ಕಿಚ್ಚ ಸುದೀಪ್ ವಿರುದ್ದದ ವಂಚನೆ ಪ್ರಕರಣ ವಜಾ

ಚಿಕ್ಕಮಗಳೂರು: ಕಿಚ್ಚ ಕ್ರಿಯೇಷನ್ ಧಾರವಾಹಿ ಚಿತ್ರಿಕರಣದ ವೇಳೆ ವಂಚನೆ ಆರೋಪ ಹೋತ್ತಿದ್ದ ನಟ ಸುದೀಪ್ ಪ್ರಕರಣವನ್ನು ಹೈಕೋರ್ಟ್ ವಜಾಗೊಳಿಸಿದೆ ಎಂದು ಸುದೀಪ್ ಪರ ವಕೀಲ ಹಾಗೂ ಸುಪ್ರೀಂ ಕೋರ್ಟ ವಕೀಲ ಗೋಪಿ ಪ್ರಕಾಶ್ ತಿಳಿಸಿದರು.

ಚಿಕ್ಕಮಗಳೂರು ತಾಲೂಕಿನ ಆಲ್ದೂರು ವ್ಯಾಪ್ತಿಯ ಬೈಗೂರುನಲ್ಲಿ ಎಸ್ಟೇಟ್ ಒಂದರಲ್ಲಿ ವಾರಸ್ಥಾರ ಧಾರವಾಹಿ ಚಿತ್ರೀಕರಣ ವೇಳೆ ನಷ್ಟ ಉಂಟುಮಾಡಿದ್ದಾರೆಂದು ಎಸ್ಟೇಟ್ ಮಾಲೀಕ ನವೀನ್ ಮಯೂರ್ ಪಾಟೇಲ್ ನಟ ಸುದೀಪ್ ವಿರುದ್ಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣ ಹೈಕೋರ್ಟ್ ಮೇಟ್ಟಿಲೇರಿದ್ದು ವಿಚಾರಣೆ ಬಳಿಕ ಪ್ರಕರಣವನ್ನು ನ್ಯಾಯಾಲಯ ವಜಾಗೊಳಿಸಿದೆ ಎಂದು ಸುದೀಪ್ ಪರ ವಕೀಲ ತಿಳಿಸಿದರು. ನವೀನ್ ಮಯೂರ್ ಪಾಟೀಲ್ ಅವರು ಸುಳ್ಳು ದೂರು ನೀಡುವ ಮೂಲಕ ಸುದೀಪ್ ಅವರ ವರ್ಚಸ್ಸಿಗೆ ಧಕ್ಕೆ ತರಲು ಪ್ರಯತ್ನಿಸಿದ್ದಾರೆಂದು ಅವರು ಇದೇ ವೇಳೆ ತಿಳಿಸಿದರು.

Leave a Comment