ಕುಖ್ಯಾತ ಅರಣ್ಯಗಳ್ಳರ ಬಂಧನ

ಮುಂಡಗೋಡ,ಜು12 ಹಲವು ಪ್ರಕರಣಕ್ಕೆ ಬೇಕಾಗಿದ್ದ ಕುಖ್ಯಾತ ಅರಣ್ಯಗಳ್ಳರ ಬಂಧಿಸುವಲ್ಲಿ  ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಂಗಳವಾರ ಯಶಸ್ವಿಯಾಗಿದ್ದಾರೆ.

 
ಬಂಧಿತನನ್ನು ಶಿರಶಿ ತಾಲೂಕಿನ ರಾಜೀವ ನಗರದ ಅಬುಲ್ ಖುದ್ದಾಸ್ ಅಹಮ್ಮದಮಿಯಾ ಖತೀಬ, ಎಂಬಾತನಾಗಿದ್ದಾನೆ. ಹಲವು ವರ್ಷದಿಂದ ಅರಣ್ಯ ಇಲಾಖೆಗೆ ಚಳ್ಳೆಹಣ್ಣ ತಿನ್ನಿಸಿ ಪರಾರಿಯಾಗುತ್ತಿದ್ದ. ಈತನಗಾಗಿ ವಿóಶೇಷ ತಂಡ ರಚಿಸಲಾಗಿತ್ತು ಖಚಿತ ಮಾಹಿತಿ ಮೇರೆಗೆ  ಕೆನರಾ ಮುಖ್ಯ ಅರಣ್ಯ ಸಂರಕ್ಷಣಾಧೀಕಾರಿ ಅಶೋಕ ಬಾಸರಗೋಡ ಸಲಹೆ ಯಲ್ಲಾಪುರ ಉಪ ಅರಣ್ಯ ಸಂರಕ್ಷಾಧಿಕಾರಿ ಡಿ.ಯತೀಶ ಕುಮಾರ ಮಾರ್ಗದರ್ಶದಂತೆ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಮಂಗಳವಾರ ಶಿರಶಿಯಲ್ಲಿ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

 
ಈ ಆರೋಪಿಯು ಮಂಚಿಕೇರಿ 4, ಕಾತೂರ ವಲಯ 2, ಬನವಾಸಿ ವಲಯ 1, ರಾಮನಗುಳಿ ವಲಯದಲ್ಲಿ1, ಮಾಸ್ತಿಕಟ್ಟಾ ವಲಯದಲ್ಲಿ 3 ಇನ್ನು ಹಲವು ಪ್ರಕರಣದಲ್ಲಿ ನೇರ ಆರೋಪಿಯಾದ ಬಗ್ಗೆ ಒಪ್ಪಿಕೊಂಡಿದ್ದಾನೆ ಮತ್ತು ಇತನ ಸಹಚರರ ಬಗ್ಗೆ ತಿಳಸಿದ್ದಾನೆ ಎನ್ನಲಾಗಿದೆ.
ಕಾರ್ಯಚರಣೆಯಲ್ಲಿ ಮಂಚಿಕೇರಿ ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧೀಕಾರಿ ಪ್ರಶಾಂತ ಪಿ.ಕೆ.ಎಂ, ಹಾಗೂ ಕಾತೂರ ಅರಣ್ಯಧಿಕಾರಿ ಮಹೇಶ ಗೌಡ, ನೇತೃತ್ವದ ವಿಶೇಷ ತಂಡ ಕಾರ್ಯಚರಣೆ ನಡೆಸಿದೆ.

Leave a Comment