ಕಿವೀಸ್ ಮುಂದೆ ಮಂಕಾದ ಭಾರತ

ವೆಲ್ಲಿಂಗ್ಟನ್, ಫೆ. 22- ಬಾಸಿನ್ ರಿಸರ್ವ್ ಮೈದಾನದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 165 ರನ್‌ಗೆ ಅಲೌಟ್ ಆಗಿ ಒತ್ತಡಕ್ಕೆ ಸಿಲುಕಿದರೇ, ನಂತರ ಬ್ಯಾಟಿಂಗ್ ಆರಂಭಿಸಿದ ಕಿವೀಸ್ ಪಡೆ ದಿನದಾಟದ ಅಂತ್ಯಕ್ಕೆ 5 ವಿಕೆಟ್‌ಗೆ 216 ರನ್‌ಗಳಿಸಿ ಮುನ್ನಡೆ ಸಾಧಿಸಿದೆ.

ಕಿವೀಸ್ ಬೌಲಿಂಗ್ ದಾಳಿಗೆ ದೂಳಿಪಟವಾಗಿರುವ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಅಲ್ಪಮೊತ್ತಕ್ಕೆ ಕುಸಿದಿದೆ. ಈಗಾಗಲೇ ಏಕದಿನ ಸರಣಿಯಲ್ಲಿ ಹೀನಾಯ ಸೋಲು ಕಂಡಿರುವ ಭಾರತ ಟೆಸ್ಟ್‌ನಲ್ಲು ವೈಫಲ್ಯ ಕಂಡಿದೆ.

cricket

ನಿನ್ನೆ ಆರಂಭವಾದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ, ಮೊದಲ ದಿನದಾಟದಂತ್ಯಕ್ಕೆ 55 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 122 ರನ್ ಗಳಿಸಿತ್ತು. ಆದರೆ, ಎರಡನೇ ದಿನದ ಆಟದಲ್ಲಿ ಕಿವೀಸ್ ಬೌಲರ್‌ಗಳ ಮಾರಕ ಬೌಲಿಂಗ್ ದಾಳಿಗೆ ಭಾರತ 68.1 ಓವರ್ ಗಳಲ್ಲಿ ಕೇವಲ 165 ರನ್ ಗಳಿಗೆ ಆಲೌಟ್ ಆಗಿ ಮೊದಲ ಇನ್ನಿಂಗ್ಸ್ ಮುಗಿಸಿತ್ತು. ಬಳಿಕ ಇನ್ನಿಂಗ್ಸ್ ಆರಂಭಿಸಿರುವ ನ್ಯೂಜಿಲೆಂಡ್ ತಂಡದ ಪರ ಕೇನ್ ವಿಲಿಯಮ್ಸನ್(89) ಹಾಗೂ ರಾಸ್ ಟೇಲರ್ (44) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಎರಡನೇ ದಿನದಂತ್ಯಕ್ಕೆ 71.1ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 216 ರನ್ ಗಳಿಸಿದೆ. ಈ ಮೂಲಕ 51 ರನ್ ಅಂತರದ ಮುನ್ನಡೆ ದಾಖಲಿಸಿದೆ. ಸದ್ಯ 14 ರನ್ ಗಳಿಸಿರುವ ಹೆನ್ರಿ ನಿಕೋಲಸ್ ಮತ್ತು 4 ರನ್ ಹೊಡೆದಿರುವ ಕಾಲಿನ್ ಡಿ ಗ್ರಾಂಡ್ ಹೋಮ್ ಕ್ರೀಸ್‌ನಲ್ಲಿದ್ದಾರೆ.

ಭಾರತದ ಪರ ಇಂದು ಅಂಜಿಕ್ಯಾ ರೆಹಾನೆ ಮತ್ತು ರಿಷಬ್ ಪಂತ್ ಆಟ ಮುಂದುವರೆಸಿದರು. ನ್ಯೂಜಿಲೆಂಡ್ ದಾಳಿಗೆ ಸಮರ್ಥ ಉತ್ತರ ನೀಡಲು ಭಾರತ ವಿಫಲವಾಗಿ ಬಹುಬೇಗನೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ನತ್ತ ಮುಖ ಮಾಡಿದರು. ಅಜಿಂಕ್ಯಾ ರೆಹಾನೆ 46 ಹಾಗೂ ಮೊಹಮದ್ ಶಮಿ 21 ಹಾಗೂ ವೃಷಭ್ ಪಂತ್ 16 ರನ್‌ಗಳಿಸಲಷ್ಟೇ ಶಕ್ತರಾದರು. ಭಾರತ ಪರ ಇಶಾಂತ್ ಶರ್ಮಾ 3 ವಿಕೆಟ್ ಪಡೆದರೆ, ಮೊಹಮದ್ ಶಮಿ ಮತ್ತು ರವಿಚಂದ್ರನ್ ಅಶ್ವಿನ್ ತಲಾ ಒಂದೊಂದು ವಿಕೆಟ್ ಉರುಳಿಸಿದ್ದಾರೆ. ಭಾರತದ ಆಟಗಾರರು 200 ರ ಗಡಿ ದಾಟಿಸಲು ಬಿಡದೇ 165 ರನ್‌ಗ ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದ ಟಿಮ್ ಸೌಥಿ ಹಾಗೂ ಕೈಲ್ ಜಾಮಿಸನ್ ತಲಾ ನಾಲ್ಕು ವಿಕೆಟ್ ಕಬಳಿಸಿದರು.

5ನೇಸಲ 200ಕ್ಕಿಂತ ಕಡಿಮೆ ರನ್
ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಇನಿಂಗ್ಸ್‌ನಲ್ಲಿ ಭಾರತ ತಂಡ ಕೇವಲ 165 ರನ್‌ಗಳಿಗೆ ಆಲೌಟ್ ಆಗಿದೆ. ಆ ಮೂಲಕ ವಿರಾಟ್ ಕೊಹ್ಲಿ ನೇತೃತ್ವದ ತಂಡ ಒಟ್ಟಾರೆ ಐದನೇ ಬಾರಿಗೆ 200ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆದಂತಾಗಿದೆ. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡ ಮೊದಲ ದಿನದಾಟದಂತ್ಯಕ್ಕೆ 55 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ ೧೨೨ ರನ್ ಗಳಿಸಿತ್ತು. ಎರಡನೇ ದಿನ ಆ ಮೊತ್ತಕ್ಕೆ ಕೇವಲ 43 ರನ್ ಸೇರಿಸಲಷ್ಟೇ ವಿರಾಟ್ ಕೊಹ್ಲಿ ಪಡೆ ಶಕ್ತವಾಯಿತು.

ಸಂಕ್ಷೀಪ್ತ ಸ್ಕೋರ್
ಪ್ರಥಮ ಇನ್ನಿಂಗ್ಸ್ (2ನೇ ದಿನದಾಟದ ಅಂತ್ಯಕ್ಕೆ)
ಭಾರತ 165/ ಅಲೌಟ್
ನ್ಯೂಜಿಲ್ಯಾಂಡ್ 216/5 (71.1ಓವರ್)

Leave a Comment