ಕಿರುತೆರೆ ಲೋಕದ ನಕ್ಷತ್ರ ಅನಿರುದ್ಧ್ ಈಗ ಎಲ್ಲರ ಕಣ್ಮಣಿ

* ಚಿಕ್ಕನೆಟಕುಂಟೆ ಜಿ.ರಮೇಶ್

ಕನ್ನಡ ಕಿರತೆರೆಯಲ್ಲಿ ಹೊಸ ನಕ್ಷತ್ರದ ಆಗಮನವಾಗಿದೆ. ಈ ನಕ್ಷತ್ರದ ಬೆಳಕಿಗೆ ಧಾರಾವಾಹಿ ಲೋಕದಲ್ಲಿ ಹೊಸ ಹೊಸ ದಾಖಲೆಗಳು ಸೇರಿಕೊಂಡಿವೆ.ಇದು ತಂಡದ ಯಶಸ್ಸಿಗೆ ಸಿ?ಖಕ್ಕ ಪ್ರತಿಫಲ. ಮೇಲಾಗಿ ಬಹು ದಿನಗಳಿಂದ ಎದುರು ನೋಡುತ್ತಿದ್ದ ಘಳಿಗೆ ಈ ರೀತಿಯಲ್ಲಿ ಸಾಕಾರಗೊಂಡಿದೆ.

ಆ ನಕ್ಷತ್ರ ಯಾರು ಅನ್ನುತ್ತೀರಾ.. ಅವರೇ , ಸಾಹಸ ಸಿಂಹ ವಿಷ್ಣು ದಾದಾ ಅವರ ಅಳಿಯ ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ, ಗಾಯಕ ಅನಿರುದ್ಧ್ ಜತ್ಕರ್. ಕನ್ನಡ ಕಿರುತೆರೆ ಲೋಕದ ಸೂಪರ್ ಸ್ಟಾರ್. ಈಗ ಎಲ್ಲರ ಕಣ್ಮಣಿಯಾಗಿದ್ದಾರೆ. ಜೊತೆಗೆ ಜನರ ಮನೆ -ಮನೆಗಳಲ್ಲಿ ಅನಿರುದ್ಧ್ ಎನ್ನುವ ತಾರೆಯ ನಟನೆ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಇದುವೇ ” ಜೊತೆ ಜೊತೆಯಲಿ” ಧಾರಾವಾಹಿಯನ್ನು ಟಿಆರ್ ಪಿಯಲ್ಲಿ ನಂಬರ್ ಒನ್ ಸ್ಥಾನಕ್ಕೆ ಕೊಂಡೊಯ್ದಿದೆ.

ಚಿತ್ರರಂಗ ಪ್ರವೇಶಿಸಿ ೨೦ ವರ್ಷ ಪೂರೈಸಿರುವ ಅನಿರುದ್ಧ್ ಅವರಿಗೆ ಯಶಸ್ಸು ಕಿರುತೆರೆ ಮೂಲಕ ಸಿಕ್ಕಿದೆ. ಇದೀಗ ಅವರ ತಾರಾ ವರ್ಚಸ್ಸು ಮತ್ತಷ್ಟು ಹೆಚ್ಚಾಗಿದೆ. ಆದರೂ ನಯ, ವಿನಯ, ಸರಳತೆ ಕಿಂಚಿತ್ತೂ ಕಡಿಮೆಯಾಗಿಲ್ಲ ಅದಕ್ಕೆ ಕಾರಣ ಡಾ. ವಿಷ್ಣುವರ್ಧನ್ ಮತ್ತು ಭಾರತಿ ವಿಷ್ಣುವರ್ಧನ್ ಎಂಬ ಎರಡು ಧೈತ್ಯ ಶಕ್ತಿಗಳಿಂದ ಬಳುವಳಿಯಾಗಿ ಬಂದ ಉಡುಗೊರೆ.

ಲಾಕ್ ಡೌನ್ ನಿಂದಾಗಿ ಧಾರಾವಾಹಿ ಚಿತ್ರೀಕರಣಕ್ಕೆ ಬಿಡುವು ಇರುವುದರಿಂದ ಜಗತ್ತಿನ ವಿವಿಧ ಭಾಷೆಗಳ ಸಿನಿಮಾ ವೀಕ್ಷಣೆ ಮಾಡುತ್ತಾ ಹೊಸ ವಿಷಯ ಕಲಿಯುವ ಕಡೆಗೆ ಗಮನ ಹರಿಸಿದ್ದಾರೆ ಇದೇ ತಿಂಗಳ ೨೫ ರಿಂದ ಧಾರಾವಾಹಿ ಚಿತ್ರೀಕರಣದ ನಿರೀಕ್ಷೆಯಲ್ಲಿದ್ದಾರೆ.

ತಮ್ಮ ಕಿರುತೆರೆ ಮತ್ತು ಸಿನಿಮಾ ಯಾನದ ಬಗ್ಗೆ ಮಾತಿಗಿಳಿದ ಅನಿರುದ್ಧ್ ಅವರು, ಕಿರುತೆರೆಯಲ್ಲಿ ಸಿಕ್ಕಿರುವ ಯಶಸ್ಸು ಜನರು, ಕನ್ನಡಿಗರು, ಅಭಿಮಾನಿಗಳಿಗೆ ಸಲ್ಲಬೇಕು. ಚಿತ್ರರಂಗಕ್ಕೆ ಬಂದು ೨೦ ವರ್ಷವಾಗಿದೆ.ಎಲ್ಲೇ ಹೋದರು ನೀವು ಬೆಳೆಯಬೇಕು ಎನ್ನುವ ಹಾರೈಕೆ ಆಶೀರ್ವಾದ ಇಂದು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.

ಧಾರಾವಾಹಿಗೆ ಅವಕಾಶ ಬಂದಾಗ ಭಾರತಿ ಅಮ್ಮ ಅವರ ಸಾಕ್ಷ್ಯಚಿತ್ರ ಮಾಡುತ್ತಿದ್ದೆ .ಅದರಲ್ಲಿ ಬ್ಯುಸಿ ಇದ್ದೆ. ಎರಡು ಗಂಟೆ ಹದಿನೆಂಟು ನಿಮಿ಼ಷದ ಸಾಕ್ಷ್ಯ ಚಿತ್ರದಲ್ಲಿ ಕೆಲಸ ಬಾಕಿ ಇತ್ತು ಧಾರಾವಾಹಿ ಮಾಡಿ ಈ ಕೆಲವನ್ನೂ ಮಾಡಲು ಆಗುತ್ತದೆಯೇ ಎನ್ನುವ ಗೊಂದಲದಲ್ಲಿದ್ದೆ. ಮೊದಲು ಆಗಲ್ಲ ಕ್ಷಮಿಸಿ ಎಂದಿದ್ದೆ. ವಾಹಿನಿಯವರು ಮತ್ತೆ ಬಂದರು. ಪ್ರೀತಿಯಿಂದ ಕರೆದರು.ಆಗ ಮಗಳು ಶ್ಲೋಕ ನೀವು ನಟಿಸಿ ಎಂದು ಸಲಹೆ ನೀಡಿದರು. ಜೊತೆಗೆ ಪಾತ್ರದ ಬಗ್ಗೆ ಕೇಳಿದಾಗ ಸಾಕಷ್ಟು ಆಯಾಮಗಳಿದ್ದವು.ಆ ರೀತಿಯ ಪಾತ್ರ ಸಿನಿಮಾ ಅಥವಾ ರಂಗಭೂಮಿಯಲ್ಲಿ ಸಿಕ್ಕಿರಲಿಲ್ಲ.ಸಿಗುವುದೂ ಕಡಿಮೆ. ಅದು ಧಾರಾವಾಹಿಯ ಮೂಲಕ ಅಭಿವ್ಯಕ್ತ ಮಾಡಲು ಅವಕಾಶವಿದೆ ಎಂದು ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು ಮತ್ತು ಧಾರಾವಾಹಿ ನಿರ್ದೇಶಕ ಮತ್ತು ನಿರ್ಮಾಪಕ ಆರೂರು ಜಗದೀಶ್ ಸೇರಿದಂತೆ ಹಲವರ ಒತ್ತಾಯ ಮೇರೆಗೆ ನಟಿಸಲು ಒಪ್ಪಿಕೊಂಡೆ.

ಧಾರಾವಾಹಿಯಲ್ಲಿ ನಟಿಸುತ್ತಿರುವಾಗ ಕಿರುತೆರೆ ಲೋಕದ ವ್ಯಾಪ್ತಿ ತಿಳಿಯಿತು.ಜನರ ಮನೆ- ಮನದಲ್ಲಿ ಅವಕಾಶ ಸಿಕ್ಕಿದೆ ಇದಕ್ಕಿಂತ ಇನ್ನೇನು ಬೇಕು ಅನ್ನಿಸಿತು. ಪಾತ್ರ ಚೆನ್ನಾಗಿದೆ ಅಂತ ಗೊತ್ತಿತ್ತೇ ವಿನಃ ಈ ಮಟ್ಟಕ್ಕೆ ಯಶಸ್ಸು ಬರುತ್ತದೆ ಎನ್ನುವ ನಿರೀಕ್ಷೆ ಇರಲಿಲ್ಲ. ಚಿತ್ರೀಕರಣದ ಸಮಯದಲ್ಲಿ ಸದಾ ಸಕಾರಾತ್ಮಕ ಮಾತುಗಳು ಧಾರಾವಾಹಿಯನ್ನು ಈ ಮಟ್ಟಕ್ಕೆ ತಂದಿದೆ. ಜೊತೆಗೆ ನನ್ನ ವಯಕ್ತಿಕ ಕುಟುಂಬದ ಸಹಕಾರದಿಂದ ಈ ಮಟ್ಟಕ್ಕೆ ಬೆಳೆಯಲು ಸಹಕಾರಿಯಾಯಿತು, ಜೊತೆ ಸಾಹಸ ಸಿಂಹ ವಿಷ್ಣು ವರ್ಧನ್ ಅವರ ಶ್ರೀರಕ್ಷೆಯಿಂದ ಯಶಸ್ಸು ಸಿಕ್ಕಿದೆ.ಇದು ರಾಜ್ಯದ ಜನರ ಯಶಸ್ಸು ಎಂದರು.

ಬೇರೆ ಬೇರೆ ಭಾಷೆಯ ಜನರು ಧಾರಾವಾಹಿಯ ಬಗ್ಗೆ ಮಾತನಾಡುತ್ತಾರೆ. ಕನ್ನಡಿಗರಲ್ಲದವರೂ ಬೇರೆ ಭಾಷೆಯವರು ಧಾರಾವಾಹಿ ನೋಡಿ ಕನ್ನಡ ಕಲಿಯುತ್ತಿರುವುದು ಖುಷಿಯ ಸಂಗತಿ ಜೊತೆಗೆ ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸುತ್ತಿದ್ದಾರೆ. ಯಶಸ್ಸು ಇಡೀ ತಂಡಕ್ಕೆ ಸೇರಬೇಕು. ವೈಯಕ್ತಿಕ ಕುಟುಂಬ ಮತ್ತು ಬಾಹ್ಯ ಕುಟುಂಬದ ಸಹಕಾರದಿಂದ ಬೆಳವಣಿಗೆ ಸಹಕಾರಿಯಾಗಿದೆ.

ಪ್ರತಿ ದಿನವೂ ಸವಾಲು, ಅದಕ್ಕೆ ಹೊಂದಿಕೊಂಡು ನಡೆಯುತ್ತೇವೆ. ಹೊಸ ಸನ್ನಿವೇಶ, ಸಂಭಾಷಣೆ ಹೊಸದಾಗಿಯೇ ಇರುವುದರಿಂದ ಸವಾಲೇ ಸರಿ. ೬ ರಿಂದ ೭ ಸಾವಿರ ಸಿನಿಮಾ ಸಂಗ್ರಹ ನನ್ನ ಬಳಿ ಇದೆ.

ನನ್ನ ಫ್ಯಾಶನ್ ಮತ್ತು ಉದ್ಯಮ ಸಿನಿಮಾವೇ. ಹೀಗಾಗಿ ಪ್ರತಿದಿನ ಹೊಸದನ್ನು ಕಲಿಯಿತ್ತಿದ್ದೇನೆ. ನನ್ನೊಂದಿಗೆ ಪುತ್ರ ಜೇಷ್ಠ ವರ್ಧನ್ ಮತ್ತು ಪುತ್ರಿ ಶ್ಲೋಕಾ ಅವರ ಸಹಕಾರವೂ ಇದೆ .ಜೊತೆಗೆ ಕಾದಂಬರಿ ಓದುವ ಹವ್ಯಾಸವೂ ಇದೆ ಎಂದು ಹೇಳಿಕೊಂಡರು.

ಹಿಂದೂಸ್ತಾನಿ ಸಂಗೀತ ತರಬೇತಿ

ರಂಗಭೂಮಿ,ನಟನೆಯ ಜೊತೆಗೆ ಹಿಂದೂಸ್ತಾನಿ ಸುಗಮ ಸಂಗೀತದಲ್ಲಿ ಎರಡು ವರ್ಷದ ಡಿಪ್ಲೋಮೊ ಹಾಗು ಶಾಸ್ತ್ರೀಯ ಸಂಗೀತವನ್ನು ಪಂಡಿತ್ ಭೀಮಸೇನಾ ಜೋಷಿ ಅವರ ಶಿಷ್ಯಂದಿರಾದ ಪಂಡಿತ್ ರಾಮಕೃಷ್ಣ ಪಟವರ್ಧನ್, ಪಂಡಿತ್ ಮಾಧವ ಗುಡಿ, ಅವರ ಬಳಿ ಕಲಿತಿದ್ದಾರೆ ನಟ ಅನಿರುದ್ಧ್.

ಹಾಡು ಎಂದರೆ ಎಲ್ಲಿಲ್ಲದ ಪ್ರೀತಿ ಅದು ಮನೆತನದಿಂದಲೇ ಬಂದಿದೆ. ನಾನು ಮತ್ತು ಶ್ರೀಮತಿ ಕೀರ್ತಿ ಅವರು ” ಕುಣಿದು ಕುಣಿದು ಬಾರೆ” ಚಿತ್ರದಲ್ಲಿ ಹಾಡಿದ್ದೇವೆ.ಇದಲ್ಲದೆ “ಗೌತಮ್” ಮತ್ತು ವಾಲ್ಮೀಕಿ ಚಿತ್ರದಲ್ಲಿ ಹಾಡಿದ್ದೇನೆ. ಕುಣಿದು ಕುಣಿದು ಬಾರೆ ನಾನೇ ನಟಿಸಿದ್ದೆ. ಅದನ್ನು ಹೊರತು ಪಡಿಸಿ ಬೇರೆ ನನ್ನ ಚಿತ್ರಗಳಿಗೆ ಸಿಕ್ಕಿಲ್ಲ. ಮುಂದೆ ಸಿಗಬಹುದು ನೋಡೋಣ ಎಂದರು.

೨೦ ವರ್ಷ ಪೂರ್ಣ

ನಟ ಅನಿರುದ್ಧ್ ಅವರು ಚಿತ್ರರಂಗ ಪ್ರವೇಶಿಸಿ ೨೦ ವರ್ಷ ಪೂರ್ಣಗೊಳಿಸಿದ್ದಾರೆ. ಈ ಅವಧಿಯಲ್ಲಿ ಅನೇಕ ಏಳು ಬೀಳುಗಳನ್ನು ಕಂಡಿದ್ದಾರೆ. ಯಶಸ್ಸಿಗಾಗಿ ಹಂಬಲಿಸುತ್ತಿದ್ದ ಸಮಯದಲ್ಲಿ “ಜೊತೆ ಜೊತೆಯಲಿ” ಧಾರಾವಾಹಿ ಸಿಕ್ಕಿದೆ ಜೊತೆಗೆ ಬಹುದಿನಗಳಿಂದ ಕಾಯುತ್ತಿದ್ದ ಯಶಸ್ಸಿನ ಕ್ಷಣ ಈಗ ಬಂದಿದೆ. ಖುಷಿ ಕೊಟ್ಟಿದೆ .ಸಿನಿಮಾಗಳಿಂದಲೂ ಅವಕಾಶ ಬರುತ್ತಿವೆ.ಲಾಕ್ ಡೌನ್ ಇರುವುದರಿಂದ ಸದ್ಯಕ್ಕೆ ಮುಂದಕ್ಕೆ ಹೋಗಿವೆ ಎಂದರು ಅನಿರುದ್ಧ್.

ಋಣ ತೀರಲು ಅಗದು.

ಈ ಕ್ಷೇತ್ರಕ್ಕೆ ಬರುತ್ತೇನೆ ಎಂದಾಗ ಪ್ರೋತ್ಸಾಹಿಸಿದರು. ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದೆ. ಇಂಟೀರಿಯರ್ ಡಿಸೈಸರ್ ಆಗಿಯೂ ಕೆಲಸ ಮಾಡಿದ್ದೇನೆ. ಸಿನಿಮಾದಲ್ಲಿ ನಾಯಕನಾದೆ ಅ ನಂತರ ಸಾಕಷ್ಟು ಏರಿಳಿತ ನೋಡಿದ್ದೇನೆ. ಸಮಯದಲ್ಲಿ ನನ್ನೊಂದಿಗೆ ಗಟ್ಟಿಯಾಗಿ ಕುಟುಂಬ ನಿಂತಿದೆ. ಅವರ ಋಣ ತೀರಿಸಲು ಆಗದು.

ವಿಭಾ ಚಾರಿಟಬಲ್ ಟ್ರಸ್ಟ್ ಮೂಲಕ ಶೈಕ್ಷಣಿಕ, ಆರೋಗ್ಯ, ಪರಿಸರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇವೆ. ಕಾಮಿಕ್ ಸರಣಿಯ ಪರಿಕಲ್ಪನೆ ಇತ್ತು ,ಇಬ್ಬರು ಸೂಪರ್ ಸ್ಟಾರ್ ಗಳಾದ ವಿಷ್ಣುವರ್ಧನ್ ಮತ್ತು ಭಾರತಿ ಅಮ್ಮ ಜೊತೆಗೆ ನಮ್ಮಮಕ್ಕಳು ಇದ್ದರು. ಇದಲ್ಲದೆ ತಾವು ಮಾಡಿದ ೬ ಆರು ಕಿರುಚಿತ್ರಗಳು ದಾಖಲೆಯ ಪುಟ ಸೇರಿದೆ. ಐದು ವಿಶ್ವ ದಾಖಲೆ, ಗೋಲ್ಡನ್ ಪ್ರಶಸ್ತಿ, ನಾಲ್ಕು ಏಷ್ಯನ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ ಬುಕ್ ನಲ್ಲಿಯೂ ಪ್ರಶಸ್ತಿ ಸಿಕ್ಕಿದೆ .ಈಗ ಸಂತಸ ತರಿಸಿದೆ ಎಂದರು.

Leave a Comment