ಕಿರುತೆರೆಯಲ್ಲಿ ಹೊಸ ಗೇಮ್ ಶೋ ಜೀನ್ಸ್ ಪ್ರಾರಂಭ

ಬೆಂಗಳೂರು, ಜ 18- ಕನ್ನಡ ಕಿರುತೆರೆಯಲ್ಲಿ ಅಪಾರ ಜನಮನ್ನಣೆ ಪಡೆದು ಅಗ್ರಸ್ಥಾನದಲ್ಲಿರುವ ಜೀವಾಹಿನಿಯಲ್ಲಿ ಇಂದಿನಿಂದ ಸಂಜೆ 6.30ಕ್ಕೆ ಹೊಸ ಗೇಮ್ ಶೋ ‘ಜೀನ್ಸ್’ ಆರಂಭವಾಗಲಿದೆ.

ಮಾನವರ ಮನಸ್ಸಿನ ಬುದ್ಧಿಮತ್ತೆ ಹಾಗೂ ಆವಿಷ್ಕಾರದ ಗುಣವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ದರೆ ಅದ್ಭುತ ಸಾಧನೆಗಳನ್ನು ಮಾಡುವ ಶಕ್ತಿ ಹೊಂದಿದೆ. ಈ ಹಿನ್ನೆಲೆಯಲ್ಲಿ ಜೀವಾಹಿನಿ ಜೀನ್ಸ್ ತಂದಿದೆ. ಆಕರ್ಷಕ ಸುಂದರಿ ಸುಷ್ಮಾ ರಾವ್ ನಿರೂಪಣೆಯಲ್ಲಿ ಮೂಡಿಬರಲಿರುವ ಈ ಶೋ ಪ್ರತಿ ಶನಿವಾರ ಹಾಗೂ ಭಾನವಾರ ಸಂಜೆ ಪ್ರಸಾರವಾಗಲಿದೆ.

ವಿನೂತನ ಬಗೆಯ ಈ ಗೇಮ್ ಶೋ ಜನಪ್ರಿಯ ಸೆಲೆಬ್ರಿಟಿಗಳನ್ನು ಶ್ರೀ ಸಾಮಾನ್ಯರೊಂದಿಗೆ ಬೆರೆಸಲಿದ್ದು ಅದರಲ್ಲಿ ಅತ್ಯಂತ ರೋಚಕ ಸುತ್ತುಗಳಲ್ಲಿ ಭಾಗವಹಿಸಲಿದ್ದಾರೆ. ಪ್ರತಿ ಸುತ್ತಿನಲ್ಲಿಯೂ ಸ್ಪರ್ಧಿಯ ಇಕ್ಯೂ ಮತ್ತು ಐಕ್ಯೂ ಬೇಡುವ ವಿಶಿಷ್ಟ ಚಟುವಟಿಕೆಗಳಿರುತವೆ. ಭಾಗವಹಿಸುವವರಿಗೆ ಗೇಮ್‌ನ ಪ್ರಾರಂಭದಲ್ಲಿ 1,೦೦,೦೦೦ರೂ. ನಗದು ಬಹುಮಾನ ನೀಡಲಾಗುತ್ತದೆ, ಅದನ್ನು ಪ್ರತಿ ಹಂತದ ಸಾಧನೆ ಆಧರಿಸಿ ಅದು ಕಡಿತಗೊಳ್ಳುತ್ತದೆ ಅಥವಾ ಬಹುಪಟ್ಟು ಹೆಚ್ಚಾಗಲು ಅವಕಾಶವಿರುತ್ತದೆ.

ಮೊದಲ ಸುತ್ತು ‘ಪೇರ್ ವಿಥ್ ಪೇರೆಂಟ್ಸ್’ನಲ್ಲಿ ಭಾಗವಹಿಸುವವರು ಅವರ ಮಕ್ಕಳೊಂದಿಗೆ ಸರಿಯಾದ ಪೋಷಕರನ್ನು ಜೋಡಿಸಬೇಕು. ಎರಡನೇ ಸುತ್ತಿನಲ್ಲಿ ಸೆಲೆಬ್ರಿಟಿ ಆಲ್ಬಂ ಇದರಲ್ಲಿ ಅಭ್ಯರ್ಥಿಗಳು ನಾಲ್ಕು ವಿಭಾಗಗಳನ್ನು ಎದುರಿಸುತ್ತಾರೆ ಮತ್ತು 2 ವಿಭಾಗಗಳನ್ನು ಆಯ್ಕೆ ಮಾಡಿದ ನಂತರ ಖ್ಯಾತ ವ್ಯಕ್ತಿಗಳನ್ನು ಗುರುತಿಸುವುದಾಗಿರುತ್ತದೆ. ಮೂರನೇ ಸುತ್ತು ‘ಫ್ಯಾಮಿಲಿ ಮತ್ಯಾರು’ವಿನಲ್ಲಿ ಭಾಗವಹಿಸುವವರು ಇಡೀ ಅವಿಭಕ್ತ ಕುಟುಂಬ ಇರುತ್ತದೆ ಅದರಲ್ಲಿ ಒಬ್ಬರು ಹೊರಗಿನವರು ಇರುತ್ತಾರೆ. ಅವರನ್ನು ಅಭ್ಯರ್ಥಿಗಳು ಗುರುತಿಸಬೇಕು. ನಾಲ್ಕನೇ ಸುತ್ತು ‘ಸೇಮ್ ಟು ಸೇಮ್’ 3 ಅವಳಿ ಜವಳಿ ಇರುತ್ತಾರೆ ಅವರಲ್ಲಿ ಒಬ್ಬರನ್ನು ಅದಲು ಬದಲು ಮಾಡಲಾಗುತ್ತದೆಎ ಮತ್ತು ಕಣ್ಣಿಗೆ ಬಟ್ಟೆ ಕಟ್ಟಿಕೊಂಡ ಅಭ್ಯರ್ಥಿಗಳು ಅದಲು ಬದಲಾದ ಅವಳಿಗಳನ್ನು ಕಂಡು ಹಿಡಿಯಬೇಕು.

Leave a Comment