ಕುಡಿದು ಪೊಲೀಸರ ಮೇಲೆ ಹಲ್ಲೆ: ಇಬ್ಬರ ಬಂಧನ

ಕುಣಿಗಲ್, ಮಾ. ೧೩- ಕುಡಿದ ಮತ್ತಿನಲ್ಲಿದ್ದ ಇಬ್ಬರು ಯುವಕರು ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ಅಮೃತೂರಿನಲ್ಲಿ ನಡೆದಿದೆ.

ತಾಲೂಕಿನ ಅಮೃತೂರಿನ ಅನಿಲ್ ಮತ್ತವ ಈತನ ಸ್ನೇಹಿತ ನಾಗ ಎಂಬಾತ ಪೊಲೀಸರ ಮೇಲೆ ಹಲ್ಲೆ ನಡೆಸಿ ಪೊಲೀಸರ ಅತಿಥಿಗಳಾಗಿರುವ ಆರೋಪಿಗಳು. ಅಮೃತೂರಿನ ಬಾರ್‌ನಲ್ಲಿ ಕುಡಿದು ಗಲಾಟೆ ಮಾಡುತ್ತಿರುವ ಸಮಯದಲ್ಲಿ ಎಎಸ್‌ಐ ಚಂದ್ರಪ್ಪ ಹಾಗೂ ಮುಖ್ಯ ಪೇದೆ ಅನಂತರಾಮಯ್ಯ ಅವರು ಅಲ್ಲಿಗೆ ಹೋಗಿ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಅನಿಲ್ ಮತ್ತು ಈತನ ಸ್ನೇಹಿತ ನಾಗ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ.

ಅನಿಲ್‌ನನ್ನು ಪೊಲೀಸರು ಸ್ಥಳದಲ್ಲೇ ಬಂಧಿಸಿದ್ದು,  ಮತ್ತೊಬ್ಬ ಆರೋಪಿ ನಾಗ ಪರಾರಿಯಾಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ. .

Leave a Comment