ಕಾಶೇನಟ್ಟಿಯಲ್ಲಿ ಡಿಕೆ ಅಭಿಮಾನಿ ಬಗಳದ ಸಂಭ್ರಮ

ಅಳ್ನಾವರ, ಮಾ 14-  ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಡಿಕೆ ಶಿವಕುಮಾರ ಅಧಿಕಾರ ಸ್ವೀಕರಿಸಿದ ಘಳಿಗೆಯನ್ನು ಸಂಭ್ರಮಿಸಲು ಸಮೀಪದ ಕಾಶೇನಟ್ಟಿ ಗ್ರಾಮದಲ್ಲಿ ಡಿಕೆ ಅಭಿಮಾನಿ ಬಳಗದವರು ಸಂಭ್ರಮಾಚರಣೆ ಹಾಗೂ ಕಡಬಗಟ್ಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ದಸಗೀರಸಾಬ ಹುಣಸೀಕಟ್ಟಿ ಅವರ ಅಭಿನಂಧನಾ ಕಾರ್ಯಕ್ರಮವನ್ನು ಅದ್ದೂರಿಯಾಗಿ ಹಮ್ಮಿಕೊಂಡಿದ್ದರು.
ಗ್ರಾಮದ ಮುಖ್ಯ ಸರ್ಕಲ್ ಬಳಿ ಬೃಹತ್ ಆಕಾರದ ಕೇಕ್ ಕತ್ತಿರಿಸುವ ಮೂಲಕ ಖುಷಿ ವ್ಯಕ್ತಿ ಪಡಿಸಿದ ಡಿಕೆ ಅಭಿಮಾನಿಗಳು, ಡಿಕೆ ಪರ ಘೋಷಣೆ ಕೂಗಿದರು. ಡಿಕೆ ಅವರಿಗೆ ಜಯವಾಗಲಿ ಜಯಘೋಷಗಳು ಮೊಳಗಿದವು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಭಿಮಾನಿಗಳು ಡಿಕೆ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಎರೆದು ತಮ್ಮ ಸಂತಸ ಹಂಚಿಕೊಂಡರು.
ಕಡಬಗಟ್ಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ದಸಗೀರಸಾಬ ಹುಣಸೀಕಟ್ಟಿ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಮಾತನಾಡಿ, ರಾಜಕೀಯವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ದಸಗೀರ ಅವರ ಸೇವೆ ಅವಿಸ್ಮರಣೀಯ. ರಾಜ್ಯದಲ್ಲಿ ಕೂಡಾ ಡಿಕೆ ಅಡಳಿತದಲ್ಲಿ ಹೊಸತನ ಮೂಡಲಿ. ಅಭಿವೃದ್ಧಿಯ ಶಕೆ ಆರಂಭವಾಗಲಿ ಎಂದರು.
ಗ್ರಾಮಸ್ಥರ ಹರ್ಷೊದ್ಘಾರದ ನಡುವೆ ಕಡಬಗಟ್ಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹುಣಸೀಕಟ್ಟಿ ಅವರ ಸನ್ಮಾನ ನಡೆಯಿತು. ಅಭಿಮಾನಿಗಳು ಬೃಹತ್ ಗುಲಾಬಿ ಹೂವಿನ ಮಾಲೆ ಹಾಕಿ ಸನ್ಮಾಸಿ, ರಾಜಕೀಯವಾಗಿ ಇನ್ನೂ ಹೆಚ್ಚು ಕಾರ್ಯ ಮಾಡಿ , ಸುಂದರ ಸಮಾಜ ನಿರ್ಮಿಸಲು ಶ್ರಮಿಸಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿದ ದಸಗೀರಸಾಬ ಹುಣಸೀಕಟ್ಟಿ ಮಾತನಾಡಿ, ಗ್ರಾಮದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ತೃಪ್ತಿ ನನಗಿದೆ. ಕಡಬಗಟ್ಟಿ ಗ್ರಾಮ ಪಂಚಾಯ್ತಿಗೆ ಸರ್ಕಾರದ ಹೆಚ್ಚಿನ ಅನುಧಾನ ತರಲಾಗಿದೆ. ಕಾಶೇನಟ್ಟಿ ಗ್ರಾಮದಲ್ಲಿ ರೂ .50 ಲಕ್ಷ ವೆಚ್ಚದ ಶಾದಿ ಮಹಲ್ ಮಂಜೂರಿ ದೊರೆತಿದೆ. ಸುಸಜ್ಜಿತ್ ಜಿಮ್ , ಚರಂಡಿ ನಿರ್ಮಾಣ , ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಅನುಧಾನ ಮಂಜೂರಿ ಆಗಿದೆ. ರಸ್ತೆಗಳನ್ನು ಅಭಿವೃದ್ದಿ ಮಾಡಲಾಗಿದೆ. ಸ್ಮಶಾನ ಭೂಮಿಗೆ ಕಂಪೌಂಡ ಗೋಡೆ ಕಟ್ಟುವ ಕಾರ್ಯ ಪ್ರಗತಿಯಲ್ಲಿದೆ.  ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ನಿವಾರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದರು.
ಶಿವಶಂಕರ ಗೆನಪ್ಪನವರ, ಆಲಮ್ ಕಸಮಳಗಿ, ಶಿವಲಿಂಗ ಕೊಳದೂರ, ಇಮಾಮಸಾಬ ಮೊಕಾಸಿ, ಈರಪ್ಪ ಬಳ್ಳಾರಿ, ನಾಗಪ್ಪ ವಾಲಿಕರ, ಜೈಪಾಲ ಸತ್ಯನ್ನವರ, ಅಬುಬಕರ ನದಾಫ್, ಜಮಾಲ ಮುನವಳ್ಳಿ, ಅರ್ಜುನ ರತ್ನೋಜಿ, ಹನಮಂತ ಕಿತ್ತೂರ, ಬಾಬುಲಾಲ ಗುಡಿದೂರ, ರಾಜೆಸಾಬ ಮುಜಾವರ, ಕಾಶೀಮಸಾಬ ನಮಾಜವಾಲೆ ಇದ್ದರು.

Leave a Comment