ಕಿರುತೆರೆನಟಿಗೆ ವಂಚನೆ

ಬೆಂಗಳೂರು,ಸೆ.೧೧- ಮಹಿಳಾ ಸಂಘಕ್ಕೆ ರಾಜ್ಯಾಧ್ಯಕ್ಷೆಯಾಗಿ ಮಾಡುವುದಾಗಿ ನಂಬಿಸಿ ಕಿರುತೆರೆ ನಟಿಗೆ ವಂಚಿಸಿರುವ ದೂರು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದಾಖಲಾಗಿದೆ
ಕಿರುತೆರೆ ನಟಿ ಸುಶ್ಮಿತಾಗೆ ರಘು ಚಂದ್ರಪ್ಪ ಹಾಗೂ ಸಂಗೀತಾ ಎಂಬವರು ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ. ಸುಶ್ಮಿತಾ ಅವರು ಕನ್ನಡದ ಹಲವು ಧಾರವಾಹಿಗಳಲ್ಲಿ ಸಹ ನಟಿಯಾಗಿ ನಟಿಸಿದ್ದಾರೆ. ಸುಶ್ಮಿತ ಅಲ್ಲದೆ ಸರೋಜ ಎಂಬವರನ್ನೂ ವಂಚಿಸಲಾಗಿದೆ.
ಆದಿ ಶಕ್ತಿ ಮಹಿಳಾ ಸಂಘಕ್ಕೆ ರಾಜ್ಯಾಧ್ಯಕ್ಷೆಯಾಗಿ ಮಾಡುವುದಾಗಿ ನಂಬಿಸಿ ಹಣ ಪಡೆದಿದ್ದಾರೆ. ಈಗ ಹಣ ವಾಪಸ್ಸು ಕೇಳಿದರೆ ರಘು ಚಂದ್ರಪ್ಪ ಎಂಬಾತ ನಟಿ ಸುಶ್ಮಿತಾ ಹಾಗೂ ಸರೋಜ ಇಬ್ಬರಿಗೂ ಜೀವ ಬೆದರಿಕೆ ಹಾಕುತ್ತಿದ್ದಾರೆ. ಸುಶ್ಮಿತಾ ಅವರು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದೂರು ನೀಡಿದ್ದು, ಐಪಿಸಿ ೪೨೦, ೪೧೮, ಹಾಗೂ ೫೦೬ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment