ಕುಡಿಯುವ ನೀರಿಗಾಗಿ ಹಾಹಾಕಾರ ಪಟ್ಟಣ ಪಂಚಾಯಿತಿ ಮುಂದೆ ಬಾರಿ ಪ್ರತಿಭಟನೆ

ಮೊಳಕಾಲ್ಮೂರು ಸೆ 5 ಪಟ್ಟಣದಲ್ಲಿ ಸುಮಾರು 20 ದಿವಸಗಳಿಂದ ಜನರಿಗೆ ಕುಡಿಯಲು ನೀರು ಸರಬರಾಜು ಮಾಡದ ಕಾರಣ ಪಟ್ಟಣ ಪಂಚಾಯಿತಿ ಮುಂದೆ ಸಾವಿರಾರು ಜನರು ಪ್ರತಿಭಟನೆ ನಡೆಸಿದರು.

ಬೆಳಗಿನ 10 ಘಂಟೆಯಿಂದ ಪಟ್ಟಣ ಪಂಚಾಯಿತಿಗೆ ಸಾವಿರಾರು ಜನರು ಮುತ್ತಿಗೆ ಹಾಕಿ ಅದ್ಯಕ್ಷ ಮತ್ತು ಮುಖ್ಯಾಧಿಕಾರಿಗಳ ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಸುಮಾರು 15 ವಾರ್ಡಿಗಳು ಇದ್ದು, ಸುಮಾರು 20 ದಿವಸಗಳಿಂದ ಯಾವ ವಾರ್ಡಿಗೂ ಕುಡಿಯಲು ನೀರಿಲ್ಲ. ಇದಕ್ಕೆ ಪಟ್ಟಣ ಪಂಚಾಯಿತಿಯ ಅಧಿಕಾರಿಗಳ ಮತ್ತು ಅದ್ಯಕ್ಷ ಮತ್ತು ಸದಸ್ಯರ ನೀರ್ಲಕ್ಷೆ ಕಾರಣ ಎಂದು ಜನರು ದೂರಿದರು.

ಈ ಸಂದರ್ಭದಲ್ಲಿ ತಾಲ್ಲೂಕು ದಂಡಾದಿಕಾರಿಗಳಾದ ಜಿ.ಕೋಟ್ರೇಶ್ ರವರು ಮಾತನಾಡುತ್ತ, ನಾಳೆಯಿಂದ ಟ್ಯಾಂಕರ್ ಮೂಲಕ ಪಟ್ಟಣಕ್ಕೆ ನೀರು ಸರಬರಾಜು ಮಾಡಲಾಗುವುದೆಂದು ತಿಳಿಸಿದರು. ತಹಶೀಲ್ದಾರ್ ಮತ್ತು ಪ ಪಂಚಾಯಿತಿಯ ಮುಖ್ಯಾಧಿಕಾರಿಗಳು ಮುಖ್ಯ ಅದ್ಯಕ್ಷರು ಏನು ಹೇಳಿದರೂ ಜನರು ಕೇಳದೆ ಘೋಷಣೆಗಳನ್ನು ಕೂಗುತ್ತಾನೆ ಇದ್ದರು .

ನೀರಿಗಾಗಿ ಬಾರಿ ಆಕ್ರೋಶ ವ್ಯಕ್ತಪಡಿಸಿದ್ದ ಜನರು ದಿಡೀರ್ ಅಂತ ಶಾಸಕ ಶ್ರೀ ರಾಮುಲು ಅವರು ಸ್ಥಳಕ್ಕೆ ಭೇಟಿ ನೀಡಿದ ತಕ್ಷಣ ನಿಶ್ಯಬ್ದರಾದರು.

ಇನ್ನು ಎರಡು ಘಂಟೆ ಒಳಗೆ ಪಟ್ಟಣದ ಪ್ರತಿಯೊಂದು ವಾರ್ಡಿಗೂ ನೀರು ಸರಬರಾಜು ಮಾಡಲಾಗುವುದೆಂದು ಶಾಸಕ ಶ್ರೀ ರಾಮುಲು ನೊಂದ ಜನರಿಗೆ ಭರವಸೆಯನ್ನು ನೀಡಿದರಲ್ಲದೆ ನೀರು ಬಿಡಿಸದೇ ಮೊಳಕಾಲ್ಮೂರು ಬಿಟ್ಟು ಹೋಗುವುದಿಲ್ಲ ಎಂದು ತಿಳಿಸಿದರು. ಸಂತಸಗೊಂಡ ಜನರು ಶಾಸಕರ ಮೇಲಿನ ಭರವಸೆಯಿಂದ ಪ್ರತಿಭಟನೆಯನ್ನು ನಿಲ್ಲಿಸಿದರು. ಕೊನೆಯಲ್ಲಿ ಶಾಸಕರು ಪಟ್ಟಣ ಪಂಚಾಯಿತಿಯ ಅಧ್ಯಕ್ಷರು ಮತ್ತು ಅಧಿಕಾರಿಗಳು ಮನಸ್ಸು ಮಾಡಿದರೇ ಪಟ್ಟಣಕ್ಕೆನೀರು ಸರಬರಾಜು ಮಾಡಬಹುದ್ದಿತ್ತು,ಇನ್ನು ಮುಂದೆ ಈಗೇ ನಡೆಯದಂತೆ ನೋಡಿಕೊಳ್ಳುತೆನೆ ಎಂದು ತಿಳಿಸಿದರು.

Leave a Comment