ಕಾವೇರಿ ನೀರಾವರಿ ನಿಗಮ ; ಎಇ ನಿವಾಸ, ಕಛೇರಿ ಮೇಲೆ ಎಸಿಬಿ ದಾಳಿ

ಶ್ರೀರಂಗಪಟ್ಟಣ, ಆ. 17- ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಬಸವರಾಜೇಗೌಡರ ಮನೆ, ಕಚೇರಿ ಸೇರಿದಂತೆ 3 ಕಡೆಗಳಲ್ಲಿ ಎಸಿಬಿ ದಾಳಿ ಮಾಡಿದೆ.
ಎಸ್ಪಿ ಶೇಖರ್ ನಿರ್ದೇಶನದ ಮೇರೆಗೆ ಇನ್ಸ್‍ಪೆಕ್ಟರ್ ವಿನಯ್ ನೇತೃತ್ವದಲ್ಲಿ 10 ಜನರ ತಂಡ ಬೆಳಗಿನ ಜಾವ 5 ಗಂಟೆಗೆ ಏಕಕಾಲದಲ್ಲಿ ದಾಳಿ ಮಾಡಿದೆ.
ಅಕ್ರಮ ಆಸ್ತಿ ಗಳಿಕೆ ಮಾಡಿರುವ ದೂರಿನ ಹಿನ್ನೆಲೆಯಲ್ಲಿ ಕೆ.ಆರ್.ಎಸ್. ಕ್ವಾಟ್ರಸ್‍ನಲ್ಲಿನ ಕಚೇರಿ, ಬೆಂಗಳೂರಿನ ನಿವಾಸದ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ

Leave a Comment