ಕುಡಿದ ಮತ್ತಿನಲ್ಲಿ ಮಗನ ಮೇಲೆ ಗುಂಡು ಹಾರಿಸಿದ ತಂದೆ

ಕಾರವಾರ,ಜೂ.20- ಕುಡಿದ ಅಮಲಿನಲ್ಲಿ ತಂದೆಯೇ ಮಗನ ಮೇಲೆ ಗುಂಡು ಹಾರಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನರೇಬೈಲ್‍ನಲ್ಲಿ ನಡೆದಿದೆ.
ನಾಗೇಶ್ ಎಂಬಾತನೇ ತಂದೆಯ ಗುಂಡಿನ ದಾಳಿಗೆ ಒಳಗಾದ ವ್ಯಕ್ತಿ.
ಆಸ್ತಿಗೆ ಸಂಬಂಧಪಟ್ಟಂತೆ ತಂದೆ ಹಾಗೂ ಮಗನ ನಡುವೆ ಮನಸ್ತಾಪವಿತ್ತೆನ್ನಲಾಗಿದೆ. ಕಳೆದ ರಾತ್ರಿ ಸಹ ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ತಂದೆ ಹಾಗೂ ಮಗನ ನಡುವೆ ಮಾತಿಗೆ ಮಾತು ನಡೆದು ನಂತರ ಕುಡಿದ ಅಮಲಿನಲ್ಲಿದ್ದ ತಂದೆ ರೆವಯ್ಯ ಮಗನ ಮೇಲೆ ಗುಂಡು ಹಾರಿಸಿದ್ದಾನೆ. ಆಗ ತಕ್ಷಣ ಕುಸಿದು ಬಿದ್ದ ನಾಗೇಶ್‍ನನ್ನು ಟಿ.ಎಸ್.ಎಸ್ ಆಸ್ಪತ್ರೆಗೆ ಸೇರಿಸಿ ನಂತರ ಇಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.  ಸದ್ಯ ನಾಗೇಶ್ ಪ್ರಾಣಾಪಾಯದಿಂದ ಪಾರಾಗಿದ್ದು ಚಿಕಿತ್ಸೆ ನಡೆಯುತ್ತಿದೆ.
ಪ್ರಕರಣ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.

Leave a Comment