ಕಾಶ್ಮೀರದಿಂದ ಬಂದ ಲೀಡರ್

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಲೀಡರ್ ಚಿತ್ರ ತಂಡ ಇದೀಗ ಕಾಶ್ಮೀರದ ರಮಣೀಯ ಸ್ಥಳಗಳಲ್ಲಿ ಹದಿನಾರು ದಿನಗಳ ಕಾಲ ಹಾಡು, ಸಾಹಸ ಸನ್ನಿವೇಶ ಸೇರಿದಂತೆ ಮಾತಿನ ಭಾಗದ  ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿಕೊಂಡು ವಾಪಾಸಾಗಿದೆ. ಇದರಿಂದ ಚಿತ್ರೀಕರಣ ಬಹುತೇಕ ಮುಗಿದಿದೆ.

ಶಿವರಾಜ್ ಕುಮಾರ್, ಬೇಬಿ ಪರಿಣಿತಾ, ವಿಜಯ್ ರಾಘವೇಂದ್ರ, ಗುರು ಜಗ್ಗೇಶ್, ಪ್ರಣೀತ, ಆಶಿಕಾ ವಂಶಿಕೃಷ್ಣ, ಲಹರಿ ವೇಲು ಸೇರಿದಂತೆ ಮೂವತ್ತು ಮಂದಿ ಫ಼ೈಟರ್‍ಸ್‌ಗಳನ್ನೊಳಗೊಂಡ ನೂರಿಪ್ಪತ್ತು ಜನರ ತಂಡ ಚಿತ್ರೀಕರಣಕ್ಕೆ ಕಾಶ್ಮೀರಕ್ಕೆ ತೆರಳಿತ್ತು.

ಕಾಶ್ಮೀರದ ಸುತ್ತಲ ಪ್ರದೇಶಗಳಲ್ಲಿ ಸ್ಥಳೀಯರೂ ಸೇರಿ ಇನ್ನೂರರಿಂದ ಮುನ್ನೂರು ಜನರನ್ನೊಳಗೊಂಡು ಚಿತ್ರೀಕರಣ ನಡೆಸಲಾಗಿದೆ. ಶಿವರಾಜ್ ಕುಮಾರ್ ಅಭಿನಯದಲ್ಲಿ ವಿಜಯ್ ಮಾಸ್ಟರ್ ಸಾಹಸ ಸಂಯೋಜಿಸಿದ ಕೆಲ ಫೈಟ್ ಸೀನ್‌ಗಳನ್ನೂ,ಆಶಿಕಾ ಮತ್ತು ವಂಶಿಕೃಷ್ಣ ನಟನೆಯ ಒಂದು ಹಾಡು ಮತ್ತು ಮಾತಿನ ಭಾಗವನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಪ್ರದೀಪ್ ಅಂತೋನಿ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಚಿತ್ರದ ಒಂದೆರಡು ಹಾಡಿನ ಭಾಗದ ಚಿತ್ರೀಕರಣವಷ್ಟೇ ಬಾಕಿ ಉಳಿದಿದೆ.

ಹಾರ್ದಿಕ್ ತರುಣ್ ಕಂಬೈನ್ಸ್ ಲಾಂಛನದಲ್ಲಿ ತರುಣ್ ಶಿವಪ್ಪ ಮತ್ತು ಹಾರ್ದಿಕ್ ಗೌಡ ಸೇರಿ ನಿರ್ಮಿಸುತ್ತಿರುವ ಚಿತ್ರವನ್ನು ನರಸಿಂಹ(ಸಹನಾ ಮೂರ್ತಿ) ನಿರ್ದೇಶಿಸುತ್ತಿದ್ದಾರೆ. ವೀರಸಮರ್ಥ್ ಸಂಗೀತ, ಗುರುಪ್ರಶಾಂತ್ ರೈ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿದೆ.

Leave a Comment