ಕುಂಬ್ಳೆ ೧೦ ವಿಕೆಟ್ ಸಾಧನೆಗೆ 19 ವರ್ಷದ ಸಂಭ್ರಮ

ನವದೆಹಲಿ, ಫೆ ೭- ಫಿರೋಜ್ ಶಾ ಕೋಟ್ಲಾ ಅಂಗಳದಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ಪಾಕಿಸ್ತಾನ ವಿರುದ್ಧ ಒಂದೇ ಇನಿಂಗ್ಸ್’ನಲ್ಲಿ ೧೦ ವಿಕೆಟ್ ಉರುಳಿಸಿ ಇತಿಹಾಸ ನಿರ್ಮಾಣ ಮಾಡಿ ಇಂದಿಗೆ ೧೯ ವರ್ಷಗಳೇ ಕಳೆದಿವೆ. ಈ ವೇಳೆ ಕುಂಬ್ಳೆಗೆ ಮತ್ತೊಮ್ಮೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿವೆ.

೧೯೯೯ರಲ್ಲಿ ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಅನಿಲ್ ಕುಂಬ್ಳೆ ೯ ವಿಕೆಟ್ ಉರುಳಿಸಿ ಇನ್ನೊಂದು ವಿಕೆಟ್ ಪಡೆದು ಇತಿಹಾಸ ನಿರ್ಮಿಸಲು ಎದುರು ನೋಡುತ್ತಿದ್ದರು. ಆ ವೇಳೆ ಕ್ರೀಸ್‌ನಲ್ಲಿ ವಕಾರ್ ಯೂನೀಸ್ ಹಾಗೂ ವಾಸೀಂ ಅಕ್ರಂ ಬ್ಯಾಟಿಂಗ್ ಮಾಡುತ್ತಿದ್ದರು.

ಈ ವೇಳೆ ವಕಾರ್ ಯೂನೀಸ್ ಬ್ಯಾಟಿಂಗ್ ಮಾಡುತ್ತಿದ್ದ ಅಕ್ರಂ ಬಳಿ ಬಂದು ರನ್ ಆಗೋಣವೇ ಎಂದು ಕೇಳಿದ್ದರಂತೆ. ಆಗ ಅಕ್ರಂ ರನ್ ಔಟ್ ಆಗೋದು ಬೇಡ. ಖಂಡಿತ ನಾನು ಕುಂಬ್ಳೆಗೆ ವಿಕೆಟ್ ಒಪ್ಪಿಸುವುದಿಲ್ಲ ಎಂದು ಭರವಸೆ ನೀಡಿದ್ದರಂತೆ. ಆದರೆ ಕುಂಬ್ಳೆ ಮೋಡಿಗೆ ಅಕ್ರಂ ೧೦ ಬಲಿಯಾದರು.

ಫೆಬ್ರವರಿ ೭, ೧೯೯೯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಚಮತ್ಕಾರವೊಂದು ನಡೆದಿತ್ತು ಎಂದು ಅಭಿಮಾನಿಗಳು ಇಂದಿಗೂ ಮೆಲುಕು ಹಾಕುತ್ತಾರೆ. ಟೆಸ್ಟ್ ಕ್ರಿಕೆಟ್‌ನ ಇನ್ನಿಂಗ್ಸ್ ಒಂದರಲ್ಲಿ ಎಲ್ಲಾ ೧೦ ವಿಕೆಟ್ ಗಳನ್ನು ಪಡೆದ ಜಗತ್ತಿನ ಎರಡನೇ ಆಟಗಾರ ಎನಿಸಿಕೊಂಡಿದ್ದರು ಭಾರತದ ಅನಿಲ್ ಕುಂಬ್ಳೆ.  ೪೨೦ ರನ್ ಗಳ ಗುರಿ ಪಡೆದಿದ್ದ ಪಾಕಿಸ್ತಾನ, ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಹವಣಿಸಿತ್ತು. ೭೪ ರನ್ ಗಳಿಗೆ ೧೦ ವಿಕೆಟ್ ಪಡೆದ ಕುಂಬ್ಳೆ, ಪಾಕಿಸ್ತಾನದ ಕನಸನ್ನು ನುಚ್ಚು ನೂರು ಮಾಡಿದ್ದರು.
ಭಾರತ ೨೧೨ ರನ್ ಗಳಿಂದ ಗೆಲುವು ಸಾಧಿಸಿತ್ತು. ಕುಂಬ್ಳೆ ಈ ಸಾಧನೆ ಮಾಡಿ ೧೯ ವರ್ಷಗಳಾಗಿವೆ. ಟೆಸ್ಟ್ ಕ್ರಿಕೆಟ್ ನ ಇತಿಹಾಸದಲ್ಲೇ ಇದೊಂದು ಅದ್ವಿತೀಯ ದಿನವಾಗಿ ಗುರುತಿಸಿಕೊಂಡಿದೆ.

Leave a Comment