ಕುಂದಾಪುರ ಜೋಡಿ ಕೊಲೆ: ಜಿ.ಪಂ. ಸದಸ್ಯನಿಗೆ ಜಾಮೀನು

ಕುಂದಾಪುರ, ಜು.೧೭- ಕೋಟದಲ್ಲಿ ಆರು ತಿಂಗಳ ಹಿಂದೆ ನಡೆದಿರುವ ಯತೀಶ್ ಕಾಂಚನ್ ಹಾಗೂ ಭರತ್ ಜೋಡಿ ಕೊಲೆ ಪ್ರಕರಣದ ೯ನೇ ಆರೋಪಿ ಜಿಲ್ಲಾ ಪಂಚಾಯಿತಿ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆಗೆ ರಾಜ್ಯ ಉಚ್ಛ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಾಲಯ ಸಂಖ್ಯೆ ೨೫ರಲ್ಲಿ ಮಂಗಳವಾರ ಒಂಭತ್ತನೇ ಪ್ರಕರಣವನ್ನಾಗಿ ಕೈಗೆತ್ತಿಕೊಂಡ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಆರೋಪಿ ಪರ ವಾದವನ್ನು ಆಲಿಸಿದ ಬಳಿಕ ರಾಘವೆಂದ್ರ ಬಾರಿಕೆರೆಗೆ ಶರತ್ತುಬದ್ಧ ಜಾಮೀನು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇದೇ ಸಂದರ್ಭ ಪೊಲೀಸ್ ಪೇದೆ ಪ್ರಕರಣದ ಆರೋಪಿ ವೀರೇಂದ್ರನ ಜಾಮೀನು ಅರ್ಜಿಯನ್ನು ವಾಪಸ್ ಪಡೆಯುವಂತೆ ನ್ಯಾಯಾಧೀಶರು ಆದೇಶಿಸಿದ ಹಿನ್ನೆಲೆಯಲ್ಲಿ ವೀರೇಂದ್ರನ ಜಾಮೀನು ಅರ್ಜಿ ತಿರಸ್ಕೃತಗೊಂಡಂತಾಗಿದೆ.

Leave a Comment