ಕಿರುಚಿತ್ರ ದಿ ಗಿಲ್ಟ್

ಮುಂದೆ ಸಿನಿಮಾ  ನಿರ್ದೇಶನ ಮಾಡುವವರಿಗೆ ಮೊದಲ ವೇದಿಕೆ ಕಿರುಚಿತ್ರ ಇಲ್ಲವೇ ಸಹಾಯಕ ನಿರ್ದೇಶನ.ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಸಿಗೋದು ಕಿರುಚಿತ್ರಗಳಲ್ಲಿ ಎನ್ನುವುದನ್ನು ತಿಳಿದುಕೊಂಡಿರುವ ಹೊಸಬರು ಕಿರುಚಿತ್ರಗಳನ್ನು ಮಾಡುತ್ತಾರೆ.ಅಂತಹವರ ಸಾಲಿಗೆ ಧೀರಜ್ ಎಂಬುವರು ’ದಿ ಗಿಲ್ಟ್’ ಚಿತ್ರ  ನಿರ್ದೇಶನ ಮಾಡುವುದರ ಜೊತೆಗೆ ಬೆಂದಕಾಳೂರು ಪಿಕ್ಚರ್‍ಸ್ ಮೂಲಕ ನಿರ್ಮಾಣ ಮಾಡಿದ್ದಾರೆ.

ಪ್ರತಿಯೊಂದು ತೊಂದರೆಗೂ ಪರಿಹಾರ ಇರುತ್ತದೆ. ಆತ್ಮಹತ್ಯೆ ಒಂದೇ ಉತ್ತರವಾಗಿರುವುದಿಲ್ಲ. ಇದರದೆ ಕುರಿತ  ಹತ್ತು ನಿಮಿಷದ ಕಿರುಚಿತ್ರಕ್ಕೆ  ಹಿನ್ನಲೆ ಧ್ವನಿ ನೀಡಿರುವುದು ಉಗ್ರಂ ಶ್ರೀಮುರುಳಿ. ಹುಟ್ಟು ಎನ್ನುವುದಕ್ಕೆ ಅರ್ಥ ಇದೆ. ಅದರಂತೆ ಸಾವು ಕೂಡ ಕೆಲವು ಸಲ ಪ್ರತಿಷ್ಠೆಯಿಂದ ಆಕಸ್ಮಿಕವಾಗಿ ಸಂಭವಿಸುತ್ತದೆ. ಒಂದು ಮೊಟ್ಟೆಯ ಖ್ಯಾತಿ ಅಮೃತನಾಯಕ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನವೀನ್ ಮತ್ತು ಅಶ್ವಿನ್ ಇವರುಗಳಿಗೆ ಅಭಿನಯ ಹೊಸ ಅನುಭವ.  ಸಾಮಾಜಿಕ ಸಂದೇಶ ಇರುವ  ಚಿತ್ರವನ್ನು  ಯುಟ್ಯೂಬ್‌ದಲ್ಲಿ ಅಳವಡಿಸಲಾಗಿ, ಇಲ್ಲಿಯವರೆವಿಗೂ ೬೦೦೦೦ ವೀಕ್ಷಕರು  ನೋಡಿರುವುದು ತಂಡಕ್ಕೆ ಉತ್ಸಾಹ ತಂದಿದೆಯಂತೆ.

Leave a Comment