ಕಾಸಿಯಾ ಕಾರ್ಯಾಗಾರ, ಸಂವಾದ ನಾಳೆ

 

ಕಲಬುರಗಿ ನ 21: ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ( ಕಾಸಿಯಾ ) ವತಿಯಿಂದ ನಾಳೆ ( ನ 22) ಕಲಬುರಗಿಯ ಎಚ್‍ಕೆಸಿಸಿಐ ಸಭಾಂಗಣದಲ್ಲಿ  ಬೆಳಗ್ಗೆ 11.30ಕ್ಕೆ ರಫ್ತುಗಳು, ವಿದೇಶಿ ವ್ಯಾಪಾರ ನೀತಿ ಮತ್ತು ಕಾರ್ಯವಿಧಾನಗಳು ಕುರಿತ ಕಾರ್ಯಾಗಾರವೊಂದನ್ನು ಆಯೋಜಿಸಲಾಗಿದೆ.

ಮಧ್ಯಾಹ್ನ 3 ಗಂಟೆಗೆ ಸ್ಥಳೀಯ ಉದ್ಯಮದ ಮುಖಂಡರು ಮತ್ತು ಕೈಗಾರಿಕಾ ಸಂಘಗಳ ಸದಸ್ಯರೊಂದಿಗೆ ಎಸ್.ಎಂ.ಇ. ವಲಯದ ಸಮಸ್ಯೆಗಳ ಕುರಿತು ಸಂವಾದ ಸಭೆಯನ್ನು ಆಯೋಜಿಸಲಾಗಿದೆ ಎಂದು ಕಾಸಿಯಾ ಅಧ್ಯಕ್ಷ ಆರ್ ರಾಜು ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರಾದ ಜಗದೀಶ್ ಶೆಟ್ಟರ್, ಕಲಬುರಗಿ ಸಂಸತ್ ಸದಸ್ಯರಾದ ಡಾ. ಉಮೇಶ್ ಜಾಧವ್, ಪ್ರಮುಖ ಅಧಿಕಾರಿಗಳಾದ ಕೆಎಸ್‍ಎಸ್‍ಐಡಿಸಿ ವ್ಯವಸ್ಥಾಪಕ ನಿರ್ದೇಶಕ  ಮಹೇಶ್ ಬಿ ಶಿರೂರ್, ಎಎಫ್‍ಎಸ್, ಡಿಜಿಎಫ್‍ಟಿ ಉಪ ನಿರ್ದೇಶಕರಾದ ಡಾ. ಬಿ ಪುನ್ನಮ್ ಕುಮಾರ್,ಕಲಬುರಗಿ ಎಚ್‍ಕೆಸಿಸಿಐ ಅಧ್ಯಕ್ಷರಾದ ಅಮರನಾಥ ಪಾಟೀಲ್, ಕಲಬುರಗಿಯ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ   ಮಾಣಿಕ್ ವಿ. ರಾಘೋಜಿ, ಎನ್‍ಎಸ್‍ಐಸಿ ಹಿರಿಯ ಶಾಖಾ ವ್ಯವಸ್ಥಾಪಕರಾದ ಆನಂದ್‍ಕುಮಾರ್ ವಿ. ಎನ್‍ಎಸ್‍ಐಸಿ-ಎನ್‍ಎಸ್‍ಎಸ್‍ಎಚ್‍ಒ ಶಾಖಾ ಮುಖ್ಯಸ್ಥರಾದ  ಕೋಮಲ ಅವರನ್ನು ಕಾರ್ಯಾಗಾರದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ.

ಸಂವಾದ:

ಉದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸ್ಥಳೀಯ ಕೈಗಾರಿಕೋದ್ಯಮಿಗಳೊಂದಿಗೆ ಸಂವಾದ ಸಭೆ ಹಮ್ಮಿಕೊಳ್ಳಲಾಗಿದೆ. ಈ ಸಂವಾವವು  ಇಲ್ಲಿನ ಎಸ್‍ಎಸ್‍ಎಂಇಗಳಿಗೆ ತುಂಬಾ ಫಲಪ್ರದವಾಗಲಿದೆ ಎಂದು ಆಶಾಭಾವನೆ ಹೊಂದಿದ್ದೇವೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ  ಕೆ ಬಿ ಅರಸಪ್ಪ ,ಅಮರನಾಥ ಪಾಟೀಲ, ಭೀಮಾಶಂಕರ ಪಾಟೀಲ,ವಿಶ್ವನಾಥಗೌಡರ,ಕೆ ಎನ್ ನರಸಿಂಹಮೂರ್ತಿ, ಎಂಜಿ ರಾಜಗೋಪಾಲ ಅವರು  ಸೇರಿದಂತೆ ಹಲವರು ಉಪಸ್ಥಿತರಿದ್ದರು..

Leave a Comment