ಕುಡಿಯುವ ನೀರು ಪೂರೈಸಲು: ಡಿಸಿಗೆ ಮನವಿ

ರಾಯಚೂರು.ಮೆ.೧೪- ನಗರದ ವಾರ್ಡ ನಂ ೭ ರಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಶೀಘ್ರದಲ್ಲಿ ಸರಿಪಡಿಸಬೇಕೆಂದು ಒತ್ತಾಯಿಸಿ ವಾರ್ಡಿನ ಸದಸ್ಯರು ಜಿಲ್ಲಾಧಿಕಾರಿ ಕಾರ್ಯಲಯದ ಸ್ಥಾನಿಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಬಿಸಿಲಿನ ತಾಪ ದಿನದಿಂದ ದಿನ ಹೆಚ್ಚುತ್ತಿರುವ ಕಾರಣ ನಗರದಲ್ಲಿ ಕುಡಿಯುವ ನೀರಿನ ಕೊರತೆ ಹೆಚ್ಚಾಗುತ್ತಿದೆ ನಗರದ ಎಲ್ಲಾ ವಾರ್ಡುಗಳಿಗೆ ಪ್ರತ್ಯೇಕವಾದ ಪೈಪ್ ಲೈನ್ ವ್ಯವಸ್ಥೆ ಕಲ್ಪಿಸಿರುವುದರಿಂದ ಪೈಪ್ ಲೈನ್ ಒತ್ತಡಕ್ಕೆ ಸಿಲುಕಿ ನೀರು ನಮ್ಮ ವಾರ್ಡಿಗೆ ತಲುಪುತ್ತಿಲ್ಲ. ಆದ್ದರಿಂದ ಪ್ರತ್ಯೇಕವಾದ ಮುಖ್ಯ ಪೈಪ್ ಲೈನ್‌ಗೆ ಸಂಪರ್ಕ ಕೊಡಬಾರದೆಂದು ಮತ್ತು ನಗರದಲ್ಲಿ ಉದ್ಭವಿಸಿರುವ ನೀರಿನ ಬವಣೆಯನ್ನು ಜಿಲ್ಲಾಡಳಿತ ತಕ್ಷಣ ನೀಗಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಾರ್ಡಿನ ಸದಸ್ಯರಾದ ಜಾಕೀರ್ ಹುಸೇನ್, ಖಾಜಾ ಮೊಹಮ್ಮದ್, ಸೈಯದ್ ಹುಸೇನ್, ಸೈಧಿಕ್ ಹುಸೇನ್, ಎಮ್.ಡಿ ಅಕ್ಬರ್, ಎಮ್.ಡಿ.ಯುನಸ್, ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Leave a Comment