ಕುಖ್ಯಾತ ರೌಡಿ ತಬ್ರೇಜ್ ಕೊಚ್ಚಿ ಕೊಲೆ

ಬೆಂಗಳೂರು,ಫೆ.16-ಕಳೆದ ೧೦ ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಕುಖ್ಯಾತ ರೌಡಿ ತಬ್ರೇಜ್ ಅಲಿಯಾಸ್ ಬಿಲಾವಟ್ ತಬ್ರೇಜ್‌ನನ್ನು ಅಟ್ಟಾಡಿಸಿ ಮಚ್ಚು ಲಾಂಗ್‌ಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ಕಾಡುಗೊಂಡನ(ಕೆಜಿ) ಹಳ್ಳಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಕೆಜಿ ಹಳ್ಳಿಯ ಬಿಎಂ ಲೇಔಟ್‌ನ ರೌಡಿ ತಬ್ರೇಜ್(31) ರಾತ್ರಿ 11ರ ವೇಳೆ ವಿಎಂ ಲೇಔಟ್ ಬಳಿ ನಡೆದು ಕೊಂಡು ಹೋಗುತ್ತಿದ್ದಾಗ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು ಅಡ್ಡಗಟ್ಟಿ ಅಟ್ಟಾಡಿಸಿ ಮಚ್ಚು ಲಾಂಗ್‌ಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಕೆಜಿಹಳ್ಳಿ ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿದ್ದ ತಬ್ರೇಜ್ ವಿರುದ್ಧ ಕೊಲೆ ಕೊಲೆಯತ್ನ ಬೆದರಿಕೆ ಸುಲಿಗೆ ಸೇರಿ ಹಲವು ಗಂಭೀರ ಅಪರಾದ ಪ್ರಕರಣಗಳು ದಾಖಲಾಗಿದ್ದವು.
ಅಪರಾಧ ಕೃತ್ಯವೊಂದರಲ್ಲಿ ಜಾರಿಯಾದ ವಾರೆಂಟ್ ಮೇಲೆ ಜೈಲಿಗೆ ಹೋಗಿದ್ದ ರೌಡಿ ತಬ್ರೇಜ್ ಕಳೆದ ೧೦ ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ.
ಹಳೆಯ ದ್ವೇಷ ಹಿನ್ನೆಲೆಯಲ್ಲಿ ತಬ್ರೇಜ್ ನನ್ನು ಕೊಚ್ಚಿ ಭೀಕರವಾಗಿ ಹತ್ಯೆ ಮಾಡಲಾಗಿದ್ದು ರೌಡಿಶೀಟರ್ ಶಬಾಜ್ ತಂಡದ ವಿರುದ್ಧ ಕೊಲೆ ಮಾಡಿದ ಆರೋಪ ದಾಖಲಾಗಿದೆ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕೆಜಿ ಹಳ್ಳಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.

Leave a Comment