ಕುಡಿದ ಮತ್ತಿನಲ್ಲಿ ಮಗನಿಂದಲೇ ತಾಯಿಯ ಕೊಲೆ

ವಿಜಯಪುರ, ಮಾ.7 : ಕುಡಿತ ಮತ್ತಿನಲ್ಲಿ ಓರ್ವ ವ್ಯಕ್ತಿ ತನ್ನ ತಾಯಿಯನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಘಟನೆ ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದಲ್ಲಿ ನಡೆದಿದೆ.

ಅಡಿವೆಮ್ಮ ಚಲವಾದಿ(55) ಕೊಲೆಯಾದ ದುರ್ದೈವಿ. ಬಸವರಾಜ ಚಲವಾದಿ ಎಂಬಾತ ಕೊಲೆ ಮಾಡಿದ ಆರೋಪಿ.

ಆರೋಪಿತನು ಕುಡಿದು ಮನೆಗೆ ಬಂದಾಗ ಬಾಗಿಲು ತೆರೆಯಲು ತಡವಾಗಿದ್ದಕ್ಕೆ ತಾಯಿಯ ಮೇಲೆ ಕುಪಿತಗೊಂಡು ಆಕೆಯನ್ನು ಅಮಾನುಷವಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಮುದ್ದೇಬಿಹಾಳ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment