ಕಿರುಕುಳ ಖಂಡಿಸಿ ಮನವಿ

ರಾಮದುರ್ಗ,ಮೇ 15-  ತಾಲೂಕಿನ ಕೆ.ಜುನಿಪೇಠ ವಲಯದ ಮೇಲ್ವಿಚಾರಕಿ ಅಂಗನವಾಡಿ ನೌಕರರಿಗೆ ನೀಡುತ್ತಿರುವ ಕಿರುಕುಳವನ್ನು ಖಂಡಿಸಿ ಅಂಗನವಾಡಿ ನೌಕರರು ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲೂಕ ಸಮಿತಿ ನೇತೃತ್ವದಲ್ಲಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಮೂಲಕ ಉಪ ನಿರ್ದೇಶಕರಿಗೆ ಸೋಮವಾರ ಮನವಿ ಸಲ್ಲಿಸಿದರು.
ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಮಿನಿ ವಿಧಾನಸೌಧಕ್ಕೆ ತೆರಳಿ ಮನವಿ ಅರ್ಪಿಸಿದ ಅವರು, ರಾಮದುರ್ಗ ತಾಲೂಕಿನ ಕೆ.ಜುನಿಪೇಠ ವಲಯದ ಮೇಲ್ವಿಚಾರಕಿಯಾದ ಸಲೀಮಾ ಪಾಟೀಲ ಇವರು ಅಂಗನವಾಡಿ ಕಾರ್ಯಕರ್ತೆಯರಿಗೆ ಕಿರುಕುಳ ನೀಡುತ್ತಿದ್ದಾರೆ. ಅಂಗನವಾಡಿ  ಕಾರ್ಯಕರ್ತೆಯರಿಗೆ ಸರಿಯಾಗಿ ನಿರ್ವಹಿಸಲು ಆಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಮೇಲ್ವಿಚಾರಕಿ ಸಲೀಮಾ ಪಾಟೀಲ ಅಂಗನವಾಡಿ ಕೇಂದ್ರಕ್ಕೆ ಭೇಟಿ ಕೊಟ್ಟಾಗ ಕಾರ್ಯಕರ್ತೆಯರಿಗೆ ಅವಾಚ್ಯ ಶಬ್ದದಿಂದ ನಿಂದಿಸುವದು, ಅಶ್ಲೀಲವಾಗಿ ಮಾತನಾಡುವದು ಮಾಡುತ್ತಾರೆ. ಪ್ರಶ್ನಿಸಿದರೆ ಹಲ್ಲೆಗೆ ಮುಂದಾಗುತ್ತಾರೆ ಈಗಾಗಲೇ ಗೊಣಗನೂರ ಗ್ರಾಮದ  ಮಮತಾಜ ಮುಜಾವರ ಎಂಬ ಕಾರ್ಯಕರ್ತೆಗೆ ಹೊಡೆದಿದ್ದಾರೆ. ಈ ರೀತಿ ದೌರ್ಜನ್ಯ ನಡೆಸಿರುವ ಮೇಲ್ವಿಚಾರಕಿ ಸಲೀಮಾ ಪಾಟೀಲರ ಮೇಲೆ ಸೂಕ್ತ ಕ್ರಮ ಜರುಗಿಸಿ ಅವರನ್ನು ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿರುವ ಪ್ರತಿಭಟನಾಕಾರರು ಇಲ್ಲವಾದಲ್ಲಿ ಅನಿವಾರ್ಯವಾಗಿ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ಧರಣಿ ನಡೆಸಲಾಗುವದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷ ಜಿ.ಎಂ. ಜೈನೆಖಾನ್, ತಾಲೂಕಾಧ್ಯಕ್ಷೆ ಸರಸ್ವತಿ ಮಾಳಶೆಟ್ಟಿ, ಕಾರ್ಯದರ್ಶಿ ಶಕುಂತಲಾ ನಾರಾಯಣಕರ, ಇಂದ್ರಮ್ಮ ಇಟ್ಟನ್ನವರ, ರುಕ್ಮೀಣಿ ಬಿಂಗೆ ಸೇರಿದಂತೆ ಮುಂತಾದವರು ಇದ್ದರು.

Leave a Comment