ಕಿರುತೆರೆ ಕಾರ್ಮಿಕರಿಗೆ ಪಡಿತರ ವಿತರಣೆ : ಕೆಟಿವಿಎ

ಬೆಂಗಳೂರು, ಏ 15-ಕಳೆದ ಮೂರು ತಿಂಗಳಿನಿಂದ ಇಡಿ ಪ್ರಪಂಚವನ್ನೇ ಆತಂಕಕ್ಕೆ ದೂಡಿರುವ ಕೊರೋನಾ ವೈರಸ್‍ ಎಲ್ಲರ ಬದುಕನ್ನು ದುಸ್ತರಗೊಳಿಸುತ್ತ ನಿರ್ದಾಕ್ಷಿಣ್ಯವಾಗಿ ಎಷ್ಟೋ ಜೀವಗಳನ್ನು ಆಹುತಿ ತೆಗೆದುಕೊಂಡಿದೆ.

ಲಾಕ್ ಡೌನ್ ಕಾರಣದಿಂದ ವಿವಿಧ ವಲಯಗಳ ಜನರು ಮನೆಬಿಟ್ಟು ಹೊರಬರಲಾಗದೆ, ಉದ್ಯೋಗವಿಲ್ಲದೆ ಪರಿತಪಿಸುವಂತಾಗಿದೆ. ಇದೇ ವೇಳೆ ಕಿರುತೆರೆ ಉದ್ಯಮದಲ್ಲಿ ದಿನಗೂಲಿ ಕಾರ್ಮಿಕರು, ಕಲಾವಿದರು, ತಂತ್ರಜ್ಞರ ಸಂಖ್ಯೆ 6 ಸಾವಿರಕ್ಕೂ ಹೆಚ್ಚಿದೆ.

ಇವರೆಲ್ಲರೂ ಆರ್ಥಿಕ ಒತ್ತಡಕ್ಕೆ ಸಿಲುಕಿ, ಜೀವನ ನಿರ್ವಹಿಸಲು ಕಷ್ಟಪಡುತ್ತಿದ್ದಾರೆ. ಸದಸ್ಯರು ಈ ಕಷ್ಟಕ್ಕೆ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ –ಕೆಟಿವಿಎ ಸ್ಪಂದಿಸಿದೆ.

ಸುಮಾರು ಮೂರು ಸಾವಿರಕ್ಕೂ ಹೆಚ್ಚು ಸದಸ್ಯರಿಗೆ ದಿನಸಿ, ಧಾನ್ಯಗಳನ್ನು ಆಯಾ ಸದಸ್ಯರಿರುವ ಬಡಾವಣೆಗಳಿಗೆ ಹೋಗಿ ತಲುಪಿಸುವ ವ್ಯವಸ್ಥೆ ಮಾಡಿದೆ ಎಂದು ಕೆಟಿವಿಎ ಅಧ್ಯಕ್ಷ ಎಸ್ ವಿ ಶಿಕುಮಾರ್, ಕಾರ್ಯದರ್ಶಿ ವೀರೇಂದ್ರ ಬೆಳ್ಳಿಚುಕ್ಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment