ಕಾಶ್ಮೀರದ ರೋಚಕ ಕಹಾನಿ ಕೊಲೆಯ ಸುತ್ತಿನ ಥ್ರಿಲ್ಲರ್,ಸಸ್ಪೆನ್ಸ್

ಮಾಜಿ ಸಚಿವೆ ಬಿ.ಟಿ ಲಲಿತಾನಾಯಕ್ ಮತ್ತೆ ನಿರ್ಮಾಣಕ್ಕೆ ಇಳಿದಿದ್ದಾರೆ. ಬಿ.ಟಿ.ಎಲ್. ಫಿಲ್ಮ್ಸ್ ಲಾಂಛನದಲ್ಲಿ “ಬೆಂಗಳೂರು ಟು ಕಾಶ್ಮೀರ್” ಚಿತ್ರ ಕೈಗೆತ್ತಿಕೊಂಡಿದ್ದಿ ಅರ್ಧದಷ್ಟು ಚಿತ್ರೀಕರಣ ಪೂರ್ಣಗೊಂಡಿದೆ.

ಬಿ.ಟಿ ಲಲಿತಾನಾಯಕ್ ಪುತ್ರ ಓಂ ಪ್ರಕಾಶ್ ರಾವ್ ನಿರ್ದೇಶನ ಮಾಡುವ ಜೊತೆಗೆ ನಾಯಕನಾಗಿ ನಟಿಸುತ್ತಿರುವ ಬೆಂಗಳೂರು ಟು ಕಾಶ್ಮೀರ ಚಿತ್ರ ಅರ್ಧದಷ್ಟು ಚಿತ್ರೀಕರಣ ಪೂರ್ಣಗೊಳಿಸಿದ್ದು, ಉಳಿದರ್ಧ ಬೆಂಗಳೂರು ಸುತ್ತ ಮುತ್ತ ಚಿತ್ರೀಕರಿಸುವ ಉದ್ದೇಶವೊಂದಲಾಗಿದೆ.

ಕಾಶ್ಮೀರದ ಸೋನ್ ಮಾರ್ಗ್ ಡಲ್ ಲೇಕ್ ಸುತ್ತ ಮುತ್ತ ಚಿತ್ರೀಕರಣ ನಡೆಸಿ ಸುಮಾರು ೫೦ ಭಾಗದಷ್ಟು ಚಿತ್ರೀಕರಣ ಪೂರೈಸಿದೆ. ಉಳಿದ ೫೦ ಭಾಗದ ಚಿತ್ರೀಕರಣವನ್ನು ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ನಡೆಸಲು ನಿರ್ಧರಿಸಲಾಗಿದೆ.
ಲಲಿತಾನಾಯಕ್ ಅವರ ಪುತ್ರ ಓಂ ಪ್ರಕಾಶ್ ನಾಯಕ್ ಕಥೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದು ಓಂಪ್ರಕಾಶ್ ಅವರೊಂದಿಗೆ ಜಯಸೂರ್ಯ, ಉಮಾದೇವಿ, ಸ್ವಪ್ನ, ರಮ್ಯ, ಅಶ್ವಿನಿ, ಪ್ರಿನ್ಸ್, ಬಳ್ಳಾರಿ ಮಂಜುಳಮ್ಮ ಮತ್ತಿತರಿದ್ದಾರೆ.ಚಿತ್ರಕ್ಕೆ ಕುಮಾರ್ ಛಾಯಾಗ್ರಹಣ, ಓಂ ಪ್ರಕಾಶ್ ಸಾಹಿತ್ಯವಿದೆ. ಮುಂತಾದವರ ತಾರಾಬಳಗವಿದೆ.
ಮದುವೆಯಾಗಲು ಇಷ್ಟವಿಲ್ಲದಿದ್ದರೂ ಕಂಡ ಕಂಡ ಹುಡುಗಿಯರಿಗೆ ಫ್ಲರ್ಟ್ ಮಾಡುವ ಸ್ವಭಾವದ ಹುಡುಗ ಆತ. ಇಂಥವನಿಗೆ ಇಷ್ಟವಿಲ್ಲದಿದ್ದರೂ ಮನೆಯಲ್ಲಿ ಆತನ ತಾತ ಬಲವಂತದಿಂದ ಮತ್ತೊಂದು ಹೆಣ್ಣನ್ನು ತಂದು ಮದುವೆ ಮಾಡಿಬಿಡುತ್ತಾರೆ. ಹಾಗೆ ಮದುವೆಯಾದ ಜೋಡಿಯನ್ನು ಕಾಶ್ಮೀರಕ್ಕೆಂದು ಕಳಿಸುತ್ತಾರೆ. ಆದರೆ ಆತ ಕಾಶ್ಮೀರಕ್ಕೆ ಕರೆದೊಯ್ದು ಹುಡುಗಿಯನ್ನು ಕೊಲೆ ಮಾಡಲು ಸ್ಕೆಚ್ ರೂಪಿಸುತ್ತಾನೆ. ಈ ತೀರಿಯಲ್ಲಿ ಸಾಗುವ ಕಥೆ ಅನೇಕ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿದೆ. ಊಹೆಗೂ ನಿಲುಕದ ಟ್ವಿಸ್ಟ್‌ಗಳು ಈ ಚಿತ್ರದಲ್ಲಿದ್ದು ಒಳ್ಳೆಯ ಚಿತ್ರ ಮಾಡುವ ಉದ್ದೇಶ ನಿರ್ದೇಶಕರದ್ದು.

Leave a Comment