ಕಿಕ್-2′ ನಿರ್ದೇಶಿಸಲಿರುವ ರೋಹಿತ್ !

 

ಮುಂಬೈ, ಜೂ 10 – ಬಾಲಿವುಡ್ ದಬಾಂಗ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ‘ಕಿಕ್’ ಚಿತ್ರದ ಅವತರಣಿಕೆಯನ್ನು ರೋಹಿತ್ ಶೆಟ್ಟಿ ನಿರ್ದೇಶಿಸುವ ಸಾಧ್ಯತೆ ಇದೆ.

ಸದ್ಯ ರೋಹಿತ್ ಶೆಟ್ಟಿ ನಟ ಅಕ್ಷಯ್ ಕುಮಾರ್ ಜೊತೆಗೆ ‘ಸೂರ್ಯವಂಶಿ’ ಚಿತ್ರ ನಿರ್ದೇಶಿಸುತ್ತಿದ್ದಾರೆ. ಅಲ್ಲದೇ, ಸಲ್ಮಾನ್ ಖಾನ್ ಕುರಿತಾಗಿಯೂ ರೋಹಿತ್ ಬಳಿ ಉತ್ತಮ ಚಿತ್ರಕಥೆ ಇದ್ದು, ‘ಕಿಕ್’ ಚಿತ್ರದ ಅವತರಣಿಕೆ ತೆರೆಗೆ ತರಲಿದ್ದಾರೆಂಬ ಮಾತುಗಳು ಬಿಟೌನ್ ನಲ್ಲಿ ಕೇಳಿಬರುತ್ತಿವೆ.

ನಿರ್ಮಾಪಕ ಸಾಜಿದ್ ನಾಡಿಯದ್ವಾಲಾ ಕಳೆದ ವರ್ಷದಿಂದಲೇ ‘ಕಿಕ್-2’ ಚಿತ್ರಕಥೆ ಬರೆಯುತ್ತಿದ್ದು, ಅದೀಗ ಅಂತಿಮಗೊಂಡಿದೆಯಂತೆ.

ಸಲ್ಮಾನ್ ಹಾಗೂ ಜಾಕ್ಲಿನ್ ಫರ್ನಾಂಡೀಸ್ ಮತ್ತೊಮ್ಮೆ ತೆರೆಗೆ ಬರಲು ತಯಾರಾಗಿದ್ದು, ನಿರ್ಮಾಪಕರು ಸಹ ರೋಹಿತ್ ಶೆಟ್ಟಿ ಅವರೊಂದಿಗೆ ‘ಕಿಕ್-2’ ಚಿತ್ರದ ಕುರಿತು ಮಾತುಕತೆ ನಡೆಸಿದ್ದಾರೆ.

ಮೊದಲ ಭಾಗದಲ್ಲಿ ಪೂರ್ಣಗೊಂಡಿರುವ ಕಥೆಯಿಂದಲೇ ಎರಡನೇ ಭಾಗ ಮುಂದುವರೆಯಲಿದೆ. ಇದೊಂದು ಆ್ಯಕ್ಷನ್ ಹಾಗೂ ರಹಸ್ಯ ಭರಿತ ಚಿತ್ರವಾಗಿದೆಯಂತೆ.

Leave a Comment