ಕುಖ್ಯಾತ ಮೂವರ ಡಕಾಯಿತರ ಬಂಧನ

ರಾಯಚೂರು.ಮೇ.23- ಶಕ್ತಿನಗರದ ರಾಘವೇಂದ್ರ ಕಾಲೋನಿಯ ವೈಟಿಪಿಎಸ್ ಗುತ್ತೇದಾರರಾದ ಹರ್ಷನ್ ಮನೆಗೆ ನುಗ್ಗಿ 20 ಲಕ್ಷ ಹಣ ನೀಡುವಂತೆ ಬೆದರಿಸಿದ ಪ್ರಕರಣಕ್ಕೆ ಸಂಬಂಧಿಸಿ, ಇನ್ನೂ ಮೂವರನ್ನು ಜಿಲ್ಲಾ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಈ ಕುರಿತು ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ 12 ಜನರನ್ನು ವಶಕ್ಕೆ ಪಡೆಯಲಾಗಿತ್ತು. ಈಗ ಮತ್ತೇ ಮೂವರನ್ನು ಬಂಧಿಸಲಾಗಿದೆ. ಸುಮಾರು 20 ಜನ ಹರ್ಷನ್ ಅವರ ಮನೆಗೆ ನುಗ್ಗಿ, 5 ಲಕ್ಷ ಆನ್ ಲೈನ್ ಮೂಲಕ ಹಣ ಪಡೆದಿದ್ದರು. ಇನ್ನೂ 15 ಲಕ್ಷ ವಾರದಲ್ಲಿ ನೀಡುವಂತೆ ಬೆದರಿಸಿದ್ದರು. ಈ ಕುರಿತು ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಪ್ರಥಮ ತನಿಖೆಯಲ್ಲಿ 12 ಜನರನ್ನು ಬಂಧಿಸಲಾಗಿತ್ತು.
ಈಗ ಮತ್ತೇ ಮೂವರನ್ನು ಬಂಧಿಸುವ ಮೂಲಕ ಒಟ್ಟು 15 ಜನ ಈ ಪ್ರಕರಣದಲ್ಲಿ ಪೊಲೀಸರ ವಶಕ್ಕೆ ಸಿಕ್ಕಂತಾಗಿದೆ. ಮುಂದಿನ ದಿನಗಳಲ್ಲಿ ಉಳಿದವರನ್ನು ಪತ್ತೆ ಮಾಡಲಾಗುತ್ತದೆ. ಪ್ರಸ್ತುತ ಬಂಧಿತರನ್ನು ಮಹ್ಮದ್ ಗೌಸ್, ವೆಂಕಟೇಶ, ಜಾವೀದ್ ಹುಸೇನ್ ಎಂದು ಗುರುತಿಸಲಾಗಿದೆ. ಈ ಮೂವರಿಂದ ಬೆತ್ತ, ಮಾರಕಾಸ್ತ್ರ, 2 ಕಾರು, 1 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.

Leave a Comment