ಕುಡ್ಲ ಟ್ರೋಲ್‌ನಲ್ಲಿ ಸಿಎಂಗೆ ನಿಂದನೆ

ಯುವಕ ಪೊಲೀಸ್ ವಶಕ್ಕೆ
ಮಂಗಳೂರು, ಆ.೪- ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅವಾಚ್ಯವಾಗಿ ನಿಂದಿಸಿದ ಆರೋಪದ ಮೇಲೆ ಓರ್ವನನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕು ಮೇರಮಜಲು ನಿವಾಸಿ ಪ್ರಶಾಂತ್ ಪೂಜಾರಿ(೨೪) ಬಂಧಿತ ಆರೋಪಿ. ಈತ ಮುಖ್ಯಮಂತ್ರಿಯನ್ನು ಅವಾಚ್ಯ ಶಬ್ದಗಳಿಂದ ಇನ್‌ಸ್ಟಾಗ್ರಾಮ್ ಮೂಲಕ ನಿಂದಿಸಿದ್ದ. ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಕದ್ರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Leave a Comment