ಕಿರುತೆರೆ ನಟ ಸಂಜೀವ್ ಕುಲಕರ್ಣಿ ಚಿಕಿತ್ಸೆಗೆ ನೆರವು ನೀಡುವಂತೆ ಕಿಚ್ಚ ಮನವಿ

ಬೆಂಗಳೂರು, ಜ ೭- ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಒಂದು ಕಾಲದಲ್ಲಿ ಬೇಡಿಕೆ ಕಲಾವಿದನಾಗಿದ್ದ ಸಂಜೀವ್ ಕುಲಕರ್ಣಿ ಇದೀಗ ಕಾರ್ಡಿಯೋಮಿಯೋಪತಿ ಸಮಸ್ಯೆಯಿಂದ ಬಳಲುತ್ತಿದ್ದು, ಈ ನಟನ ಚಿಕಿತ್ಸೆಗೆ ನೆರವಾಗುವಂತೆ ಕಿಚ್ಚ ಸುದೀಪ್ ಅವರು ಟ್ವೀಟರ್‌ನಲ್ಲಿ ಮನವಿ ಮಾಡಿದ್ದಾರೆ.

ಸಂಜೀವ್ ಕುಲಕರ್ಣಿ. ಅವರಿಗೆ ಈಗ ೪೯ ವರ್ಷ ವಯಸ್ಸು. ಆದರೆ ಕಳೆದ ೧೫ ವರ್ಷಗಳಿಂದ ಅವರು ಕಾರ್ಡಿಯೋಮಿಯೋಪತಿ ಎಂಬ ಕಾಯಿಲೆಗೆ ತುತ್ತಾಗಿದ್ದು, ಅಂದಿನಿಂದ ಲಕ್ಷಾಂತರ ರೂ ಖರ್ಚು ಮಾಡಿ ಚಿಕಿತ್ಸೆ ಪಡೆಯುತ್ತಲೇ ಇದ್ದಾರೆ. ಆದರೆ ಇದೀಗ ಅವರ ಸ್ಥಿತಿ ಇನ್ನೂ ಬಿಗಡಾಯಿಸಿದೆ. ಈ ಚಿಕಿತ್ಸೆಗೆ ಸುಮಾರು ೪೦ ಲಕ್ಷ ರೂಪಾಯಿ ಅಗತ್ಯವಿದೆಯಂತೆ. ಆದರೆ ಸಂಜೀವ್ ಕುಲಕರ್ಣಿ ಅವರ ಕುಟುಂಬ ಇಷ್ಟು ಹಣವನ್ನು ಖರ್ಚು ಮಾಡುವ ಸ್ಥಿತಿಯಲ್ಲಿ ಇಲ್ಲ. ಆದ್ದರಿಂದ ಇವರ ಕುಟುಂಬ ಜನತೆಯ ನೆರವಿನ ಹಸ್ತ ಚಾಚಿದೆ.

ಈ ಮನವಿಗೆ ಸ್ಪಂದಿಸಿದ ಸಾಕಷ್ಟು ಜನರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಇದುವರೆಗೂ ಸುಮಾರು ೧೦ ಲಕ್ಷ ಹಣ ಸಂಗ್ರಹವಾಗಿದ್ದು ಇನ್ನೂ ೩೦ ಲಕ್ಷ ರೂಪಾಯಿ ಹಣದ ಅವಶ್ಯಕತೆಯಿದೆ. ಕಿಚ್ಚ ಸುದೀಪ್ ಕೂಡಾ ಸಂಜೀವ್ ಅವರಿಗೆ ಸಹಾಯ ಮಾಡುವಂತೆ ಟ್ವಿಟ್ಟರ್‌ನಲ್ಲಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಇನ್ನು ಸಂಜೀವ್ ಕುಲಕರ್ಣಿ ಅವರ ಪುತ್ರ ಸೌರಭ್ ಕುಲಕರ್ಣಿ ಕೂಡಾ ನಟರೇ. ಪಾಪಾ ಪಾಂಡು ಧಾರಾವಾಹಿಯಲ್ಲಿ ಪಾಂಡುವಿನ ಎರಡನೇ ಪುತ್ರನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆಸಕ್ತರು ಫೇಸ್‌ಬುಕ್ ಅಕೌಂಟ್ ಅಥವಾ ಈ ಕೆಳಗಿನ ಲಿಂಕ್ ಸಂಪರ್ಕಿಸಬಹುದು.  https://www.facebook.com/sourabh.kulkarni.9693  https://milaap.org/fundraisers/support-sanjeev-kulkarni

Leave a Comment