ಕಾಸರಗೋಡು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಕನ್ನಡತಿ ನೇಮಕ

ಕಾಸರಗೋಡು, ಮೇ ೩೧- ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಎಸ್.ಸಾಬು ರವರನ್ನು ದಿಢೀರ್ ವ ರ್ಗಾವಣೆ ಮಾಡಲಾಗಿದ್ದು, ಅವರ ಬದಲಿಗೆ ಕರ್ನಾಟಕ ಮೂಲದ ಡಿ.ಶಿಲ್ಪಾರನ್ನು ನೇಮಿಸಲಾಗಿದೆ. ಶಿಲ್ಪಾಜಿಲ್ಲೆಯ ಪ್ರಥಮ ಮಹಿಳಾ ಎಸ್ಪಿಯಾಗಿದ್ದಾರೆ.

ಮಾರ್ಚ್‌ನಲ್ಲಿ ಕಾಸರಗೋಡು ಎಸ್ಪಿಯಾಗಿ ನಿಯುಕ್ತಿಗೊಂಡಿದ್ದ ಸಾಬು ಅವರನ್ನು ಇದೀಗ ಆಲಪ್ಪುಝ ಜಿಲ್ಲೆಗೆ ವರ್ಗಾಯಿಸಲಾಗಿದೆ. ಶಿಲ್ಪಾ ಅವರು ಈ ಹಿಂದೆ ಕಾಸರಗೋಡು ಎಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು. 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಣ್ಣೂರು ಎಎಸ್ಪಿಯಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.

Share

Leave a Comment