ಕಿಚ್ಚ ಸುದೀಪ್‌ಗೆ ೪೫ರ ಸಂಭ್ರಮ

ಬೆಂಗಳೂರು,ಸೆ.೨-ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ಅವರಿಗೆ ಇಂದು ೪೫ನೇ ಹುಟ್ಟುಹಬ್ಬದ ಸಂಭ್ರಮ.
ಜೆ.ಪಿ ನಗರದ ನಿವಾಸದಲ್ಲಿ ನಿನ್ನೆ ರಾತ್ರಿಯಿಂದಲೇ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಅಭಿಮಾನಿಗಳ ಜನ ಜಾತ್ರೆಯೇ ತುಂಬಿ ತುಳುಕುತ್ತಿದ್ದು ತಮ್ಮ ನೆಚ್ಚಿನ ನಟನಿಗೆ ಶುಭಾಷಯ ಕೋರಿ, ನೂರ್ಕಾಲ ಬಾಳುವಂತೆ ಹರಸಿ ಹಾರೈಸಿದರು.
ಅಭಿಮಾನಿಗಳ ನೂಕು ನುಗ್ಗಲು ಉಂಟಾದ ಹಿನ್ನೆಲೆಯಲ್ಲಿ ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ಪರಿಸ್ಥಿತಿ ನಿಭಾಯಿಸಲು ಹಾಗು ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಈ ವೇಳೆ ಹಲವರಿಗೆ ಗಾಯಗೊಂಡ ಘಟನೆ ನಡೆಯಿತು.
ರಾತ್ರಿ ಸುದೀಪ್ ಹಾಗೆ ಬಂದು ಹೀಗೆ ಒಳಗೆ ಹೋದದರಿಂದ ವಿವಿದೆಡೆಯಿಂದ ಆಗಮಿಸಿದ್ದ ಅಭಿಮಾನಿಗಳು ಕೇಕ್ ತಂದು ಹುಟ್ಟುಹಬ್ಬ ಆಚರಿಸಿಕೊಳ್ಳಲು ಮುಂದಾಗಿದ್ದ ಅಭಿಮಾನಿಗಳಿಗೆ ನಿರಾಸೆಯಿಂದ ಮನೆಗೆ ತೆರಳಿದರೆ ಮತ್ತೆ ಕೆಲವರು ಬೆಳಿಗ್ಗೆ ತನಕ ಕಾದು ಹುಟ್ಟುಹಬ್ಬದ ಶುಭಕೋರಿದರು.
ಹುಟ್ಟುಹಬ್ಬ ಆಚರಿಸಿಕೊಂಡ ಸುದೀಪ್ ಅವರಿಗೆ ಚಿತ್ರರಂಗದ ಹಲವು ಮಂದಿ ಶುಭಕೋರಿದರು.

Leave a Comment