ಕಾಶ್ಮೀರದಲ್ಲಿ ಮರ್ಡರ್ ಮಿಸ್ಟ್ರಿ ಕೊಲೆಯ ಜಾಡು ಬೆನ್ನತ್ತಿ

ಕನ್ನಡ ಚಿತ್ರರಂಗದಲ್ಲಿ ಆರಕ್ಕೆ ಏರದೆ ಮೂರಕ್ಕೆ ಇಳಿಯದ ಅನೇಕ ನಟ,ನಟಿ, ಕಲಾವಿದರು ತಂತ್ರಜ್ಞರು ಚಿತ್ರರಂಗದಲ್ಲಿದ್ದಾರೆ. ಸಿಕ್ಕ ಅವಕಾಶವನ್ನು ಬಳಸಿಕೊಂಡು ಮುಂದೆ ಬರಲು ಹಾರೊರೆಯುತ್ತಾರೆ. ಅದಕ್ಕೆ ಪೂರಕ ಎನ್ನುವಂತೆ ಕೆಲವರಿಗೆ ಅವಕಾಶ ಸಿಕ್ಕರೆ ಮತ್ತೆ ಕೆಲವರು ಅವಕಾಶದ ಬೆನ್ನು ಹತ್ತಿದ್ದಾರೆ.
ಚಿತ್ರರಂಗದ ಎಲ್ಲಾ ವಿಭಾಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ವಿಭಿನ್ನ ಬಗೆಯ ಚಿತ್ರಗಳನ್ನು ನೀಡುತ್ತಾ ಬಂದಿರುವ ನಟ,ನಿರ್ದೇಶಕ, ನಿರ್ಮಾಪಕ ಓಂ ಪ್ರಕಾಶ್ ಸದ್ದಿಲ್ಲದೆ ಮತ್ತೊಂದು ಚಿತ್ರ ಕೈಗೆತ್ತಿಕೊಂಡಿದ್ದಾರೆ.
ಪ್ರೀತಿಸುವ ಹುಡುಗಿ ಕೊಲೆಯ ಜಾಡು ಹಿಡಿದು ಓಂ ಪ್ರಕಾಶ್. ಬೆಂಗಳೂರಿನಿಂದ ಕಾಶ್ಮೀರಕ್ಕೆ ಬೆನ್ನತ್ತಿ ಹೋಗಿದ್ದಾರೆ.ಅದರಲ್ಲಿ ಅವರು ಯಶಸ್ಸು ಕಾಣುತ್ತಾರೆ ಇಲ್ಲವೇ ಬರಿಗೈಯಲ್ಲಿ ವಾಪಸ್ ಬರುತ್ತಾರೆ ಎನ್ನುವುದನ್ನು ಚಿತ್ರ ನೋಡಿಯೋ ತಿಳಿದುಕೊಳ್ಳಬೇಕು.
ಮಾದೇಶ್ವರ  ಎಂಟರ್ ಪ್ರೈಸಸ್ ಲಾಂಛನದಲ್ಲಿ ಓಂಪ್ರಕಾಶ್ ನಿರ್ಮಿಸುತ್ತಿರುವ ’ಬೆಂಗಳೂರ್ ನಿಂದ ಕಾಶ್ಮೀರ್’ ಚಿತ್ರಕ್ಕಾಗಿ ಕಡೆಯ ದೃಶ್ಯದ ಚಿತ್ರೀಕರಣ  ಮುಕ್ತಾಯಗೊಂಡಿದೆ. ಪೊಲೀಸ್ ಠಾಣೆಯಲ್ಲಿ ಒಂದರಲ್ಲಿ ಪ್ರೀತಿಸಿದ ಹುಡುಗಿ ಆಕಸ್ಮಿಕವಾಗಿ  ಕೊಲೆಯಾಗಿರುತ್ತಾಳೆ. ಆ ಕೊಲೆಯ ಕೇಸು ನಾಯಕನ ಮೇಲೆ ಬರುತ್ತದೆ.
ವಿಚಾರಣೆಗಾಗಿ ಪೊಲೀಸ್ ಸ್ಟೇಷನ್‌ಗೆ ನಾಯಕ ಹಾಗೂ ಸ್ನೇಹಿತನನ್ನು ಕರೆದುಕೊಂಡು ವಿಚಾರಣೆ ಮಾಡುವ ದೃಶ್ಯವನ್ನು ಕಳೆದ ವಾರ ಭೂಮಿಕಾ ಸ್ಟುಡಿಯೋದಲ್ಲಿ ಚಿತ್ರೀಕರಿಸಿಕೊಳ್ಳುವ ಮೂಲಕ ಚಿತ್ರೀಕರಣ ಮುಗಿದಿದೆ. ಇದೀಗ ಚಿತ್ರದ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ.
ಓಂ ಪ್ರಕಾಶ್ ನಾಯಕ್  ಕಥೆ, ಚಿತ್ರಕಥೆ, ಸಾಹಿತ್ಯ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಶಿವಪ್ರಕಾಶ್ ಛಾಯಾಗ್ರಹಣ, ಶಿವಕುಮಾರ್ ಸ್ವಾಮಿ ಸಂಕಲನ, ರಾಜ್ ದೇವ್ ನೃತ್ಯ ನಿರ್ದೇಶನ,  ಮಧುರ ಸಂಗೀತ, ತರ್ಜುನ್ ಶಂಕರ್ ಬಾಬು ಸಹ ನಿರ್ದೇಶನವಿದೆ. ಓಂ ಪ್ರಕಾಶ್ ನಾಯಕ್, ಸ್ಮೈಲ್ ಶಿವು, ಉಮಾದೇವಿ, ಅಶ್ವಿನಿ, ಎಂ.ಡಿ. ಕೌಶಿಕ್, ಭಾಗೀರಥಿ, ಸಾಗರ್, ಬಾಲು ಮುಂತಾದವರ ತಾರಾಬಳಗವಿದೆ.
ಎಲ್ಲಾ ಅಂದುಕೊಂಡಂತೆ ಸದ್ಯದಲ್ಲಿಯೇ ಚಿತ್ರವನ್ನು ಬಿಡುಗಡೆ ಮಾಡಲು ತಂಡ ಮುಂದಾಗಿದೆ.
ಬಾಕ್ಸ್
ಪ್ರೀತಿಸಿದ ಹುಡುಗಿಯ ಕೊಲೆಯ ಸುತ್ತ ಬೆಂಗಳೂರಿನಿಂದ ಕಾಶ್ಮೀರ ಚಿತ್ರವನ್ನು ಕೈಗೆತ್ತಿಕೊಂಡಿದ್ದು ಸದ್ದಿಲ್ಲದೆ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ಚಿತ್ರವನ್ನು ತೆರೆಗೆ ತರಲು ತಂಡ ಮುಂದಾಗಿದೆ.

Leave a Comment