ಕುಂದಾಪುರ: ದೇವಸ್ಥಾನದಲ್ಲಿ 10 ಲಕ್ಷ ರೂ ಮೌಲ್ಯದ ಬೆಳ್ಳಿ ಆಭರಣ ಕಳವು

ಕುಂದಾಪುರ, ಫೆ 27 -ಉಡುಪಿ ಜಿಲ್ಲೆಯ ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬದಕೆರೆಯ ಲಕ್ಷ್ಮೀ ಜನಾರ್ದನ ದೇವಸ್ಥಾನದಿಂದ 10 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣಗಳನ್ನು ಕಳವು ಮಾಡಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ

ಬುಧವಾರ ತಡರಾತ್ರಿ ಈ ಘಟನೆ ಸಂಭವಿಸಿದೆ. ಗಮನಾರ್ಹ ಸಂಗತಿಯೆಂದರೆ ಕಳೆದ ಎರಡು ತಿಂಗಳಲ್ಲಿ ವರದಿಯಾದ ನಾಲ್ಕನೇ ಘಟನೆ ಇದಾಗಿದೆ.

ಕಳ್ಳರು ದೇವಾಲಯದ ಬೆಳ್ಳಿ ಬಾಗಿಲಿನ ಚೌಕಟ್ಟು ಮತ್ತು ಇತರ ಬೆಳ್ಳಿ ವಸ್ತುಗಳನ್ನು ಕಳವು ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ದೇವಾಲಯದಲ್ಲಿ ಅಳವಡಿಸಲಾದ 50,000 ರೂ ಮೌಲ್ಯದ ಸಿಸಿಟಿವಿ ಡಿವಿಆರ್ ಮತ್ತು ಎಲ್ಇಡಿ ಟಿವಿ ಸಹ ಕಾಣೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೈಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

Leave a Comment