ಕುಡುತಿನಿ ಪ.ಪಂ ಕಾಂಗ್ರೆಸ್ ಗೆ ಬಹುಮತ

ಬಳ್ಳಾರಿ, ಸೆ.3: ನಿರೀಕ್ಷೆಯಂತೆ ತಾಲೂಕಿನ ಕುಡುತಿನಿ ಪಟ್ಟಣ ಪಂಚಾಯ್ತಿಯಲ್ಲಿ ಕಾಂಗ್ರೆಸ್ ಗೆ ಬಹುಮತ ದೊರೆತಿದೆ. ಆದರೆ ಅಧಿಕಾರ ಪಡೆಯಲು ಅಧ್ಯಕ್ಷಸ್ಥಾನದ ಮೀಸಲಾತಿ ಅಡ್ಡಬರುವ ಸಾಧ್ಯತೆ ಇದೆ. ಅಧ್ಯಕ್ಷ ಸ್ಥಾನದ ಅಧಿಕಾರದಿಂದ ವಂಚಿತವಾಗಬಹುದು ಎಂದು ಮೀಸಲಾತಿ ಬದಲಾಯಿಸಿ ಅಧಿಕಾರ ಪಡೆಯಬಹುದು.

ನಗರದ ತಾಲೂಕು ಕಛೇರಿಯಲ್ಲಿ ಇಂದು ಬೆಳಿಗ್ಗೆ 8ರಿಂದ ಮತಗಳ ಎಣಿಕೆ ಆರಂಭಗೊಂಡಿತು.

ಒಂದು ತಾಸಿನಲ್ಲಿ ಎಲ್ಲಾ 19 ವಾರ್ಡ್ ಗಳ ಮತಎಣಿಕೆ ಕಾರ್ಯ ಮುಗಿದು 11ರಲ್ಲಿ ಕಾಂಗ್ರೆಸ್ ಮತ್ತು 08 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ವಿಜಯ ಸಾಧಿಸಿದ್ದು ಪ್ರಕಟಗೊಂಡಿತು.

ಬಹಳ ಬಂಡವಾಳ ಹೂಡಿದ್ದ ಕಾಂಗ್ರೆಸ್ ಗೆ ನಿರೀಕ್ಷೆಯಷ್ಟು ಜಯ ದೊರೆಯಲಿಲ್ಲ ಎಂಬ ಮೂಡು ಅವರ ಮುಖಂಡರ ಮುಖದ ಮೇಲೆ ಕಾಣುತ್ತಿತ್ತು. ಆದರೆ ತಾನು ಮಾಡಿದ ಪ್ರಯತ್ನಕ್ಕೆ ಇನ್ನಷ್ಟು ಸಂಖ್ಯೆ ಬರಬೇಕಿತ್ತು ಎಂಬ ಭಾವ ಬಿಜೆಪಿ ಮುಖಂಡರು ಕಾರ್ಯಕರ್ತರಲ್ಲಿ ಇತ್ತು. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಇದ್ದು 8 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಜೆಡಿಎಸ್ ಫಲಿತಾಂಶ ಶೂನ್ಯವಾಗಿದೆ.

13ನೇ ವಾರ್ಡು ಕಾಂಗ್ರೆಸ್ ಗೆ
ಕೇವಲ 60 ಮತದಾರರನ್ನು ಹೊಂದಿದ್ದ ಅದರಲ್ಲಿ ಮೂವರು ಮೃತಪಟ್ಟು, ಇಬ್ಬರು ಮತ ಚಲಾಯಿಸದೆ ಕೇವಲ 55 ಜನ ಮತ ಚಲಾಯಿಸಿದ್ದ ಈ ಕ್ಷೇತ್ರದಲ್ಲಿ ವಾರ್ಡಿನ ಹೊರಗಿನಿಂದ ಸ್ಪರ್ಧೆ ಮಾಡಿದ್ದ ರಾಮಲಿಂಗಪ್ಪಗೆ ವಾರ್ಡಿನ ಮತದಾರ 34 ಮತಹಾಕಿ ಮಣೆ ಹಾಕಿದ. ಆದರೆ ಇದೇ ವಾರ್ಡಿನ ಮತ್ತು ಮನೆಯಲ್ಲೆ 10 ಮತ ಹೊಂದಿದ್ದ ಪಕ್ಷೇತರ ಅಭ್ಯರ್ಥಿ ಕ್ರಿಷ್ಟಪ್ಪಗೆ ಕೇವಲ 19 ಮತ ಬಂದವು ಇದರಲ್ಲಿ 2 ಮತಗಳು ನೋಟಗೆ ಬಿದ್ದಿವೆ.

ಗೆದ್ದಿದ್ದು ಒಂದೇ ಓಟಿನಿಂದ
ಐದನೇ ವಾರ್ಡಿನಿಂದ ಸ್ಪರ್ಧೆ ಮಾಡಿದ್ದ ಬಿಜೆಪಿಯ ಕೆ.ಎಂ.ಹಾಲಪ್ಪಗೆ ಅದೃಷ್ಟ ಒಲಿದು ಬಂದಿತ್ತು. ಈ ವಾರ್ಡಿನಲ್ಲಿ ಏಳು ಮತಗಳು ನೋಟಗೆ ಬಿದ್ದಿದ್ದರೂ ಕೇವಲ ಒಂದು ಮತದ ಅಂತರದಿಂದ ಹಾಲಪ್ಪ ಆಯ್ಕೆಯಾದರು. ತೀವ್ರ ಹಣಾಹಣಿ ಇದ್ದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಬಿ.ಸ್ವಾಮಿಗೆ 280 ಮತ ಬಂದರೂ ಆಯ್ಕೆಯಾಗಲು ಆಗದೆ ಒಂದೇ ಮತದಿಂದ ಅದೃಷ್ಠ ಕೈಕೊಟ್ಟಿತು.

ಅಧಿಕಾರ ಪರರ ಪಾಲು
ಕುಡುತಿನಿ ಪಟ್ಟಣ ಪಂಚಾಯ್ತಿ ಅಧ್ಯಕ್ಷಸ್ಥಾನ ಎಸ್ಪಿ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆ ಮೀಸಲಿರುವುದರಿಂದ 11ಸ್ಥಾನಗಳಲ್ಲಿ ಗೆಲುವು ಪಡೆದು ಬಹುಮತ ಹೊಂದಿದ್ದರೂ ಕಾಂಗ್ರೆಸ್ ಪಕ್ಷದಲ್ಲಿ ಎಸ್ಟಿ ಮಹಿಳೆ ಯಾರಾರು ಆಯ್ಕೆಯಾಗಿಲ್ಲ. 6, 19 ವಾರ್ಡಿನಿಂದ ಆಯ್ಕೆಯಾಗಿರುವ ಸಾಲಮ್ಮ ಮೂಲತಃ ಕಾಂಗ್ರೆಸ್ ನವರು ಟಿಕೆಟ್ ನೀಡಲಿಲ್ಲವೆಂದು ಬಿಜೆಪಿಗೆ ಬಂದು ಆಯ್ಕೆಯಾಗಿದ್ದಾರೆ.

ಮೀಸಲಾತಿ ಬದಲಾಗಬಹುದು:
ಈ ಕ್ಷೇತ್ರದ ಶಾಸಕರಾಗಿರುವ ಈ.ತುಕಾರಾಂ ನಮ್ಮ ನಿರೀಕ್ಷೆ 13ಸ್ಥಾನಗಳತ್ತ ಒಂದು ವಾರ್ಡಿನಲ್ಲಿ ಒಂದು ಮತ ಮತ್ತೊಂದು ವಾರ್ಡಿನಲ್ಲಿ 7 ಮತಗಳಿಂದ ನಮ್ಮ ಅಭ್ಯರ್ಥಿಗಳು ಸೋತಿದ್ದಾರೆ. ಏನೇ ಆಗಲಿ ನಮ್ಮ ಪಕ್ಷ ಬಹುಮತಕ್ಕೆ ಬಂದಿದೆ ಎಂದ ಅವರು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಬದಲಾಗಲಿದೆ.
ಈ ಹಿಂದೆ ಚುನಾವಣೆ ನಡೆಸಬೇಕಾದಾಗಿನ ಮೀಸಲಾತಿ ಈಗ ನಡೆಯಲ್ಲ ಎಂದು ಸೂಚ್ಯವಾಗಿ ತಮ್ಮ ಪಕ್ಷವೇ ಅಧಿಕಾರ ಹೊಂದಲಿದೆ ಎಂಬುದನ್ನು ತಿಳಿಸಿದರು.

Leave a Comment