್ಳಿ, ಅ 11- ಹುಟ್ಟುಹಬ್ಬದ ಸಂಭ್ರಮದಲ್ಲಿ ಕುಣಿಯುತ್ತಿದ್ದ ಯುವಕನೋರ್ವನ ದೇಹದಿಂದ ಪ್ರೇತಾತ್ಮವೊಂದು ಹೊರಬಂದ ದೃಶ್ಯ ನಗರದ ಮಂಟೂರು ರಸ್ತೆಯಲ್ಲಿ ಕೆಲ ದಿನಗಳ ಹಿಂದೆ ಜರುಗಿದ್ದು, ಈಗ ಈ ದೃಶ್ಯದ ವಿಡಿಯೋ ವೈರಲ್ ಆಗಿದೆ.
ಕೆಲ ದಿನಗಳ ಹಿಂದೆ ಮಂಟೂರ ರಸ್ತೆಯಲ್ಲಿ ಪ್ರತಾಪ ಎಂಬ ಯುವಕ ತನ್ನ ಸ್ನೇಹಿತರೊಂದಿಗೆ ಸೇರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ. ಈ ವೇಳೆ ಆತ ಸೇರಿದಂತೆ ಆತನ ಇಬ್ಬರು ಸ್ನೇಹಿತರು ಕುಣಿದು ಕುಪ್ಪಳಿಸುತ್ತಿದ್ದರು. ಈ ಹಂತದಲ್ಲಿ ಪ್ರತಾಪನ ದೇಹದಿಂದ ಪ್ರೇತಾತ್ಮವೊಂದು ಹೊರ ಬಂದಿತೆನ್ನಲಾಗಿದೆ.
ಕುಣಿಯುತ್ತಿರುವ ದೃಶ್ಯವನ್ನು ಓರ್ವ ಸ್ನೇಹಿತ ಮೊಬೈಲ್ ಮೂಲಕ ವಿಡಿಯೋ ಚಿತ್ರೀಕರಣ ಮಾಡುತ್ತಿರುವಾಗ ಪ್ರೇತಾತ್ಮ ಪ್ರತಾಪನ ದೇಹದಿಂದ ಹೊರ ಬಂದಿರುವುದು ಬೆಳಕಿಗೆ ಬಂದಿದೆ.
ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಅನಾರೋಗ್ಯದಿಂದ ಪ್ರತಾಪ ಸಾವನ್ನಪ್ಪಿದ್ದು ದುರ್ವಿಧಿಯೇ ಸರಿ. ಆದರೆ ಪ್ರತಾಪನ ಸಾವಿನ ನಂತರ ಆತನ ಸ್ನೇಹಿತರು ವಿಡಿಯೋ ನೋಡುವಾಗ ಕುಣಿಯುತ್ತಿರುವ ಪ್ರತಾಪನ ದೇಹದಿಂದ ಪ್ರೇತಾತ್ಮ ಹೊರ ಬಂದ ದೃಶ್ಯ ಸ್ಪಷ್ಟವಾಗಿ ಕಂಡುಬಂದಿದೆ.  ಆತನ ಸ್ನೇಹಿತರು ಸೇರಿದಂತೆ ಸದ್ಯ ವಿಡಿಯೋ ವೈರಲ್ ಆಗಿರುವುದರಿಂದ ಮಂಟೂರ ರಸ್ತೆಯ ಜನತೆ ಬೆಚ್ಚಿ ಬಿದ್ದಿದ್ದಾರೆ.

Leave a Comment