ಕಿರುತೆರೆಯಲ್ಲಿ ಜೂ,ಹೇಮಮಾಲಿನಿ ಹವಾ :ನಿಶಾಳ ನಟನೆಗೆ ಪ್ರೇಕ್ಷಕರು ಫಿದಾ

ಜೀ ವಾಹಿನಿಯಲ್ಲಿ ಪ್ರಸಾರವಾಗುವ ಗಟ್ಟಿಮೇಳ ಧಾರಾವಾಹಿ ಈಗಾಗಲೇ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಬಡ ವರ್ಗದ ಕುಟುಂಬದಲ್ಲಿ ನಾಲ್ವರು ಹೆಣ್ಣು ಮಕ್ಕಳ ಮದುವೆಗೆ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತದೆ ಎಂಬುದನ್ನು ನಿರ್ದೇಶಕರು ಬಹಳ ಅಚ್ಚುಕಟ್ಟಾಗಿ ಮನಮುಟ್ಟವಂತೆ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಆಗಾಗ ಜಗಳ, ಅರಿವೇ ಇಲ್ಲದೇ ಹುಟ್ಟುವ ಪ್ರೀತಿ, ಅಪ್ಪ ಅಮ್ಮನಿಗೆ ತೋರಿಸುವ ಗೌರವ, ತಮ್ಮಲಿನ ಒಗ್ಗಟ್ಟು ಎಲ್ಲಾವನ್ನು ನಾಲ್ವರು ಹೆಣ್ಣು ಮಕ್ಕಳ ಪಾತ್ರಧಾರಿಗಳು ಅದ್ಭುತವಾಗಿ ನಿಭಾಯಿಸುತ್ತಿದ್ದಾರೆ. ಅದರಲ್ಲೂ ಅಮೂಲ್ಯ ಅಲಿಯಾಸ್ ನಿಶಾ ಅವರು ಬಜಾರಿ ಪಾತ್ರದಲ್ಲಿ ಜನರಿಗೆ ತುಂಬಾ ಇಷ್ಟವಾಗಿದ್ದಾರೆ. ಕನ್ನಡ ಕಿರಿತೆರೆಯಲ್ಲಿ ಈ ಜ್ಯೂನಿಯರ್ ಹೇಮಾಮಾಲಿನಿ ಹವಾ ಜೋರಾಗಿಯೇ ಇದೆ ಎಂದರೆ ತಪ್ಪಾಗಲಾರದು.

ಈಗಾಗಲೇ ಚಿಂಟು ಟಿವಿ ನೋಡಿದವರಿಗೆ ಈ ನಿಶಾ ಚಿರಪರಿಚಿತ, ೬ನೇ ತರಗತಿಯಲ್ಲಿಯೇ ಮಕ್ಕಳ ಚಿಂಟು ವಾಹಿನಿಯಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಅಷ್ಟೆ ಅಲ್ಲ ಈ ಬೆಡಗಿ ಮಲಿಯಾಳಿಯಾದರೂ ಕನ್ನಡವನ್ನು ಕರಗತ ಮಾಡಿಕೊಂಡು ಸಲೀಸಾಗಿ ಮಾತನಾಡುತ್ತಾರೆ ಎಂದರೆ ನಿಜಕ್ಕೂ ಹೆಮ್ಮೆಪಡುವ ವಿಚಾರ.

*ನಿಶಾ ಅವರ ಪರಿಚಯ?
ನನ್ನ ಪೂರ್ತಿ ಹೆಸರು ನಿಶಾ ರವಿಕೃಷ್ಣನ್, ನಟನೆ ಬಿಟ್ಟು ಸಿಂಗಿಂಗ್ , ಡ್ಯಾನ್ಸಿಂಗ್‌ನಲ್ಲಿ ತುಂಬಾ ಆಸಕ್ತಿ ಇದೆ, ಗಾಢಫಾದರ್ ಇಲ್ಲದೆಯೇ ೬ನೇ ತರಗತಿಯಲ್ಲಿಯೇ ನಿರೂಪಕಿಯಾಗಿ ಇಂಡಸ್ಟ್ರಿಗೆ ಕಾಲಿಟ್ಟ ನನಗೆ ಅಪ್ಪ ರವಿ ಹಾಗೂ ಅಮ್ಮ ಉಷಾ ಅವರು ತುಂಬಾ ಪ್ರೋತ್ಸಾಹಿಸುತ್ತಾರೆ. ಸದ್ಯ ಎಸ್‌ಜೆಬಿಐಟಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಕಾಂನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡೇ ನಟನೆಯತ್ತ ಗಮನ ಹರಿಸಿದ್ದೇನೆ, ಈ ಮೊದಲು ಪಾರು ಧಾರಾವಾಹಿಯಲ್ಲಿ ನಟಿಸಲು ಅವಕಾಶ ಬಂದಿತ್ತಾದರೂ, ಕಾರಣಾಂತರಗಳಿಂದ ಆ ಅವಕಾಶವನ್ನು ಕೈಬಿಡಬೇಕಿತ್ತು. ಗಟ್ಟಿಮೇಳದಲ್ಲಿ ಅಮೂಲ್ಯ ಪಾತ್ರ ಮಾಡುವುದಕ್ಕೇ ನಾನು ಅದೃಷ್ಟ ಮಾಡಿದ್ದೇ, ಇದಕ್ಕೂ ಮುಂಚೆ ಚಿಂಟು ಟಿವಿಯಲ್ಲಿ ಹಾಗೂ ಬೆಂಗಳೂರಿನ ಖಾಸಗಿ ವಾಹಿನಿಯಲ್ಲೂ ನಿರೂಪಕಿಯಾಗಿದ್ದೆ.

*ನಿಜ ಜೀವನದಲ್ಲೂ ನಿಶಾ ಬಜಾರಿನಾ?
ಧಾರಾವಾಹಿಯಲ್ಲಿ ನನ್ನನ್ನು ಕಂಡ ಅನೇಕರು ನಿಜವಾಗಲೂ ಇದು ನಿನೇನಾ ಎಂದು ಕೇಳಿದ್ದಾರೆ. ಏಕೆಂದರೆ ತುಂಬಾ ಸೈಲೆಂಟ್ ನಾನು, ಯಾರೊಂದಿಗೂ ಅಷ್ಟು ಮಾತನಾಡುವುದಿಲ್ಲ, ಬಜಾರಿ ಪಾತ್ರದಲ್ಲಿ ಪಟ ಪಟ ಅಂತ ಮಾತನಾಡಿದ್ದನ್ನು ನೋಡಿ ನನ್ನ ಫ್ಯಾಮಿಲಿ ಕೂಡ ಅಚ್ಚರಿಯಿಂದ ನೋಡುತ್ತಾರೆ. ನಿಜಜೀವನದಲ್ಲಿ ಖಂಡಿತವಾಗಿಯೂ ನಾನು ಬಜಾರಿ ಅಲ್ಲ, ಮೊದಲಿಗೆ ಧಾರಾವಾಹಿಯಲ್ಲಿ ಬಜಾರಿ ಪಾತ್ರ ಇರಲಿದೆ ಎಂದು ಗೊತ್ತಿರಲ್ಲಿಲ್ಲ, ಲುಕ್ ಟೆಸ್ಟ್ ಆದನಂತರವೇ ನನಗೆ ಪಾತ್ರದ ಪರಿಚಯವಾಯಿತು, ಆ ಪಾತ್ರಕ್ಕೆ ನಾನು ಸೂಟ್ ಆಗಿದ್ದೀನಿ, ಜನರು ಇಷ್ಟಪಟ್ಟಿದ್ದಾರೆ. ಅದಕ್ಕೆ ಎಂದಿಂದಿಗೂ ಚಿರಋಣಿ.

* ಧಾರಾವಾಹಿಯಲ್ಲಿ ವೇದಂತ ಮೇಲೆ ನಿಜವಾಗಲೂ ಲವ್ ಆಗಿಲ್ವ?
ನಮ್ಮಿಬ್ಬರ ಮಧ್ಯೆ ಪ್ರೀತಿ ಪ್ರೇಮ ಶುರುವಾದಗಲೇ ಧಾರಾವಾಹಿಯ ಕಥೆಯಲ್ಲಿ ಹೊಸ ತಿರುವು ಪಡೆದುಕೊಳ್ಳುವುದು, ಸದ್ಯಕ್ಕೆ ಇಬ್ಬರಿಗೂ ಅದಿತಿ, ವಿಕ್ಕಿ ಮದುವೆ ಮಾಡುವ ಬಗ್ಗೆ ಮಾತ್ರ ಯೋಜನೆ ಇದೆ. ಅಲ್ಲದೇ ನಮ್ಮಲ್ಲಿರುವುದು ಕಾಳಜಿ ಮಾತ್ರ, ಇನ್ನು ನಿಜಜೀವನದಲ್ಲಿ ಗುರಿ ತಲುಪವವರೆಗೂ ಪ್ರೀತಿ ಪ್ರೇಮಕ್ಕೆ ಸಮಯವೇ ಇಲ್ಲ, ಸಾಧಿಸುವುದು ಬಹಳಷ್ಟು ಇದೆ.

*ಕಿರುತೆರೆ ಗೀಳು ವಿದ್ಯಾಭ್ಯಾಸಕ್ಕೆ ಅಡ್ಡಿ ಮಾಡಿದ್ದೇಯೆ?
ಆಗೇನು ಇಲ್ಲ, ನನ್ನ ಶಾಲಾ ದಿನಗಳಲ್ಲಿ ಭರತ್ ಟೀಚರ್, ಕಾಲೇಜ್ ದಿನಗಳಲ್ಲಿ ರವಿವರ್ಮಾ ಸರ್ ತುಂಬಾ ಸಹಾಯ ಮಾಡಿದ್ದಾರೆ. ಸದ್ಯ ಈಗ ಸ್ವಾತಿ ಅವರ ಬೆಂಬಲ ಮರೆಯಲು ಸಾಧ್ಯವಿಲ್ಲ, ಗಟ್ಟಿಮೇಳ ಧಾರಾವಾಹಿ ಜನರಿಗೆ ತುಂಬಾ ಬೇಗ ಕನೆಕ್ಟ್ ಆಗಿದೆ, ಮಾದ್ಯಮ ವರ್ಗದವರು ಕಷ್ಟಸುಖ, ಸಮಸ್ಯೆ ಬಗ್ಗೆ ಕಥೆ ಸಾಗುವುದರಿಂದ ನಮ್ಮ ಮೇಲೆ ದೊಡ್ಡ ಜವಬ್ದಾರಿಯೇ ಇದೆ. ಹಾಗಾಗಿ ನಾವೆಲ್ಲಾರೂ ತುಂಬಾ ಶ್ರಮ ಹಾಕಿ, ಇಷ್ಟಪಟ್ಟು ನಟನೆ ಮಾಡುತ್ತಿದ್ದೇವೆ, ಇನ್ನು ನನಗೆ ೧೦ನೇ ತರಗತಿ ಓದುವಾಗಲೇ ನಟನೆ ಮೇಲೆ ಹೆಚ್ಚು ವ್ಯಾಮೋಹವಿತ್ತು, ಓದಿನಲ್ಲೂ ನಾನು ಡಿಸ್ಟಿಕ್ಸನ್ ವಿದ್ಯಾರ್ಥಿನಿಯಾಗಿದ್ದೇನೆ, ಎರಡನ್ನು ಸಮನಾಗಿ ಬ್ಯಾಲ್ಸೆನ್ ಮಾಡಿಕೊಂಡು ಹೋಗುತ್ತಿದ್ದೇನೆ.

* ಹಿರಿಯ ನಟಿ ಸುಧಾ ನರಸಿಂಹ ರಾಜು ಹಾಗೂ ನಿರ್ದೇಶಕ ಬಗ್ಗೆ ಹೇಳಿ?
ಧಾರಾವಾಹಿಯಲ್ಲಿ ನಟಿಸುವ ಮುಂಚೆಯೇ ಗೇಟು ಟು ಗೇದರ್ ಪಾರ್ಟಿಯಲ್ಲಿ ಸುಧಾ ಅಮ್ಮ ಅವರನ್ನು ಭೇಟಿ ಮಾಡಿದ್ದಾಗ ನಮ್ಮಗೆಲ್ಲಾ ಅಮ್ಮ-ಮಕ್ಕಳ ಫೀಲ್ ಬಂದುಬಿಡ್ತು, ಚಿತ್ರೀಕರಣದ ವೇಳೆ ನಮಗೆ ನೈಸರ್ಗೀಕವಾಗಿ ಆಳುವ ಸೀನ್‌ಗಳ ಬಗ್ಗೆ ಸಾಕಷ್ಟು ಹೇಳಿಕೊಟ್ಟಿದ್ದಾರೆ. ಇನ್ನು ನಮ್ಮ ಸೌಂದರ್ಯ, ಉಡುಪಿನ ವಿನ್ಯಾಸದ ಬಗ್ಗೆ ಕೂಡ ಟಿಪ್ಸ್ ಕೊಡುತ್ತಾರೆ. ಇನ್ನು ಧಾರಾವಾಹಿಯಲ್ಲಿ ನಾನು ಧರಿಸುವ ಉಡುಪನ್ನು ನನ್ನ ತಾಯಿಯೇ ವಿನ್ಯಾಸ ಮಾಡುತ್ತಾರೆ. ನಿರ್ದೇಶಕರಾದ ಅನಿಲ್ ಅವರು ನಮಗೆಲ್ಲಾ ಸದಾ ಎನರ್ಜಿ ತುಂಬಾತ್ತಾರೆ, ಪಾತ್ರಕ್ಕೆ ತಕ್ಕಂತೆ ಗೈಡ್ ಮಾಡಿಸಿ ಅಭಿನಯ ತೆಗೆಸುತ್ತಾರೆ. ಅವರಿಂದ ಸಾಕಷ್ಟು ಕಲಿತುಕೊಂಡು ಪಾತ್ರಕ್ಕೆ ನ್ಯಾಯ ಒದಗಿಸುವ ಪ್ರಯತ್ನಮಾಡುತ್ತಿದ್ದೇನೆ.

*ಬಾಲಿವುಡ್ ಹೇಮಾಮಾಲಿನಿ ಲುಕ್ ಇದೆ ಅಂತಾರೆ?
ಹೌದು ತುಂಬಾ ಜನ ಆ ರೀತಿ ಕಮೆಂಟ್ ಮಾಡಿದ್ದಾರೆ. ಅದಕ್ಕೆ ನನ್ನ ಪೋಷಕರಿಗೆ ಧನ್ಯವಾದ ಅರ್ಪಿಸುತ್ತೇನೆ, ಇದು ನನ್ನ ನ್ಯಾಚುರಲ್ ಸೌಂದರ್ಯ, ಇದುವರೆಗೂ ನಾನು ಪೇಶಿಯಲ್ ಆಗಲಿ, ಬ್ಲೀಚ್ ಆಗಲಿ ಮಾಡಿಸಿಕೊಂಡಿಲ್ಲ, ಮನೆಮದ್ದಿನಲ್ಲಿ ಸಾಧ್ಯವಾದಷ್ಟು ಸೌಂದರ್ಯ ಕಾಪಾಡಿಕೊಳ್ಳುವುದನ್ನು ರೂಡಿಸಿಕೊಂಡಿದ್ದೇನೆ.

*ಸಮಾಜಸೇವೆ ಆಸೆ ಇದೆಯೇ?
ಖಂಡಿತಾ, ನಮ್ಮಗೆಲ್ಲಾ ಪ್ರಧಾನಿ ನರೇಂದ್ರ ಮೋದಿ ಅವರೇ ಸ್ಪೂರ್ತಿ, ಕಾಲೇಜ್ ದಿನಗಳಲ್ಲಿ ಜಾನಪದ ಕಲೆ, ಬೀದಿ ನಾಟಕ ಉಳಿಸುವ ಉದ್ದೇಶದಿಂದ ದರ್ಪಣ ಎಂಬ ತಂಡ ಕಟ್ಟಿದ್ದೇವು. ಆದರೆ ಅದನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ, ಆದರೆ ರಸ್ತೆ ಬದಿ ಇರವ ಸಾಕು ಪ್ರಾಣಿಗಳನ್ನು ರಕ್ಷಣೆ ಮಾಡುವುದು ತುಂಬಾ ಇಷ್ಟ, ಮುಂದಿನ ದಿನಗಳಲ್ಲಿ ಸಮಾಜ ಸೇವೆ ಮಾಡುವ ಆಸಕ್ತಿ ತುಂಬಾ ಇದೆ.

*ಸಮಾಜಕ್ಕೆ, ಕನ್ನಡ ಪ್ರೇಕ್ಷಕರಿಗೆ ನಿಮ್ಮ ಸಂದೇಶ?
ಮೊದಲಿಗೆ ಸ್ವಚ್ಚತೆ ಆದ್ಯತೆ ನೀಡುವ ಮೂಲಕ ನಾವು ಸಮಾಜಕ್ಕೆ ಬಹು ದೊಡ್ಡ ಉಡುಗೊರೆ ಕೊಟ್ಟಂತೆ, ಕನ್ನಡ ಪ್ರೇಕ್ಷಕರು ಯಾವಾಗಲೂ ಬೆಸ್ಟ್, ಬೇರೆ ಭಾಷೆ ವ್ಯಾಮೋಹ ಬಿಟ್ಟು ಕನ್ನಡ ಉಳಿಸಿ, ಕನ್ನಡ ಬೆಳೆಸುವುದು ನಮ್ಮೆಲ್ಲಾರ ಕರ್ತವ್ಯ ಕೂಡ. ನಾನು ಕನ್ನಡಿತಿ ಎಂದು ಹೇಳಿಕೊಳ್ಳಲು ತುಂಬಾ ಹೆಮ್ಮೆ ಇದೆ.

ಬಾಕ್ಸ್
ವರಲಕ್ಷ್ಮಿ ಹಬ್ಬದ ಸಿದ್ದತೆ ಹೇಗಿದೆ?
ಮೂಲತಃ ನಾವು ಮಾಲಿಯಾಳಿ ಆದರೂ ಕನ್ನಡದ ಎಲ್ಲಾ ಹಬ್ಬಗಳನ್ನು ಆಚರಿಸಿಕೊಂಡು ಬಂದಿದ್ದೇವೆ. ಅಷ್ಟೊಂದು ಆಡಂಬರ ಇರುವುದಿಲ್ಲ ಎಂದರೂ ಕನ್ನಡಿಗರ ಮನೆಯಲ್ಲಿ ಮಾಡುವ ಎಲ್ಲಾ ಹಬ್ಬದ ಅಡುಗೆ ಮಾಡಿ ದೇವರಿಗೆ ನೆವೈಧ್ಯ ಅರ್ಪಿಸಿ ಭಕ್ತಿಯಿಂದ ಪೂಜೆ ಸಲ್ಲಿಸುತ್ತೇವೆ. ಅಷ್ಟೆ ಅಲ್ಲ ಸಂಕ್ರಾಂತಿ ಬಂದರೆ ಎಳ್ಳುಬೆಲ್ಲ ಬೀರುತ್ತೇನೆ, ಯುಗಾದಿಗೆ ಹೋಳಿಗೆ ಮಾಡುವುದನ್ನು ರೂಡಿಸಿಕೊಂಡಿದ್ದೇವೆ. ಇನ್ನು ಓಣಂ ಹಬ್ಬವನ್ನು ನಾವು ಮನೆಯಲ್ಲಿ ಆಚರಿಸುತ್ತೇವೆ.

ಆದರೆ ಹಬ್ಬದ ನೆಪದಲ್ಲಿ ಮಾಡುವ ದುಂದುವೆಚ್ಚಕ್ಕೆ ಕಡಿವಾಣ ಹಾಕುಬೇಕಿದೆ, ಇತ್ತೀಚೆಗೆ ವರಮಹಾಲಕ್ಷ್ಮಿ ವ್ರತವನ್ನು ಆಡಂಬರ ಮಾಡಲಾಗುತ್ತಿದೆ, ಉಳ್ಳವರು ಮಾಡುವುದನ್ನು ಕಂಡು ಸಾಮಾನ್ಯ ಜನರು ಹಬ್ಬಕ್ಕೆ ದುಂದುವೆಚ್ಚ ಮಾಡುವುದು ಸರಿಯಲ್ಲ, ತಮ್ಮ ಕೈಮೀರಿ ಹಬ್ಬ ಮಾಡುವ ಅವಶ್ಯಕತೆ ಇದೆಯೇ?

ನಿಶಾ ಅವರನ್ನು ಇನ್ಟ್ರಾಗ್ರಾಮ ಅವರನ್ನು ಫಾಲೋ ಮಾಡಲು @ಟಿishಚಿ-miಟಚಿಟಿಚಿ

Leave a Comment