ಕುಂಭ

ಗುರುದೇವನು ವರ್ಷಾರಂಭದಿಂದ 12.9.2017ವರೆಗೆ 8ನೆಯವನಾಗಿದ್ದು, ನಂತರ 9ನೇಯವನಾಗಿ ಬಲಿಷ್ಠನಾಗಿರುತ್ತಾನೆ. 8ರಲ್ಲಿದ್ದಾಗ ಈ ವರ್ಷದ ಪೂರ್ವಾರ್ಧ ಭಾಗ ಅಷ್ಟೊಂದು ಫಲಕಾರಿಯಲ್ಲ. ಅಭಿವೃದ್ಧಿಗೆ ಆತಂಕಗಳೇ ಹೆಚ್ಚು. ಆದರೂ ಧೈರ್ಯದಿಂದ ಎದೆಗೊಟ್ಟು ನಿಲ್ಲುವಿರಿ. ಸನ್ನಿವೇಶಗಳನ್ನು ಎದುರಿಸುವಿರಿ. ಪೂರ್ವ ಯೋಜಿತವಾಗಿ ವಿವೇಚನೆಯಿಂದ ಆರ್ಥಿಕ ಸಂಪತ್ತು ಕಾಪಾಡಿಕೊಂಡಲ್ಲಿ ಅನುಕೂಲತೆ ಹೆಚ್ಚುವುದು. ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ. ಈ ಬಗ್ಗೆ ಅಲಕ್ಷ ಬೇಡ. ನಂಬಿಗಸ್ಥರು ಮೋಸ ಜಾಲ ಹೂಡುವ ಸಂಭವವಿದೆ. ನಿಮ್ಮ ಸ್ವಭಾವವನ್ನು ದುರುಪಯೋಗಪಡಿಸಿಕೊಳ್ಳುವವರೆಗೆ ಹೆಚ್ಚು. ಸರ್ಕಾರಿ ಕೆಲಸಗಳನ್ನು ಮುಂದೂಡುವುದು ಸೂಕ್ತ. ಕೊಟ್ಟ ಹಣ ಸಕಾಲಕ್ಕೆ ಬಾರದು. ಸಾಲಗಾರರ ಉಪಟಳ ಹೆಚ್ಚುತ್ತದೆ. ಹಳೆಯ ರಾಗ-ದ್ವೇಷಗಳು ಮರುಕಳಿಸುತ್ತವೆ. ಮುನ್ನೆಚ್ಚರಿಕೆ ಇರಲಿ. ಇದ್ದ ಆಸ್ತಿಯನ್ನು ಜೋಪಾನವಾಗಿ ಸಂರಕ್ಷಿಸಿಕೊಳ್ಳಿ. 9ನೆಯ ಗುರುವಿನ ಅವಧಿಯು ಕಳೆದುಕೊಂಡಿರುವ ಮಾನ, ಸಮ್ಮಾನಗಳನ್ನೆಲ್ಲ ಮರಳಿ ಪಡೆಯುವಿರಿ. ಇಚ್ಛಿತ ಕಾರ್ಯ ಕಲಾಪಗಳು ಸಫಲವಾಗುವವು. ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವಿರಿ. ವಿಫಲ ಆದಾಯ ಪಡೆಯುವಿರಿ. ರೈತರು, ಉದ್ಯಮಿಗಳು, ದ್ವಿಗುಣ ಲಾಭ ಪಡೆಯುವರು. ಶನಿಯು 20.6.2017 ವರೆಗೆ 11ನೆಯವನು. ಅಗಣಿತ ಸಂಪಾದನ, ಸ್ಥಿರಾಸ್ತಿ ಕ್ರಯ ಮಾಡಿಸುವನು. ವಾಹನ ಖರೀದಿ ನಡೆಯುವುದು. ವೈದ್ಯರು, ವಕೀಲರು, ಸಮಾಜ ಸೇವಕರು ಪರಿಶ್ರಮದಿಂದ ಸಂಪಾದಿಸುವರು. ರಾಜಕೀಯ ರಂಗದಲ್ಲಿ ಪ್ರವೇಶ ಮಾಡಿ ಪಕ್ಷ ಸಿದ್ಧಾಂತ ಪ್ರಚಾರಕರಾಗಿ ಸೇವೆ ಮಾಡುವಿರಿ. ಸಂಘಟನೆಗೆ ಒತ್ತು ಕೊಡುವಿರಿ.

ಆದಾಯ – 11, ವ್ಯಯ – 05