ಕಾಸರಗೋಡು ನಿನ್ನೆ ೧೪ ಮಂದಿಯಲ್ಲಿ ಸೋಂಕು ದೃಢ

ಕಾಸರಗೋಡು, ಮೇ ೨೬- ಜಿಲ್ಲೆಯಲ್ಲಿ ನಿನ್ನೆ ೧೪ ಮಂದಿಗೆ ಕೊರೊನ ಸೋಂಕು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ ೪೯ಕ್ಕೆ ಏರಿಕೆಯಾಗಿದೆ.
ಇವರಲ್ಲಿ ೧೩ ಮಂದಿ ಮಹಾರಾಷ್ಟ್ರದಿಂದ ಆಗಮಿಸಿದವರು. ಒಬ್ಬರು ಕೊಲ್ಲಿ ರಾಷ್ಟ್ರದಿಂದ ಬಂದವರು. ಕೊಲ್ಲಿರಾಷ್ಟ್ರದಿಂದ ಆಗಮಿಸಿದ ೩೮ ವರ್ಷ ಪ್ರಾಯದ ಉದುಮಾ ನಿವಾಸಿಗೆ ಸೋಂಕು ಖಚಿತವಾಗಿದೆ. ಮಹಾರಾಷ್ಟ್ರದಿಂದ ಆಗಮಿಸಿವರಲ್ಲಿ ೮ ಮಂದಿ ಕುಂಬಳೆ ನಿವಾಸಿಗಳು, ಇಬ್ಬರು ವರ್ಕಾಡಿ ನಿವಾಸಿಗಳು, ವರ್ಕಾಡಿ, ಮೀಂಜ, ಉದುಮಾ, ಕುಂಬಡಾಜೆ ನಿವಾಸಿಗಳಾದ ತಲಾ ಒಬ್ಬರು ರೋಗ ತಗುಲಿದವರು. ಇವರಲ್ಲಿ ೬ ಮಂದಿ ಮೇ ೧೮ರಂದು ಮುಂಬೈಯಿಂದ ಆಗಮಿಸಿದವರು. ಇವರು ಕುಂಬಳೆ ನಿವಾಸಿಗಳಾದ ೫೭, ೬೨, ೫೨, ೬೦, ೨೬ ವರ್ಷದವರು. ಕುಂಬಡಾಜೆ ನಿವಾಸಿ ೫೨ ವರ್ಷ ಪ್ರಾಯದವರು. ಪುಣೆಯಿಂದ ಆಗಮಿಸಿದ ೩೩, ೪೫ ವರ್ಷದವರಿಗೆ ಸೋಂಕು ಖಚಿತವಾಗಿದೆ. ಮುಂಬೈಯಿಂದ ಬಂದ ೩೦, ೪೭ ವರ್ಷದ ಸಹೋದರರಿಗೆ, ಮುಂಬೈಯಿಂದ ಆಗಮಿಸಿದ ೫೪ ವರ್ಷದ ವರ್ಕಾಡಿ ನಿವಾಸಿಗೆ, ೫೦ ವರ್ಷದ ಮೀಂಜ ನಿವಾಸಿಗೆ, ಬೆಂಗಳೂರಿನಿಂದ ಆಗಮಿಸಿದ ೩೮ ವರ್ಷದ ಉದುಮಾ ನಿವಾಸಿಗೆ ಸೋಂಕು ಖಚಿತವಾಗಿದೆ. ೬ ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. ಕಾಸರಗೋಡು ನಗರಸಭೆಯ ನಿವಾಸಿ ೬೬ ವರ್ಷದ ವ್ಯಕ್ತಿ, ಪೈವಳಿಕೆ ನಿವಾಸಿಗಳಾದ ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಕಳ್ಳಾರ್ ನಿವಾಸಿ ಗುಣಮುಖರಾಗಿದ್ದಾರೆ.

Share

Leave a Comment