ಕಿರುಕುಳ ಗೃಹ ಸಚಿವರಿಗೆ ಸೇನೆ ದೂರು

ಬೆಂಗಳೂರು, ನ. ೧೭- ನಗರದ ಪೂರ್ವ ತಾಲ್ಲೂಕಿನ ಮುಳ್ಳೂರು ಗ್ರಾಮದ ಕೃಷ್ಣಪ್ಪ ಅವರಿಗೆ ಕಿರುಕುಳ ನೀಡಿ ಅವರ ಜಮೀನು ಕಬಳಿಕೆ ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ದೂರು ನೀಡಿದ್ದು, ಅದಕ್ಕೆ ಅವರು ಸಕರಾತ್ಮಕವಾಗಿ ಸ್ಪಂದಿಸದ್ದಾರೆಂದು ಕರ್ನಾಟಕ ರಿಪಬ್ಲಿಕ್ ಸೇನೆ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ತಿಳಿಸಿದ್ದಾರೆ.
ಮುಳ್ಳೂರು ಗ್ರಾಮದ ಸರ್ವೆ ನಂ. 48/3ರಲ್ಲಿ ಕೃಷ್ಣಪ್ಪ ಅವರಿಗೆ ಸೇರಿದ ಜಮೀನಿನಲ್ಲಿ ಅವರ ವಂಶಸ್ಥರ ಸಮಾಧಿಗಳಿದ್ದು, ಈ ಜಮೀನಿಗೆ ಹೋಗಲು ಚಾಂಪಿಯನ್ಸ್ ಲಕ್ಸೂರಿ ಪ್ರೈವೇಟ್ ಲಿಮಿಟೆಡ್ ತೊಂದರೆ ನೀಡಿದ್ದರಿಂದ ಉಚ್ಛ ನ್ಯಾಯಾಲಯದಿಂದ ಆದೇಶ ಪಡೆದ ರಸ್ತೆಯಿಂದಾಗಿ ಪಹಣಿ ಮತ್ತು ಎಂ.ಆರ್ ಭೂ ಪರಿವರ್ತನೆ ನಕಾಶೆಯಲ್ಲಿ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಕೆಆರ್ ಪುರಂ ತಹಶೀಲ್ದಾರ್ ಅವರಿಗೆ ಬಿಲ್ಡಱ್ಸ್ ವಿರುದ್ಧ ದೂರು ನೀಡಿರುವ ಹಿನ್ನೆಲೆಯಲ್ಲಿ ಕೃಷ್ಣಪ್ಪ ಅವರಿಗೆ ಪ್ರಾಣ ಬೆದರಿಕೆ ಇರುವುದರಿಂದ ಅವರಿಗೆ ರಕ್ಷಣೆ ನೀಡಿ ಸಮಸ್ಯೆಯನ್ನು ಬಗೆಹರಿಸುವಂತೆ ಗೃಹ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಸ್ಥಳೀಯ ಪೊಲೀಸರು ಬಿಲ್ಡರ್‌ ಜತೆ ಶಾಮೀಲಾಗಿ ಕೃಷ್ಣಪ್ಪ ಅವರಿಗೆ ತೊಂದರೆ ನೀಡುತ್ತಿದ್ದು, ಸುಳ್ಳು ಕೇಸುಗಳನ್ನು ಹಾಕಿದ್ದಾರೆ. ಅದನ್ನು ವಜಾ ಮಾಡಬೇಕು, ಕೃಷ್ಣಪ್ಪ ಭೂಮಿಗೆ ಹೋಗಲು ಮುಚ್ಚಿರುವ ರಸ್ತೆಯನ್ನು ತೆರವುಗೊಳಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅನಗತ್ಯ ಕಿರುಕುಳ ನೀಡುತ್ತಿರುವ ಬಿಲ್ಡ‌ಱ್ಸ್‌ನ ವಿರುದ್ಧ ಕ್ರಮ ಜರುಗಿಸಿ ವಯೋವೃದ್ಧ ಕೃಷ್ಣಪ್ಪ ಅವರಿಗೆ ನ್ಯಾಯ ದೊರಕಿಸುವಂತೆ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Comment