ಕುಂಚೂರು ಗ್ರಾ.ಪಂನಲ್ಲಿ ಭ್ರಷ್ಠಾಚಾರ; ತನಿಖೆಗೆ ಆಗ್ರಹ

ದಾವಣಗೆರೆ.ಅ.12; ಹರಪನಹಳ್ಳಿ ತಾಲ್ಲೂಕು ಕುಂಚೂರು ಗ್ರಾ.ಪಂನಲ್ಲಿ ನಡೆದ ಅವ್ಯವಹಾರದ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಮಾಜ ಸೇವಕ ಎ.ಲಕ್ಷ್ಮಣ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾತನಾಡಿದ ಅವರು ಕುಂಚೂರು ಗ್ರಾ.ಪಂನಲ್ಲಿ 49 ಲಕ್ಷಕ್ಕೂ ಹೆಚ್ಚು ಹಣ ದುರುಪಯೋಗವಾಗಿದೆ. ಈ ಬಗ್ಗೆ ಜಿ.ಪಂ ಸಿಇಒ ಅವರಿಗೆ ತನಿಖೆ ನಡೆಸುವಂತೆ ಮನವಿ ಮಾಡಲಾಗಿತ್ತು. ಅದರಂತೆ ಸಿಇಒ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆಸಲಾಗಿತ್ತು ಈ ವೇಳೆ ಭ್ರಷ್ಠಾಚಾರ ನಡೆದಿರುವುದು ಸಾಬೀತಾಗಿತ್ತು ಹಾಗೂ ಪಿಡಿಒಗಳನ್ನು ಅಮಾನತು ಮಾಡಲಾಗಿತ್ತು ಆದರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಎಂ ಸುಧಾಕರ್ ಮೇಲೆ ಯಾವುದೇ ಶಿಸ್ತುಕ್ರಮ ತೆಗೆದುಕೊಂಡಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರರು. ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಮರಣ ಹೊಂದಿದವರ ಖಾತೆಗೆ ಹಣ ಜಮಾವಣೆ ಮಾಡಲಾಗಿದೆ ಅದಲ್ಲದೇ ಉಳಿದ ಯೋಜನೆಗಳ ಅಡಿಯಲ್ಲಿ ಹಣ ದುರುಪಯೋಗ ಮಾಡಿಕೊಳ್ಳಲಾಗಿದೆ. ಒಂದು ಇಂಗು ಗುಂಡಿಗೆ 65 ಸಾವಿರ ರೂ ವೆಚ್ಚ ತೋರಿಸಲಾಗಿದೆ. ಈ ರೀತಿ ಸುಮಾರು 7 ಗುಂಡಿಗಳ ಲೆಕ್ಕದಲ್ಲಿ ಹಣ ದುರುಪಯೋಗ ಮಾಡಲಾಗಿದೆ.ಕುಂಚೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ಕೂಡಲೇ ಅಧಿಕಾರಿಗಳು ಗ್ರಾ.ಪಂ ಅಧ್ಯಕ್ಷರ ವಿರುದ್ದ ಕ್ರಮ ಕೈಗೊಂಡು ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾ.ಪಂ ಸದಸ್ಯರಾದ ನಾಗರಾಜ್, ನಿಂಗಪ್ಪ ಇದ್ದರು.

Leave a Comment