ಕಿಡ್ನಿ, ಕಲ್ಲು ಸಮಸ್ಯೆಗೆ ಹಣ್ಣುಗಳೇ ರಾಮಬಾಣ

ಬದಲಾದ ಜೀವನ ಶೈಲಿಯಲ್ಲಿ ನಮ್ಮ ಆಹಾರ ಪದ್ಧತಿ ನಿಯಮಬದ್ಧವಾಗಿರದ ಕಾರಣ, ಅನೇಕ ರೋಗರುಜಿನಗಳಿಗೆ ಕಾರಣವಾಗುತ್ತಿದೆ. ಉತ್ತಮ ಆಹಾರ ಪದ್ಧತಿ, ನಾವು ಅನುಸರಿಸುವ ಜೀವನ ಕ್ರಮಗಳ ಆರೋಗ್ಯ ಸಂರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಮಾತ್ರೆ, ಟಾನಿಕ್, ಔಷಧಿಗಳಿಂದ ದೂರವಾಗದ ಖಾಯಿಲೆಗಳು, ತರಕಾರಿ, ಹಣ್ಣುಗಳ ಸೇವನೆ, ವ್ಯಾಯಾಮ, ಮುಂತಾದ ದೈಹಿಕ ಚಟುವಟಿಕೆಗಳಿಂದ ನಿಯಂತ್ರಣಕ್ಕೆ ಬರುವ ಸಾಧ್ಯತೆಗಳಿವೆ.
ಸಿಕ್ಕಿದ್ದನ್ನೆಲ್ಲಾ ತಿನ್ನುವುದರಿಂದ ಅಸಿಡಿಟಿ ಎದುರಾಗುತ್ತದೆ. ಬೆಳಗಿನ ವೇಳೆ ಗಡಿಬಿಡಿಯಿಂದ ಉಪಹಾರ ಸೇವನೆ, ಮಧ್ಯಾಹ್ನ ಹೊಟ್ಟೆ ಬಿರಿಯುವಂತೆ ತಿನ್ನುವುದು, ರಾತ್ರಿ ವೇಳೆಯೂ ಇದೇ ರೀತಿ ತಿನ್ನುವುದರಿಂದ, ದೇಹಕ್ಕೆ ಹೊರೆಯಾಗುತ್ತದೆ.
ಕೆಲಸದ ಒತ್ತಡದಿಂದ ಸಕಾಲಕ್ಕೆ ಊಟ, ತಿಂಡಿ ಸೇವಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳುವ ಮೂಲಕ, ಕಿಡ್ನಿ ಸಮಸ್ಯೆಯನ್ನು ಆಹ್ವಾನಿಸಿದಂತಾಗುತ್ತದೆ.
ದೇಹದಲ್ಲಿ ನೀರು ಸರಿಯಾಗಿ ಪೂರೈಕೆ ಆಗದೇ ಇದ್ದಾಗ, ಜೀರ್ಣಕ್ರಿಯೆಯಲ್ಲಿ ತೊಂದರೆಯುಂಟಾಗಿ ಗ್ಯಾಸ್ ಸಮಸ್ಯೆ ಎದುರಾಗುತ್ತದೆ, ಇದರಿಂದಲೂ ಕಿಡ್ನಿ, ಕಲ್ಲು ರೂಪುಗೊಳ್ಳುತ್ತದೆ.
ಸುಲಭ ಪರಿಹಾರ
ದಿನಕ್ಕೊಂದು ಸೇಬು ಸೇವಿಸುವುದರಿಂದ ಮೂತ್ರಪಿಂಡಗಳಲ್ಲಿನ ಹರಳುಗಳು ಕರಗಿ ಹೋಗುತ್ತವೆ. ಸೇಬಿನಲ್ಲಿ ಕೆಲವು ಕಿಣ್ಯಗಳಿದ್ದು, ಕಲ್ಲುಗಳನ್ನು ಕರಗಿಸಲಿವೆ. ಮೂತ್ರದ ಮೂಲಕ ಹರಳು ಹೋಗುವಂತೆ ಮಾಡುತ್ತವೆ.
ಜಲಾಂಶದಿಂದ ಸಮೃದ್ಧವಾಗಿರುವ ಕಲ್ಲಂಗಡಿ ಹಣ್ಣು ತಿನ್ನುವುದರಿಂದ ಮೂತ್ರ ಪಿಂಡಗಳಲ್ಲಿನ ಕಲ್ಲುಗಳನ್ನು ಪರಿಣಾಮಕಾರಿಯಾಗಿ ಹೊರಹಾಕಲು ಸಾಧ್ಯವಾಗುತ್ತವೆ. ಪೊಟ್ಯಾಶಿಯಂ ಹಾಗೂ ಜಲಾಂಶದಿಂದ ಕೂಡಿರುವ ದ್ರಾಕ್ಷಿ ಹಣ್ಣುಗಳೂ, ಮೂತ್ರಪಿಂಡಗಳಲ್ಲಿನ ಕಲ್ಲುಗಳನ್ನು ಕರಗಿಸಿ ಹೊರ ಹಾಕಲು ನೆರವಾಗುತ್ತವೆ.
ಕಿಡ್ನಿಗಳ ಆರೋಗ್ಯವನ್ನು ಸದೃಢವಾಗಿರಿಸುವಲ್ಲಿ ಬಾಳೆಹಣ್ಣು ಸಹಕಾರಿಯಾಗಿದೆ. ಇದರಲ್ಲಿ ಪೊಟ್ಯಾಶಿಯಂ ಹಾಗೂ ನ್ಯೂಟ್ರೀನ್ ಅಂಶಗಳನ್ನು ಒಳಗೊಂಡಿದೆ. ಇನ್ನು ಪಪ್ಪಾಯಿ ಹಣ್ಣು, ಜೀರ್ಣಕ್ರಿಯೆಗೆ ಹೆಚ್ಚು ಉಪಯುಕ್ತವಾಗಿದೆಯಲ್ಲದೆ, ಕಿಡ್ನಿ ಆರೋಗ್ಯ ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.
ಕಿತ್ತಳೆ ಹಣ್ಣು ಸಹ ಮೂತ್ರದ ಅಸಿಡಿಟಿಯನ್ನು ಕಡಿಮೆ ಮಾಡಲಿದೆ. ಸ್ಟ್ರಾಬೆರಿ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ಅಂತೋಸಿನನಿಯಸ್ ಹಾಗೂ ಎಲಾಗಿತನೀಸ್ ಎಂಬ ಅಂಶಗಳಿದ್ದು, ಕಿಡ್ನಿ ಆರೋಗ್ಯ ಸಂರಕ್ಷಣೆಯಲ್ಲಿ ಸಹಕಾರಿಯಾಗುತ್ತವೆ.

Leave a Comment